
Strong demand of the public to put the name plate of the bribe money to be paid to the officials

ಲಂಚ, ದಲ್ಲಾಳಿ ಇಲ್ಲದೆ ಆಗಲ್ಲ ಕೆಲಸ ಸಕಾಲ, ಆರ್‌ಟಿಐ, ಆನ್‌ಲೈನ್ ಸೇವೆಗಿಲ್ಲ ಕಿಮ್ಮತ್ತು
ವಿಶೇಷ ವರದಿ….✍️
ಮಾನ್ವಿ: ಸ್ಮಾಶನಕ್ಕೆ ಹೋದ ಹೇಣ ಮತ್ತೆ ಮನೆಗೆ ಬರುವುದಿಲ್ಲ ಹಾಗೂ ಲಂಚಕೋಡದೆ ಸರಕಾರಿ ಕಚೇರಿಯಲ್ಲಿ ಕೆಲಸವಾಗುವುದಿಲ್ಲ ಎನ್ನುವ ನಂಬಿಕೆ ಜನರಲ್ಲಿ ಇದ್ದು ರಾಜ್ಯದ ಜನರಿಗೆ ಸರಕಾರದಿಂದ ಕನಿಷ್ಟ ಮೂಲಭೂತ ಸೌಲಭ್ಯಗಳಾದರು ಅಧಿಕಾರಿಗಳಿಗೆ ಲಂಚ ನೀಡದೆ ಕಚೇರಿಗೆ ಅಲೆದಾಡದೆ ದೊರೆಯಲಿ ಎನ್ನುವ ಉದ್ದೇಶದಿಂದ ಅಂದಿನ ಮಾಜಿ ಮುಖ್ಯಮಂತ್ರಿ ಸದಾನಂದಗೌಡರವರ ದೂರದೃಷ್ಟಿಯ ಫಲವಾಗಿ ಸರಕಾರಿ ಕಚೇರಿಗಳನ್ನು ಸಂಪೂರ್ಣವಾಗಿ ಗಣಕೀಕರಣ ಗೊಳಿಸಿ ಆಡಳಿತವ್ಯವಸ್ಥೆಗೆ ವೇಗವನ್ನು ಕಲ್ಪಿಸುವುದಕ್ಕಾಗಿ ಸಕಾಲದಲ್ಲಿ ಸಮಯದ ಮಿತಿಯಲ್ಲಿ ಸರಕಾರಿ ಸೇವೆಗಳು ಜನರಿಗೆ ಲಂಚ ನೀಡದೆ ದೊರೆಯಲಿ ಎನ್ನುವ ಉದ್ದೇಶದಿಂದ ರಾಜ್ಯ ಸರಕಾರವು 2011ರಲ್ಲಿ ನಾಗರಿಕ ಸಂಬಂಧಿತ ಸೇವೆಗಳಿಗೆ ನಿಗದಿತ ಸಮಯದ ಮಿತಿಯೋಳಗೆ ಕರ್ನಾಟಕ ರಾಜ್ಯದಲ್ಲಿ ನಾಗರಿಕರಿಗೆ ಸೇವೆಯ ಖಾತರಿಯನ್ನು ಒದಗಿಸುವುದಕ್ಕಾಗಿ ಸಕಾಲ ಯೋಜನೆಯನ್ನು ಅಂಗಿಕಾರಿಸಿ 2012 ರಿಂದ ಜಾರಿಗೊಳಿಸಿ ಪ್ರತಿಯೊಂದು ಸೇವೆಗಳಿಗೆ ಕಾಲ ಮಿತಿಯನ್ನು ನಿಗದಿಗೊಳಿಸಲಾಯಿತು. ಪ್ರಮುಖವಾಗಿ ಸಾರ್ವಜನಿಕರಿಗೆ ಪ್ರತಿನಿತ್ಯದ ಅಗತ್ಯವಾದ ಸೇವೆಗಳನ್ನು ಒದಗಿಸುವ ಇಲಾಖೆಯಾದ ಕಂದಾಯ ಇಲಾಖೆಯಲ್ಲಿ ಜಾತಿ ಮತ್ತು ಅದಾಯ ಪ್ರಮಾಣ ಪತ್ರ,ನಿವಾಸ ಪ್ರಮಾಣ ಪತ್ರ,ಜನನ ಮತ್ತು ಮರಣ ಪ್ರಮಾಣ ಪತ್ರ, ಬೆಳೆ ಪರಿಹಾರ,ಹಾಗೂ ಅಂಗವಿಕಲ,ವೃದ್ಯಾಪವೇತನ, ವಿಧಾವ ವೇತನ,ಮನಸ್ವಿನಿ ಸೇರಿದಂತೆ ಅಗತ್ಯವಾದ ಸರಕಾರದ ಮಾಸಿಕ ವೇತನಗಳನ್ನು ,ರೈತರಿಗೆ ಅಗತ್ಯವಾದ ದಾಖಲೆಗಳನ್ನು ಪಡೆಯುವುದಕ್ಕೆ ಸಕಲಾದಲ್ಲಿ ಅವಕಾಶ ಕಲ್ಪಿಸಲಾಯಿತು.
ಈ ವ್ಯವಸ್ಥೆಯಿಂದ ಜನರು ಕಚೇರಿಗೆ ಅಲೆದಾಡದೆ ಹಣವನ್ನು ನೀಡದೆ ನಮಗೆ ಸರಕಾರದ ಎಲ್ಲಾ ಸೇವೆಗಳು ದೊರೆಯುತ್ತವೆ ಎಂದು ಕನಸು ಕಂಡಿದ ಸಾರ್ವಜನಿಕರಿಗೆ ಅದು ಹಗಲುಗನಸು ಕಾಣುತ್ತಿದೇವೆ ಎನ್ನಿಸುವಂತಾಗಿದೆ.
ಕಂದಾಯ ಇಲಾಖೆಯ ಅಧಿಕಾರಿಗಳು ರಂಗೋಲಿ ಕೆಳಗೆ ದೂರುವುದನ್ನು ಕರಗತ ಮಾಡಿಕೊಂಡಿದ್ದು ಸಕಾಲದಲ್ಲಿಯು ಉತ್ತಮ ಫಸಲು ಬೆಳೆಯುವುದು ಹೇಗೆ ಎನ್ನುವುದನ್ನು ಕಂಡುಕೊಂಡಿದ್ದಾರೆ. ಗ್ರಾಮೀಣ ಭಾಗದ ಜನರು ತಮ್ಮ ಸೇವೆಗಳನ್ನು ಪಡೆಯುವುದಕ್ಕೆ ಪ್ರತಿ ಗ್ರಾಮದಲ್ಲಿ ಸರಕಾರವೇ ಅಟಲ್ ಜನಸೇವ ಕೆಂದ್ರಗಳನ್ನು ಹಾಗೂ ಗ್ರಾಮ ಪಂಚಾಯಿತಿಗಳಲ್ಲಿ ಅನಲೈನ್ ಮೂಲಕ ಅರ್ಜಿ ಸಲ್ಲಿಸುವುದಕ್ಕೆ ಅವಕಾಶ ಮಾಡಕೊಡಲಾಗಿದೆ ಹಾಗೂ ಹೋಬಳಿ ಮಟ್ಟದಲ್ಲಿನ ನಾಡಕಚೇರಿಗಳಲ್ಲಿಯು ಫಲಾನುಭಾವಿಗಳು ಅಗತ್ಯ ದಾಖಲಾತಿಗಳೊಂದಿಗೆ ನಿಗದಿತ ಶುಲ್ಕವನ್ನು ನೀಡಿ ಅರ್ಜಿ ಸಲ್ಲಿಸಿದಲ್ಲಿ ನಿಮಗೆ ಕಾಲಮಿತಿಯೋಳಗೆ ಗ್ರಾಮಾಡಳಿತಾಧಿಕಾರಿಗಳು ತಮ್ಮ ಅರ್ಜಿಗಳನ್ನು ಹಾಗೂ ದಾಖಲಾತಿಗಳನ್ನು ಸೇವಕೇಂದ್ರಗಳಲ್ಲಿ ಪಡೆದು ಅವುಗಳನ್ನು ಪರಿಶೀಲಿಸಿ ಪುರಸ್ಕರಿಸಿ ಕಂದಾಯ ನಿರೀಕ್ಷಕರಿಗೆ ಕಳುಹಿಸುತ್ತಾರೆ. ನಂತರ ಕಂದಾಯ ನೀರಿಕ್ಷಕರು ಗ್ರಾಮಾಡಳಿತಾಧಿಕಾರಿಗಳ ವರದಿ ಹಾಗೂ ದಾಖಲೆಗಳನ್ನು ಪರಿಶೀಲಿಸಿ ಅರ್ಜಿಯನ್ನು ಪುರಸ್ಕರಿಸಿ ಉಪತಹಸೀಲ್ದಾರ್ ರವರಿಗೆ ಸಲ್ಲಿಸುತ್ತಾರೆ ನಂತರ ಉಪತಹಸೀಲ್ದಾರರು ಅರ್ಜಿಯ ಜೋತೆಗೆ ಕಂದಾಯ ನೀರಿಕ್ಷಕರು ಗ್ರಾಮಾಡಳಿತಾಧಿಕಾರಿಗಳ ವರದಿ ಹಾಗೂ ದಾಖಲೆಗಳನ್ನು ಪರಿಶೀಲಿಸಿ ನೀವು ನೀಡಿದ ಪ್ರಮಾಣ ಪತ್ರವನ್ನು ಮಂಜೂರು ಮಾಡುತ್ತಾರೆ ಅದನ್ನು ನಂತರ ಸೇವ ಕೇಂದ್ರಗಳ ಮೂಲಕ ಪ್ರಮಾಣ ಪತ್ರಗಳನ್ನು ಪಡೆಯಬಹುದು ಎಂದು ತಿಳಿದು ಕೊಂಡಲ್ಲಿ ನೀವು ಮೂರ್ಖರಾಗಿದೀರಿ ಎಂದೆ ಅರ್ಥ…..!! ನಿಮ್ಮ ಅರ್ಜಿಯು ಕಾಲ ಮಿತಿಯ ನಂತರ ಅನ್ ಲೈನ್ ನಲ್ಲಿ ಪರಿಶೀಲಿಸಿದಲ್ಲಿ ನಿಮ್ಮ ಅರ್ಜಿಯನ್ನು ಪ್ರಾಥಮಿಕ ಹಂತದಲ್ಲಿಯೇ ಗ್ರಾಮಾಡಳಿತಾಧಿಕಾರಿಗಳು ಸಿಲ್ಲಿಯಾದ ಕಾರಣವನ್ನು ನೀಡಿ ನಿಮ್ಮ ಅರ್ಜಿಯನ್ನು ತಿರಸ್ಕಾರ ಮಾಡಿರುತ್ತರೆ ನಿಮ್ಮ ಅರ್ಜಿಯನ್ನು ಯಾಕೆ ತಿರಸ್ಕಾರ ಮಾಡಿದರು ಎನ್ನುವ ಕುತೂಹಾಲವೇನಾದರು ಮೂಡಿದಲ್ಲಿ ತಿಳಿದುಕೊಳ್ಳುವುದಕ್ಕೆ ನಿಮ್ಮ ಗ್ರಾಮದ ಆಡಳಿತಾಧಿಕಾರಿ ನಿಮ್ಮ ಗ್ರಾಮಕ್ಕೆ ಬರುವುದೆ ಇಲ್ಲ ಎಕೆಂದರೆ…? ನಿಮ್ಮ ಗ್ರಾಮಲೇಕಾಧಿಕಾರಿಗೆ ಗ್ರಾಮದಲ್ಲಿ ಸರಕಾರದವತಿಯಿಂದ ಕಚೇರಿ ನೀಡಿಲ್ಲ ಕೇಲಸಮಾಡುವುದಕ್ಕೆ ಕಂಪ್ಯೂಟರ್ ನೀಡಿಲ್ಲ ಸಹಾಯಕರನ್ನು ನೀಡಿಲ್ಲ ಮೂಲಭೂತ ಸೌಲಭ್ಯಗಳೇ ಇಲ್ಲದೆ ಇರುವುದರಿಂದ ಗ್ರಾಮಕ್ಕೆ ಬರುವುದೆ ಇಲ್ಲದಿರುವುದರಿಂದ ತಾಲೂಕು ಕೇಂದ್ರಗಳಲ್ಲಿ ಹುಡುಕಿದಾಗ ಸಿಕ್ಕಲ್ಲಿ ಅವರ ಹತ್ತಿರ ನಿಮ್ಮ ಅರ್ಜಿಯ ಬಗ್ಗೆ ಹೇಳಿದಲ್ಲಿ ಅವರು ಹೌದ ಅದು ನಿಮ್ಮದ ಸರಿ ಇನ್ನೋಮ್ಮೆ ಅರ್ಜಿ ಹಾಕಿ ಮಾಡಿಕೊಡುತೇನೆ ಎಂದು ಹೇಳಿದನ್ನು ನಂಬಿದಲ್ಲಿ ಮತ್ತೆ ಮೊದಲಿನಂತೆ ಪುನರಾವರ್ತನೆ ಯಾಗುತ್ತದೆ.
ಕಪ್ಪು ಕಾಣಿಕೆಯನ್ನು ಒಪ್ಪಿಸಿ
ನೀವು ನೀಡಿದ ಅರ್ಜಿ ಸ್ವಿಕೃತವಾಗಿ ನಿಮಗೆ ಬೇಕಾದ ಪ್ರಮಾಣ ಪತ್ರ ಬೇಕಾದಲ್ಲಿ ನೀವು ಮೊದಲು ಗ್ರಾಮದ ಮಿನಿ ಕಂದಾಯಧಿಕಾರಿ ಓಲೇಕಾರರವರನ್ನು ಭೇಟಿ ಮಾಡಿ ಅವರಿಗೆ ನಿಮ್ಮ ಅರ್ಜಿ ಮತ್ತು ಕಪ್ಪು ಕಾಣಿಕೆಯನ್ನು ಒಪ್ಪಿಸಿ ಸಂತೃಪ್ತಿ ಮಾಡಿದಲ್ಲಿ ಅವರು ನಿಮ್ಮಗೆ ಅಯ್ತು ನಿಮ್ಮ ಅರ್ಜಿಯನ್ನು ಹಾಕುತ್ತೇನೆ ನಿಮಗೆ ಪ್ರಮಾಣ ಪತ್ರ ಕೋಡಿಸುತೇನೆ ಎಂದು ಅಭಯ ನೀಡಿದ ನಂತರ ನಿಮ್ಮ ಬೇಟಿ ಗ್ರಾಮಾಡಳಿತಾಧಿಕಾರಿಗಳೊಂದಿಗೆ ನಡೆಯುತ್ತದೆ ಅವರಿಗೆ ತಿರ್ಥ ಪ್ರಸಾದ ನೈವಿದ್ಯ ಸಮರ್ಪಿಸಿ ನಿಮ್ಮ ಶಕ್ತö್ಯನುಸಾರ ಕಾಣಿಕೆಯನ್ನು ಸಮರ್ಪಿಸಿ ನಂತರ ಕಂದಾಯ ನಿರೀಕ್ಷಕರಿಗೆ ಹಾಗೂ ಉಪತಹಸೀಲ್ದಾರ್ ರವರಿಗೆ ಸಲ್ಲಬೇಕಾದ ಮುಡುಪನ್ನು ನೀಡಿದಲ್ಲಿ ಕೆಲವೇ ದಿನಗಳಲ್ಲಿ ನಿಮ್ಮಗೆ ಅಗತ್ಯವಾದ ಪ್ರಮಾಣ ಪತ್ರ ನಿಮ್ಮ ಕೈಯಲ್ಲಿರುತ್ತದೆ.
ತಾಲೂಕಿನ ಜನರಿಗೆ ಸರಕಾರದ ಯಾವುದೆ ಸೌಲಭ್ಯಗಳು ದೊರೆಯುತ್ತಿಲ್ಲ ಸರಕಾರದ ಕನಿಷ್ಟ ಅಗತ್ಯ ಸೌಲಭ್ಯಗಳಾದರು ಬಡಜನರಿಗೆ ತಲುಪಲಿ ಎನ್ನುವ ಉದ್ದೇಶದಿಂದ ರಾಜ್ಯ ಸರಕಾರ ಜನರ ಮನೆಯ ಬಾಗಿಲಿಗೆ ವಿವಿಧ ಇಲಾಖೆಗಳ ಸೇವೆಗಳನ್ನು ತಲುಪಿಸುವುದಕ್ಕಾಗಿ ಹೋಬಳಿ ಮಟ್ಟದಲ್ಲಿ ಜನಸಂರ್ಪ ಸಭೆ, ಕಂದಾಯ ಅದಾಲತ್, ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ, ಎನ್ನುವ ಕಾರ್ಯಕ್ರಮಗಳಲ್ಲದರು ನಮ್ಮ ಸಮಸ್ಯೆಗಳನ್ನು ಜಿಲ್ಲಾಧಿಕಾರಿಗಳಿಗೆ ,ಶಾಸಕರಿಗೆ ಹೇಳಿ ಕೊಳ್ಳೋಣ ಎಂದು ಅನಿಸಿದರೆ ಅಲ್ಲಿಕೂಡ ನೀವು ಮೋಸಹೋಗುತ್ತಿರ ತಹಸೀಲ್ದಾರರು ಹೆಚ್ಚಿನ ಅದಾಯ ಬರುತ್ತಿರುವ ಹೆಚ್ಚು ಲಂಚವನ್ನು ನೀಡುವ ನೀರಾವರಿ ಸೌಲಭ್ಯ ಇರುವ ಗ್ರಾಮಗಳಲ್ಲಿ ಇಂತಹ ಜನಸಂಪರ್ಕ ಕಾರ್ಯಕ್ರಮವನ್ನು ನಡೆಸುವುದಿಲ್ಲ ನೀರಾವರಿ ಇಲ್ಲದೆ ಇರುವ ಮಳೆಯಾಶ್ರಿತ ಬಡ ರೈತರು,ಜನರಿರುವ ಕಡೆ ಮಾತ್ರ ಜನಸಂಪರ್ಕ ಕಾರ್ಯಕ್ರಮಗಳನ್ನು ನಡೆಸಲಾಗುತ್ತದೆ ಅದರಲ್ಲಿಯು ಇಂತಹ ಹೆಚ್ಚಿನ ಕಾರ್ಯಕ್ರಮಗಳಲ್ಲಿ ಜಿಲ್ಲಾಧಿಕಾರಿಗಳು ಹಾಗೂ ಶಾಸಕರು ಭಾಗವಹಿಸುವುದು ಕೂಡ ಅಪರೂಪವಾಗಿದ್ದು ತಾಲೂಕು ಮಟ್ಟದ ಅಧಿಕಾರಿಗಳು ಕಾಟಚಾರಕ್ಕೆ ಎನ್ನುವಂತೆ ಬಂದುಹೋಗುತ್ತಾರೆ.
ಬಿಳಿ ಅಂಗಿ ತೋಡುವರು ಪಾಲುದಾರರು
ಗ್ರಾಮೀಣ ಭಾಗದ ಹೆಚ್ಚಿನ ಜನರು ಅನಾಕ್ಷರಾಸ್ಥರಾಗಿರುವುದರಿಂದ ಹೆಚ್ಚಿನ ಸಮಸ್ಯೆಗಳ ಬಗ್ಗೆ ಅರ್ಜಿಗಳೆ ಬರುವುದಿಲ್ಲ. ಪ್ರತಿ ತಾಲೂಕು ಕಚೇರಿಯಲ್ಲಿ ಸಕಾಲ ಸೇವ ಸಖಿ ಕೇಂದ್ರಗಳನ್ನು ಅಯೋಜನೆ ಮಾಡಿಲ್ಲ. ಸಾರ್ವಜನಿಕ ಸಂಪರ್ಕಧಿಕಾರಿಗಳ ನೇಮಕ ಮಾಡಿಲ್ಲ .ಕಂದಾಯ ಅಧಿಕಾರಿಗಳ ಇಂತಹ ಜನವಿರೋಧಿ ನೀತಿಗಳಿಂದಾ ಬೇಸತ್ತಿರುವುದರಿಂದ ಗ್ರಾಮಗಳಲ್ಲಿ ಜನರಿಗೆ ಅಗತ್ಯ ಸೇವೆಗಳನ್ನು ಮಾಡಿಸಿಕೊಡುವುದಕ್ಕಾಗಿ ಬಿಳಿ ಅಂಗಿ ತೋಡುವ ಹತ್ತಾರು ನಾಯಕರು ಹುಟ್ಟಿಕೊಂಡಿದ್ದು ಗ್ರಾಮಾಡಳಿತಾಧಿಕಾರಿಗಳೊಂದಿಗೆ ಉತ್ತಮ ಸೌಹಾರ್ಧ ಸಂಬಂದಗಳನ್ನಿಟ್ಟುಕೊಂಡು ಅವರ ಬೇಕು ಬೇಡಗಳನ್ನು ನೋಡಿಕೊಂಡು ಜನರ ಕೇಲಸಗಳನ್ನು ಮಾಡಿಸಿಕೊಡುವುದಕ್ಕೆ ಜನರಿಂದ ಸಾವಿರಾರು ರೂಪಾಯಿ ಹಣವನ್ನು ಪಿಕುತ್ತಿದ್ದಾರೆ.ಅದರಲ್ಲಿ ಸ್ವಲ್ಪ ಹಣದ ಪಾಲನ್ನು ಅಧಿಕಾರಿಗಳಿಗೆ ನೀಡಿ ಪ್ರಮಾಣ ಪತ್ರವನ್ನು ಮಾಡಸಿಕೊಡುತ್ತಾರೆ.
ಬಾಕ್ಸ್ ಸುದ್ದಿ…..
ಯಾವ ಪ್ರಮಾಣಪತ್ರಕ್ಕೆ ಎಷ್ಟು ರೇಟ್?
ಗೋಮಾಳ ಮಂಜೂರಾತಿ ಪ್ರಮಾಣಪತ್ರಕ್ಕೆ 10-25 ಸಾವಿರ ರೂ.
2003ಕ್ಕಿಂತ ಹಳೆಯ ಪಹಣೆ, ಮ್ಯುಟೇಷನ್ 15-20 ಸಾವಿರ ರೂ.
ಜಮೀನಿನ ಆಕಾರ ಬಂದ್ ಟಿಪ್ಪಣಿ ನಕ್ಷೆ ವೋಡಿ ಪಡಿಹಿತ ಹಳೇ ದಾಖಲಾಗೆ 25 ಸಾವಿರ ರೂ.
ಜನನ-ಮರಣ ಪ್ರಮಾಣ ಪತ್ರಕ್ಕೆ 1,000 ದಿಂದ 2000 ಸಾವಿರ ರೂ.
ಪರಿಶಿಷ್ಟರ ಜಾತಿ ಆದಾಯ ಪ್ರಮಾಣಪತ್ರಕ್ಕೆ 2000 ದಿಂದ 3000ಸಾವಿರ ರೂ.
ಸರಕಾರದ ವಿವಿಧ ಮಾಸಿಕ ವೇತನ ಪಡೆಯುವುದಕ್ಕೆ ಅಂದಾಜು 3 ಸಾವಿರದವರೆಗೂ ಹಣ ನೀಡಬೇಕಾಗುತ್ತದೆ ಎಂದು ಜನರು ಮಾತಡಿಕೊಳ್ಳುತ್ತಿರುವುದು ಸುಳ್ಳಲ್ಲ.
ನೀವು ಮತ ನೀಡಿದ ಗ್ರಾಮ ಪಂಚಾಯಿತಿ ಸದಸ್ಯೆ,ತಾ.ಪಂ.ಸದಸ್ಯೆ ,ಜಿಲ್ಲಾ ಪಂಚಾಯತಿ ಸದಸ್ಯ, ಶಾಸಕರು,ಸಂಸದರು,ವಿಧಾನಪರಿಷತ್ ಸದಸ್ಯರು ನಿಮ್ಮ ಸಮಸ್ಯೆಗಳನ್ನು ಕೇಳಿ ಪರಿಹಾರಿಸುವುದಕ್ಕೆ ಅವರಿಗೆ ಅಗತ್ಯ ಸಮಯವೇ ಇಲ್ಲ ನಿಮಗೆ ಅವರು ಕಾಣಿಸಿಕೊಳ್ಳುವುದು ಮತ್ತೆ ಚುನಾವಣೆ ಸಮಯದಲ್ಲಿ ಮಾತ್ರ.
ಜನರು ಲಂಚ ನೀಡದೆ ಇದ್ದಲ್ಲಿ ನಮ್ಮ ಕೇಲಸಗಳು ಅಗುವುದಿಲ್ಲ ಎಂದು ತಿರ್ಮಾನಿಸಿದ್ದು ಎಲ್ಲಾ ಕಚೇರಿಗಳಲ್ಲಿ ಸಕಾಲದ ಸೂಚನೆ ಫಲಕದೊಂದಿಗೆ ನಿಗದಿತ ಸೇವೆಗಳನ್ನು ಪಡೆಯುವುದಕ್ಕೆ ಅಗತ್ಯವಾಗಿ ಕಡ್ಡಾಯವಾಗಿ ನೀಡಬೇಕಾದ ಲಂಚದ ಮೋತ್ತವನ್ನು ನಮೂದಿಸಿ ಅಧಿಕಾರಿಗಳ ಬ್ಯಾಂಕ್ ಖಾತೆಗಳ ಸಂಖ್ಯೆಯನ್ನು ನೀಡಿದಲ್ಲಿ ಅರ್ಜಿಯೊಂದಿಗೆ ನಿಗದಿತ ಲಂಚದ ಹಣವನ್ನು ಕೂಡ ನೀಡಿ ತಮ್ಮ ಕೆಲಸಗಳನ್ನು ಮಾಡಿಕೊಳ್ಳುವುದಕ್ಕೆ ಅನುಕೂಲವಾಗುತ್ತದೆ ಎಂದು ಜನರು ಒತ್ತಾಯಿಸುತ್ತಿರುವುದರಿಂದ ಸರಕಾರ ಜನರ ಮನವಿಗೆ ಸ್ಪಂದಿಸಿ ಲಂಚದ ದರ ಪಟ್ಟಿಯನ್ನು ಪ್ರದರ್ಶಿಸಿದಲ್ಲಿ ಸಾರ್ವಜನಿಕರು ಅಲೆದಾಡುವುದು ತಪ್ಪುತ್ತದೆ. ಬೇಕಾದರೆ ಲಂಚದ ಹಣಕ್ಕೆ ಜಿ.ಎಸ್.ಟಿ. ಕೂಡ ಹಾಕಿದಲ್ಲಿ ಹೆಚ್ಚಿನ ಅದಾಯ ಸರಕಾರಕ್ಕೆ ಬರುತ್ತದೆ.
ಪ್ರತಿಯೊಬ್ಬ ಸಾರ್ವಜನಿಕರು ಕೂಡ ಸರಕಾರದ ವಿವಿಧ ಇಲಾಖೆಗಳಲ್ಲಿ ನಿಮಗೆ ಅಗತ್ಯವಾದ ಪ್ರಮಾಣ ಪತ್ರಗಳನ್ನು ಪಡೆಯುವುದಕ್ಕೆ ಅರ್ಜಿ ಸಲ್ಲಿಸಿದ ನಂತರ ಅದು ಅಧಿಕಾರಿಯಿಂದ ತಿರಸ್ಕೃತವಾದಲ್ಲಿ,ವಿಳಂಬವಾದಲ್ಲಿ. ತಿರಸ್ಕರಿಸುವುದಕ್ಕೆ ನೀಡಿದ ಕಾರಣ ನಿಮಗೆ ಸರಿಯನಿಸದೆ ಇದಲ್ಲಿ ಮರುಪರಿಶೀಲಿಸುವಂತೆ ಅನ್ ಲೈನ್ ಮೂಲಕ ಅಫೀಲು ಮಾಡಿಕೊಳ್ಳಬಹುದು ಹಾಗೂ ಎರಡು ಬಾರಿ ಮೇಲ್ಮನವಿಯನ್ನು ಸಲ್ಲಿಸುವುದಕ್ಕೆ ಅವಕಾಶವಿದೆ ಆಗ ನೀವು ಅಗತ್ಯ ಪ್ರಮಾಣ ಪತ್ರದೊಂದಿಗೆ ನಿಮ್ಮ ಸೇವ ನ್ಯೂನೆತೆಗಾಗಿ ಅಧಿಕಾರಿಯಿಂದ ವಿಳಂಬ ವೆಚ್ಚವನ್ನು ಪಡೆಯುವುದಕ್ಕೆ ಅವಕಾಶವಿರುವುದರಿಂದ ಹೆಚ್ಚು ಜನರಿಗೆ ಈ ಬಗ್ಗೆ ಜಾಗೃತಿ ಮೂಡಿಸುವ ಅಗತ್ಯವಿದೆ ಆಗ ಮಾತ್ರ ಅಧಿಕಾರಿಗಳಿಗೆ ಲಂಚ ನೀಡದೆ ನಮ್ಮ ಕೆಲಸಗಳನ್ನು ಮಾಡಿಕೊಳ್ಳುವುದಕ್ಕೆ ಸಾಧ್ಯವಾಗುತ್ತದೆ.
ರಾಯಚೂರು ಜಿಲ್ಲೆಯಲ್ಲಿ ದಕ್ಷ ಅಧಿಕಾರಿಗಳೆಂದೆ ಹೆಸರು ಪಡೆದಿರುವ ಯುವ ಅಧಿಕಾರಿಗಳಾಗಿರುವ ಜಿಲ್ಲಾಅಧಿಕಾರಿ ನಿತೀಶ್.ಕೆ, ಹಾಗೂ ಸಾಹಾಯಕ ಅಯುಕ್ತರಾದ ಗಜಾನನ ಬಾಲೆಯವರು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಅನ್ ಲೈನ್ ಮೂಲಕ ಸಲ್ಲಿಕೆಯಾಗಿರುವ ಅರ್ಜಿಗಳ ಸಂಖ್ಯೆ , ತಿರಸ್ಕೃತವಾಗಿರುವ ಅರ್ಜಿಗಳ ಸಂಖ್ಯೆ, ವಿಳಂಬವಾಗುತ್ತಿರುವ ಅರ್ಜಿಗಳ ಸಂಖ್ಯೆ, ಮಂಜೂರಾದ ಪ್ರಮಾಣ ಪತ್ರಗಳ ಸಂಖ್ಯೆಗಳ ನಡುವಿರುವ ಅನುಪತದ ಬಗ್ಗೆ ಪರಿಶೀಲಿಸಿದಲ್ಲಿ ಕಂದಾಯ ಅಧಿಕಾರಿಗಳು ಜನರಿಗೆ ನೀಡುತ್ತಿರುವ ಸೇವೆಯ ಬಗ್ಗೆ ತಿಳಿಯುತ್ತದೆ.
ವರದಿ:ದೇವಿ ಪುರ ದೇವರಾಜ್