Breaking News

ರೈತರಿಗೆಕೃಷಿಪರಿಕಾರಗಳನ್ನು ನೀಡಿದ ಶಾಸಕರಾದ ಎಮ್ಆರ್ ಮಂಜುನಾಥ್.

MLA M R Manjunath who gave agricultural services to the farmers.

ಜಾಹೀರಾತು


ವರದಿ: ಬಂಗಾರಪ್ಪ .ಸಿ .
ಹನೂರು : ರೈತರೆ ನಮ್ಮ ದೇಶದ ಬೆನ್ನೆಲುಬು, ಸರ್ಕಾರವು ಕೃಷಿಗೆ ಹೆಚ್ಚಿನ ಒತ್ತು ಕೊಟ್ಟು ಆಧುನಿಕ ಸ್ಪರ್ಶ ನೀಡಿದರೆ ಆರ್ಥಿಕವಾಗಿ ಸಬಲರನ್ನಾಗಿ ಮಾಡಬಹುದು ಎಂದು ಶಾಸಕ ಮಂಜುನಾಥ್ ಸಲಹೆಯನ್ನು ನೀಡಿದರು .
ಹನೂರು ಪಟ್ಟಣದ ಕೃಷಿ ಇಲಾಖೆಯಲ್ಲಿನ ಆವರಣದಲ್ಲಿ ಆಯೋಜಿಸಿದ ರೈತ ಫಲಾನುಭವಿಗಳಿಗೆ ಪರಿಕಾರಗಳ ವಿತರಣೆ ಸಂದರ್ಭದಲ್ಲಿ ಮಾತನಾಡಿದ
ಶಾಸಕರು ನಮ್ಮ ಜೀವನಾಡಿಯೆ ರೈತರು ನಾವೆಲ್ಲರು ಭೂಮಿಯನ್ನೆ ಆಶ್ರಯಿಸಿ ಜೀವಿಸುತ್ತಿದ್ದೆವೆ .ನಿಮಗೆ ಉಪಯುಕ್ತ ಸಲಕರಣೆ ನೀಡುವುದರಿಂದ ಸಂತೋಷದ ವಿಷಯವಾಗಿದೆ ,ಸಾಕಷ್ಟು ಮಾಹಿತಿ ಕೊರತೆಯಿಂದ ಹಲವಾರು ರೈತರು ಬಂದಿಲ್ಲ ಮುಂದಿನ ದಿನಗಳಲ್ಲಿ ಎಲ್ಲಾರಿಗೂ ತಿಳಿಸಿ , ಇದರಿಂದ ಸದುಪಯೋಗ ಪಡಿಸಿಕೊಳ್ಳಲು ತಿಳಿಸಬೇಕು ,ರಾಷ್ಟ್ರ ನಿರ್ಮಾಣದಲ್ಲಿ ರೈತರ ಪಾತ್ರ ಬಹಳ ಮುಖ್ಯವಾಗಿದೆ ಇದರಿಂದ ನಿರುದ್ಯೋಗ ನಿವಾರಣೆಯಾಗಿದೆ ಹೆಚ್ಚಿನ ತಂತ್ರಜ್ಞಾನದ ಮೂಲಕ ರೈತರ ಬೆಳವಣಿಗೆ ನಾವು ಸಹಕಾರ ನೀಡಬೇಕು , ರೈತರಿಗೆ ನೀರು ಮತ್ತು ವಿದ್ಯುತ್ ನೀಡಿದರೆ ಎಲ್ಲಾ ಸಮಸ್ಯೆಗಳನ್ನು ದೂರ ಮಾಡಿದಂತಾಗುತ್ತದೆ ,ಹಲವಾರು ರೈತರು ತಮ್ಮ ಮಕ್ಕಳು ಇಂಜನಿಯರಿಂಗ್ ವೃತ್ತಿ ಮಾಡಿದರು ಸಹ ತಮ್ಮ ಕಸುಬನ್ನು ಬಿಡುತ್ತಿಲ್ಲ ಇದು ಖುಷಿಯ ವಿಷಯ ಎಂದರು.
ಇದೇ ಸಮಯದಲ್ಲಿ ಮಾತನಾಡಿದ ಕೃಷಿ ಇಲಾಖೆ ಅಧಿಕಾರಿ ರಂಗಸ್ವಾಮಿ ಮಾತನಾಡಿ ರಾಷ್ಟ್ರದ ಲ್ಲೆ ಡಿಜಿಟಲ್ ನೊಂದಣೆಯಲ್ಲಿ ಕರ್ನಾಟಕ ಕೃಷಿ ಇಲಾಖೆಯು ಮುಂದಿದೆ ಇದರಿಂದ ಪಾರದರ್ಶಕತೆಯನ್ನು ಕಾಣಬಹುದು .ಪ್ರತಿ ಹಳ್ಳಿಯಲ್ಲಿರುವ ಎಲ್ಲಾ ರೈತರಿಗೆ ತಲುಪಿಸುವ ಗುರಿ ಹೊಂದಿದೆ ,ಭೂಮಿಯನ್ನು ಸಿದ್ದತೆ ಮಾಡಿಕೊಳ್ಳುವ ಎಲ್ಲಾ ರೀತಿಯ ಸಲಕರಣೆಗಳನ್ನು ನೀಡಲಾಗುತ್ತಿದೆ ಎಂದರು .ಇದೇ ಸಂದರ್ಭದಲ್ಲಿ ಮುಖಂಡರುಗಳಾದ ಮಂಜೇಶ್ ,ರಾಜೂಗೌಡ ,ಪ್ರಮೋದ್ ,ರಮೇಶ್ , ಸಹಾಯಕ ಕೃಷಿ ತಹಶಿಲ್ದಾರರಾದ ಗುರುಪ್ರಸಾದ್ . ಕೃಷಿ ಅಧಿಕಾರಿ ನಾಗೇಂದ್ರ ಎಸ್ ಆರ್ , ಮನೋಹರ್ ವಿ. ಹರಿಶ್ , ಆತ್ಮ ಸಿಬ್ಬಂದಿ ಧರ್ಮೇಂದ್ರ ,ವಿನಯ್ ಎಸ್ ,ಉಪೇಂದ್ರ ಎಸ್ ಎನ್ ನೌಕರರು ,ಆಕಾಶ್ ಚಂದ್ರಶೇಖರ್, ರೈತ ಪಲಾನುಭವಿಗಳು ಸೇರಿದಂತೆ ಇನ್ನಿತರರು ಹಾಜರಿದ್ದರು .

About Mallikarjun

Check Also

ಒಕ್ಕೂಟದ ನೂತನ ನಿರ್ದೇಶಕರಿಂದ ಪ್ರತ್ಯಂಗಿರಾ ದೇವಿಯ ದರ್ಶನ

New director of the union visits Pratyangira Devi ಗಂಗಾವತಿ: ರಾಯಚೂರು ಬಳ್ಳಾರಿ ಕೊಪ್ಪಳ ಮತ್ತು ವಿಜಯನಗರ ಜಿಲ್ಲೆಯ …

Leave a Reply

Your email address will not be published. Required fields are marked *