Breaking News

ಮಹಾಶರಣೆಗುಡ್ಡಾಪುರದ ಶ್ರೀದಾನಮ್ಮ ದೇವಿ

Sridanamma Devi of Mahasharane Guddapur

ಮಹಾ ಮಹಿಮಳಾದ ದಾನಮ್ಮದೇವಿ ಹುಟ್ಟಿದ್ದು; ಈಗಿನ ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಜತ್ ತಾಲೂಕಿನ ಉಮರಾಣಿ ಎಂಬ ಸಣ್ಣ ಗ್ರಾಮದಲ್ಲಿ ಇದು, ಕರ್ನಾಟಕದ ವಿಜಯಪುರದಿಂದ ಉತ್ತರಕ್ಕೆ ಇಪ್ಪತ್ತು ಮೈಲಿ ದೂರದಲ್ಲಿದೆ. ಇವರ ಮೊದಲಿನ ಹೆಸರು ಲಿಂಗಮ್ಮ ಎನ್ನುವುದು. ಬಸವಣ್ಣನವರ ಸಮಕಾಲೀನಳಾದ ಈ ಮಹಿಮಳು ಜೀವಿಸಿದ್ದ ಕಾಲ ಹನ್ನೆರಡನೆ ಶತಮಾನವೇ ಆಗಿದೆ.

ಲಿಂಗಮ್ಮ; ತನ್ನ ಸುತ್ತಮುತ್ತಲಿನ ಜಾತಿ, ಧರ್ಮ, ಲಿಂಗ,ಬಡತನ ಸಿರಿವಂತಿಕೆ ಮೊದಲಾದ ಭೇದ ಭಾವಗಳು ಇರುವ ಸಮಾಜದಲ್ಲಿ ಅಸಮಾನತೆ ತಾಂಡವ ವಾಡುತ್ತಿದ್ದಾಗ ಅದರ ನಿವಾರಣೆಯು ಹೇಗೆಂದು ಬಹುವಾಗಿ ಚಿಂತಿಸಿದಾಕೆ. ಈ ನಿಟ್ಟಿನಲ್ಲಿ ಲಿಂಗಮ್ಮಳನ್ನು ಬಹಳವಾಗಿ ಸೆಳೆದಿದ್ದು ಕಲ್ಯಾಣದ ಅಪ್ಪ ಬಸವಣ್ಣನವರ ಅನುಭವ ಮಂಟಪದ ಚಟುವಟಿಕೆಗಳು.

ಲಿಂಗಮ್ಮ ‘ದೃಷ್ಟಿ ಯೋಗ’ವನ್ನ ಸೊನ್ನಲಿಗೆ ಯ ಸಿದ್ಧರಾಮ ಶಿವಯೋಗಿಯವರಲ್ಲಿ ಪಡೆದುಕೊಳ್ಳುವುದರ ಜೊತೆಗೆ, ಅವರಿಂದ ಅನುಭವ ಮಂಟಪದ ಬಗ್ಗೆಯೂ ಹೆಚ್ಚಿನ ವಿಷಯ ತಿಳಿದು, ತಾನೂ ಅಪ್ಪ ಬಸವಣ್ಣ ನವರನ್ನು ಹಾಗೂ ಅನುಭವ ಮಂಟಪದ ಇತರೆಲ್ಲಾ ಶರಣರನ್ನು ಕಣ್ಣಾರೆ ಕಾಣುವ ಹಂಬಲದಿಂದ, ಕಲ್ಯಾಣಕ್ಕೆ ಹೊರಡುತ್ತಾಳೆ.

ಮಾರ್ಗ ಮಧ್ಯದಲ್ಲಿ ಗುಡಿಸಲೊಂದರಲ್ಲಿ ಹೆಣ್ಣುಮಗಳೊಬ್ಬಳು ರೋಗಗ್ರಸ್ತಳಾಗಿ ಬಿದ್ದುಕೊಂಡಿರುತ್ತಾಳೆ. ಲಿಂಗಮ್ಮನವರು ಆಕೆಯ ಸೇವೆಗೆ ನಿಲ್ಲುತ್ತಾರೆ. ನಂತರದಲ್ಲಿ ಆಕೆಯ ಮನೋರೋಗಕ್ಕೆ ಕಾರಣನಾಗಿ ಮನೆ ತೊರೆದಿದ್ದ ಆಕೆಯ ಗಂಡನ್ನು ಹುಡು ಕಿಸಿ ಕರೆತಂದು, ಮುರಿದಿದ್ದ ಅವರ ಸಂಸಾ ರವನ್ನು ಒಂದು ಮಾಡುತ್ತಾಳೆ. ಈ ದಂಪತಿ ಗಳ ಕೋರಿಕೆಯ ಮೇರೆಗೆ ಲಿಂಗಮ್ಮನವ ರು ಅಲ್ಲಿಯೇ ಕೆಲ ಕಾಲ ಉಳಿದು ಜನಗಳ ಸೇವೆಯಲ್ಲಿ ತೊಡಗುತ್ತಾಳೆ.

ಲಿಂಗಮ್ಮನವರ ನಿಷ್ಕಳಂಕ ಮನೋಭಾವ, ಯಾವುದೇ ಫಲಾಪೇಕ್ಷೆ ಬಯಸದೆ ಜನ ಸೇವೆಯನ್ನು ಮಾಡುವ ರೀತಿ ಶರಣರಾದ ‘ಮೋಳಿಗೆ ಮಾರಯ್ಯ’ನವರ ಗಮನಕ್ಕೆ ಬರುತ್ತದೆ. ಮುಂದೆ ಈ ವಿಚಾರವನ್ನು ಮೋಳಿಗೆ ಮಾರಯ್ಯನವರು ಅನುಭವ ಮಂಟಪದಲ್ಲಿ ಅಪ್ಪ ಬಸವಣ್ಣನವರಿಗೂ ತಿಳಿಸುತ್ತಾರೆ. ಲಿಂಗಮ್ಮನವರ ಈ ಸೇವಾ ಗುಣದ ಬಗ್ಗೆ ಕೇಳಿದ ಅಪ್ಪಬಸವಣ್ಣನವರು ಆಕೆಯನ್ನು ಕಾಣಲು ಆಕೆ ಇದ್ದಲ್ಲೇ ಸ್ವತಃ ಧಾವಿಸಿ ಬರುತ್ತಾರೆ.

ಲಿಂಗಮ್ಮಳ ಸೇವೆಗೆ ಜನರು ಕಾಣಿಕೆಯಾಗಿ ಏನು ಕೊಟ್ಟರೂ ಆಕೆ ಅದನ್ನು ತನ್ನಲ್ಲಿ ಇರಿಸಿಕೊಳ್ಳದೆ ದಾನ ಮಾಡುತ್ತಿರುತ್ತಾಳೆ. ಒಬ್ಬ ಸಾಮಾನ್ಯ ಹಳ್ಳಿ ಗಾಡಿನ ರೈತಾಪಿ ಹೆಣ್ಣು ಮಗಳು ಈ ಪರಿಯ ದಾ ನ ನಿಷ್ಠೆಯಲ್ಲಿ ಮಗ್ನಳಾಗಿರುವುದನ್ನ ಕಂಡು ಅಪ್ಪ ಬಸವಣ್ಣನವರು ಆಕೆಗೆ ‘ದಾನಮ್ಮ’ ಎಂಬ ನಿಜ ಬಿರುದು ನೀಡಿ, ತಮ್ಮಂಥ ಶರಣರ ಅವಶ್ಯಕತೆ ಕಲ್ಯಾಣಕ್ಕೆ ಇದೆಯೆಂದು ಹೇಳಿ ಅವರನ್ನು ಕಲ್ಯಾಣಕ್ಕೆ ಆಹ್ವಾನಿಸುತ್ತಾರೆ.

ದಾನಮ್ಮ ಕಲ್ಯಾಣಕ್ಕೆ ಹೋಗಿ, ಅಲ್ಲಿಯೂ ಕೂಡ ಶರಣರ ಸೇವೆಗೈಯುತ್ತ ಅನುಭವ ಮಂಟಪದಲ್ಲಿ ತನಗಿದ್ದ ಸಂದೇಹಗಳನ್ನು ಶರಣರಲ್ಲಿ ಪ್ರಶ್ನಿಸುತ್ತ ಸೂಕ್ತ ಉತ್ತರಗಳ ನ್ನು ಪಡೆದುಕೊಳ್ಳುತ್ತಾರೆ. ಅಕ್ಕಮಹಾದೇವಿ ಜೊತೆಗೆ ನಡೆಸಿದ ಚರ್ಚೆಯಿಂದ ಪ್ರಭಾವಿತ ರಾಗಿ ಸಂಗಮನಾಥನೆನ್ನುವ ವರನ ಜೊತೆ ಮದುವೆ ಮಾಡಿಕೊಂಡೂ ಜನಸೇವೆಯಲ್ಲಿ ನಿರತರಾಗುತ್ತಾರೆ.

ಮುಂದೆ ಕಲ್ಯಾಣದಲ್ಲಿ ಕ್ರಾಂತಿಯಾಗಿ ಅಪ್ಪ ಬಸವಣ್ಣನವರು ಕೂಡಲಸಂಗಮಕ್ಕೆ ಹೋಗಿ ಅಲ್ಲಿಯೇ ಐಕ್ಯರಾದ ನಂತರ ಆ ಸಂಕಟದ ದಿನಗಳಲ್ಲಿ ದಾನಮ್ಮನವರು; ಶರಣ ಕುಲಕ್ಕೆ ಬಂದೊದಗಿದ ಆಪತ್ತನ್ನು ಕಂಡು ದಿಕ್ಕು ತೋಚದಾಗುತ್ತಾರೆ. ಆಗ ತಮಗೆ ಎಪ್ಪತ್ತು ವರ್ಷ ವಯಸ್ಸಾಗಿದ್ದರೂ ಕೂಡಾ ತಾವೂ ಮನೆ-ಮಠ ತೊರೆದು, ವಚನ ಸಾಹಿತ್ಯದ ರಕ್ಷಣೆಗೆ ಪತಿ ಸಂಗ ಮನಾಥರ ಸಂಗಡ ಖಡ್ಗಹಿರಿದು ಹೋರಾಡಿ, ಆ ವಚನದ ಕಂಪನ್ನು ಜನಮಾನಸದಲ್ಲಿ ಹರಡಲು ಟೊಂಕಕಟ್ಟಿ ನಿಲ್ಲುತ್ತಾರೆ.

ದೇಶ ಸಂಚಾರ ಮಾಡಿ, ದಾನಮ್ಮನವರು ಮತ್ತೆ ಗುಡ್ಡಾಪುರಕ್ಕೇ ಬಂದು, ಅಲ್ಲಿನ ಶ್ರೀ ಸೋಮೇಶ್ವರನಾಥ ದೇವಸ್ಥಾನದಲ್ಲಿ ತಮ್ಮ ದಿನ ನಿತ್ಯದ ಧಾರ್ಮಿಕ ವಿಧಿ ವಿಧಾನಗಳ ನೆರವೇರಿಸುತ್ತಾರೆ. ಅಲ್ಲಿಗೆ ಬಂದ ಭಕ್ತರಿಗೆ ದಾನಧರ್ಮ ಮಾಡುತ್ತ ಅಗತ್ಯವಿದ್ದವರಿಗೆ ಸಹಾಯ ಹಸ್ತ ನೀಡುತ್ತ ಶರಣೆ ದಾನಮ್ಮ ದೇವಿಯವರು ಜನಸೇವೆಯಲ್ಲೇ ಪೂರ್ತಿ ತೊಡಗಿಕೊಳ್ಳುತ್ತಾರೆ.

ತಮ್ಮ ಜೀವಿತ ಕಾಲದಲ್ಲಿ ಶರಣೆ ದಾನಮ್ಮ ದೇವಿಯು ಹಲವಾರು ‘ಪವಾಡ’ ಸದೃಶ್ಯದ ಕಾರ್ಯಗಳ ಮಾಡಿ, ಭಕ್ತರ ಪಾಲಿಗೆ ಕಾಮ ಧೇನುವಾಗಿ ಶರಣರ ದಾಸೋಹದ ಪ್ರತಿ ರೂಪವಾಗಿ, ಜನ ಸಾಮಾನ್ಯರ ಸೇವೆಗೈದು ಗುಡ್ಡಾಪುರದಲ್ಲಿಯೇ ಲಿಂಗೈಕ್ಯಳಾಗುತ್ತಾರೆ

ಮುಂದೆ, ಅವರ ಸಮಾಧಿಯನ್ನ ಯಾದವ ವಂಶದ ಮಹಾದೇವರಾಜ ಅರಸು ಅವರು ದೇವಸ್ಥಾನವಾಗಿ ನಿರ್ಮಿಸುವರು. ಈಗ ಅದು ಟ್ರಸ್ಟ ರಚನೆಯಾಗುವ ಮೂಲಕ ದೇವಸ್ಥಾನದ ಅಭಿವೃದ್ಧಿ ಹಾಗೂ ಭಕ್ತ ಜನರ ಸಹಕಾರದಿಂದ ವಸತಿ ಗೃಹಗಳು ನಿರ್ಮಾಣಗೊಂಡು, ಸಧ್ಯಕ್ಕೆ ಇದೊಂದು ಸುಪ್ರಸಿದ್ಧ ಯಾತ್ರಾ ಸ್ಥಳವಾಗಿ ಪ್ರಸಿದ್ಧಿಯಾ ಗಿದೆ. ಭಕ್ತರ ಪಾಲಿನ ವರದಾನಿ ಎಂದೇ ಕರೆಯಲಾಗುವ ಈ ಶರಣೆ ದಾನಮ್ಮನವ ರು, ಈಗ ದೇವಿಯಾಗಿ; ಮುಗ್ಧ ಭಕ್ತರಿಗೆ ಮಕ್ಕಳಭಾಗ್ಯ, ಕನ್ಯೆಯರಿಗೆ ಕಂಕಣಭಾಗ್ಯ ಕರುಣಿಸುವುದಲ್ಲದೇ, ಜೀವನದಲ್ಲಿ ಜಿಗುಪ್ಸೆ ಹೊಂದಿದವರಿಗೆ ಮಾನಸಿಕ ಶಾಂತಿಯನ್ನು ಕರುಣಿಸುತ್ತಾರೆ ಎಂಬ ಪ್ರತೀತಿ ಜನಮಾನಸದಲ್ಲಿದೆ. ಎಲ್ಲ ವಿಧದ ಭಕ್ತ ಜನತೆ ಇಲ್ಲಿಗೆ ಬರುವ ಮೂಲಕ ದೇವಿಯಲ್ಲಿ ಅರ್ಚನೆ ಸಲ್ಲಿಸಿ ಇಷ್ಟಾರ್ಥ ಸಿದ್ಧಿಗಾಗಿ ಕೋರುತ್ತಾರೆ.

ಪ್ರತಿ ವರ್ಷ ಛಟ್ಟಿ ಅಮವಾಸೆಯಂದು ಸಂಜೆ ರಥೋತ್ಸವ ಜರುಗುವುದು ಹಾಗೂ ಜಾತ್ರೆಗೆ ಮುಂಚಿತವಾಗಿ ಒಂದು ವಾರ ವಿವಿಧ ರೀತಿಯ ಪೂಜಾ ಕಾರ್ಯಗಳಿಲ್ಲಿ ಜರುಗುತ್ತವೆ.

ನಿಜಕ್ಕೂ ಶಿವಶರಣೆಯಾದ ದಾನಮ್ಮ ತಾಯಿ ಈಗ ಹೀಗೆ ಆಧುನಿಕ ಜನಮಾನ ಸದಲ್ಲಿ ದೇವಿಯಾಗಿ ಭಕ್ತಜನರಿಂದ ಪೂಜೆ ಗೊಳ್ಳುತ್ತಿರುವುದು ಸೋಜಿಗದ ಹಾಗೆಯೇ ಸತ್ಯದ ಸಂಗತಿಯೂ ಆಗಿದೆ.

ಮಹಾ ಶರಣೆ ಗುಡ್ದಾಪುರದ ದಾನಮ್ಮ ದೇವಿ (ತಾಯಿ);

#ಲಿಂಗಾಯತ ಧಮ೯ಗುರು ಬಸವಣ್ಣನವರು ಕೊಟ್ಟ ಲಿಂಗಾಯತ ಧರ್ಮವನ್ನು ಆಚರಿಸಿ, ಅನುಭವಿಸಿ, ಪ್ರಚಾರ ಮಾಡಿದರು. ಅಷ್ಟೇ ಅಲ್ಲ, ಅವರೇ ಮೊಟ್ಟ ಮೂದಲು ಕನಾ೯ಟಕದಲ್ಲಿ #ಸಾಮೂಹಿಕ #ವಿವಾಹ ಮಾಡಿದವರೆನ್ನಲಾಗುತ್ತದೆ
#ನೊಂದ ರೋಗಿಗಳಿಗೆ ಉಪಚಾರ ಮಾಡಿದ ಮಹಿಳಾ ವೈದ್ಯೆಆ ತಾಯಿ ಕರುಣಾಮಯಿಯವ ರು.
#ನಿತ್ಯ ದಾಸೋಹ ತ್ರಿಕಾಲವೂ ಇಷ್ಟಲಿ೦ಗ ಯೋಗವನ್ನು ಮಾಡಿ, ಮಹಾರಾಷ್ಟ್ರದ ಜನರಿಗೆ ಕನ್ನಡದಲ್ಲಿ ಲಿಂಗಯೋಗವನ್ನು ಕಲಿಸಿದಂಥಾ ಲಿಂಗಾಂಗ ಯೋಗಿನಿ ಆಗಿದ್ದಾರೆ ಅವರು.
#ಕನ್ನಡ ನೆಲದಲ್ಲಿ ಇಷ್ಟಲಿ೦ಗ ಯೋಗವನ್ನು ನೀಡಿದ ಮೊದಲ ಮಹಿಳಾ ಯೋಗ ಗುರುವೂ ಆಗಿದ್ದಾರೆ.
#ನಿತ್ಯ ಕನ್ನಡದ ವಚನಗಳನ್ನ ಪಠಣ ಮಾಡಿಸುತ್ತಾ ಕನ್ನಡ ಮತ್ತು ಮರಾಠಿ ಜನರಿಗೆ ಅನುಭವ ಹಂಚಿದ ಮಹಾನುಭಾ ವಿ ಜಂಗಮ ಮೂತಿ೯ ಆಗಿದ್ದವರು ತಾಯಿ ದಾನಮ್ಮದೇವಿಯವರು.
ಚಿತ್ರ ಸಾಂದರ್ಭಿಕ, ಮಾಹಿತಿ ಅಂತರ್ಜಾಲ ಕೃಪೆ
**
ಅಳಗುಂಡಿ ಅಂದಾನಯ್ಯ

About Mallikarjun

Check Also

ಕರ್ನಾಟಕ ಗ್ರಾಮೀಣ ಬ್ಯಾಂಕ್ ಸಿಬ್ಬಂದಿ ಕಿರುಕುಳ ತಪ್ಪಿಸಿ..!

12೦೦ ಗ್ರಾಹಕರಿಗೆ ಜೀವ ಭದ್ರತೆ ಒದಗಿಸಬೇಕೆಂದು ರಕ್ಷಣಾ ವೇದಿಕೆ ಮನವಿ: ಗಂಗಾವತಿ: 2018ನೇ ಸಾಲಿನಲ್ಲಿ lಗಂಗಾವತಿ ತಾಲೂಕು ಕರ್ನಾಟಕ ಗ್ರಾಮೀಣ …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.