Breaking News

ಪತ್ರಕರ್ತರ ನೂತನ ವರ್ಷದ ದಿನಚರಿ ಬಿಡುಗಡೆ

Journalist’s New Year’s Diary Released

ಜಾಹೀರಾತು


ತಿಪಟೂರ್ ನಗರದ ಗ್ರಾಂಡ್ ಹೋಟೆಲ್ ನಲ್ಲಿ ಕರ್ನಾಟಕ ಸಂಪಾದಕರು ಮತ್ತು ವರದಿಗಾರರ ಸಂಘದ ವತಿಯಿಂದ 2025ನೇ ನೂತನ ಕ್ಯಾಲೆಂಡರ್ ಅನ್ನು ಕಲ್ಪತರು ಗ್ರ್ಯಾಂಡ್ ಹೋಟೆಲ್ ನಲ್ಲಿ 2025ನೆ ಹೊಸ ವರ್ಷದ ದಿನಚರಿಯನ್ನು ಬಿಡುಗಡೆಗೊಂಡಿತು. ಶ್ರೀಮತಿ ಶುಭ ವಿಶ್ವಕರ್ಮ ರವರು ಪ್ರಾರ್ಥನೆ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಂತರ ಉಪಾಧ್ಯಕ್ಷರಾದ ಬಳೆಕಟ್ಟೆ ಶಂಕ್ರಪ್ಪನವರು ಕಾರ್ಯಕ್ರಮಕ್ಕೆ ಆಗಮಿಸಿರುವ ಸರ್ವರಿಗೂ ಸ್ವಾಗತ ಕೋರಿದರು. ಸಸಿಗೆ ನೀರು ಹಾಕುವ ಮೂಲಕ ಸಂಘದ ಅಧ್ಯಕ್ಷರಾದ ಗಣೇಶ್ ರವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಸಮಾಜದ ವಿಚಾರ ಅಂಕುಡೊಂಕುಗಳ ಸಮಸ್ಯೆಗಳು ಬಗೆಹರಿಸುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸುವ ಕೆಲಸದ ಪತ್ರಿಕಾ ಮಾಡುತ್ತಿದೆ. ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹಾಗೂ ಗೃಹ ಸಚಿವರಿಗೆ ಸಣ್ಣ ಮಾಧ್ಯಮ ಅಥವಾ ದೊಡ್ಡ ಮಾಧ್ಯಮ ಯಾವುದೆ ಆಗಿರಲಿ ಹಗಲಿರುಳು ಕಾರ್ಯನಿರ್ವಹಿಸುತ್ತಿದ್ದಾರೆ ಹಾಗಾಗಿ ಪ್ರತಿಯೊಬ್ಬ ಪತ್ರಕರ್ತರಿಗೂ ಸಹ ಬಸ್ ಪಾಸ್ ನೀಡಬೇಕೆಂದು ಒತ್ತಾಯಿಸಿದರು. ನಿಜಗುಣ ರವರು ಸಹ ಪತ್ರಕರ್ತರ ಬಗ್ಗೆ ಅವರ ಕಾರ್ಯ ವೈಖರಿ ಬಗ್ಗೆ ಮಾತನಾಡಿ ಪುಸ್ತಕ ಪೇಪರ್ ಮಕ್ಕಳಿಗೆ ಇತಿಹಾಸ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು ಟಿವಿ ಮೊಬೈಲ್ ಕೈ ಬಿಟ್ಟು ಮಕ್ಕಳಿಗೆ ಪುಸ್ತಕ ಓದುವುದರಿಂದ ಕಣ್ಣಿಗೆ ಏಕಾಗ್ರತೆ ಇರುತ್ತದೆ ಎಂದು ತಿಳಿಸಿದರು ನಂತರ ಸೋಮಶೇಖರ್ ರವರು ಪತ್ರಕರ್ತರ ಜೀವನದ ಬಹಳ ಕಷ್ಟಕರ ಜೀವನ ಆಗಿದೆ ಆದರೂ ಸಹ ಕಾಯಕವೇ ಕೈಲಾಸ ಎಂದು ಕಾರ್ಯನಿರ್ವಹಿಸುತ್ತಿದ್ದಾರೆ ಮತ್ತು ಗೌರವಾಧ್ಯಕ್ಷರಾದ ಭಾಸ್ಕರ ಅವರ ಬಗ್ಗೆ ಜೀವನದ ಬಗ್ಗೆ ಹಾಗೂ ಅವರ ಪ್ರಶಸ್ತಿಗಳನ್ನು ಬಗ್ಗೆ ಮಾತನಾಡಿದರು ನಂತರ ಸಾಧನಗೈದ ಸಾಧಕರಾದ D.S.S. ಸಂಚಾಲರಾದ ನಾಗತಿಹಳ್ಳಿ ಕೃಷ್ಣಮೂರ್ತಿ, ಪವರ್ ಟಿವಿ ನವೀನ್ ಕುಮಾರ್ ಕೆ.ಎಮ, ಡಾ. ಎಸ್ ಕೆ ಮಂಜುನಾಥ್, ಯುವಕವಿ ಉಪನ್ಯಾಸಕರು. ಪುಟ್ಟರಾಜು ಯಕ್ಷಗಾನ ಕಲಾವಿದ ಡಾ. ಸಂತೋಷ್, ಸನ್ಮಾನಿಸಲಾಯಿತು ನಂತರ ಗೌರವಾಧ್ಯಕ್ಷರಾದ ಭಾಸ್ಕರ ಮಾತನಾಡಿ ಒಬ್ಬ ಸಾಮಾನ್ಯ ವ್ಯಕ್ತಿಯನ್ನು ರಾಷ್ಟ್ರಮಟ್ಟದಲ್ಲಿ ಗುರುತಿಸುವುದೇನೆಂದರೆ ಅದು ಪತ್ರಿಕ ಮಾಧ್ಯಮ ದಿನಕ್ಕೆ 10 ರಿಂದ 20 ನಿಮಿಷ ಓದುವುದರಿಂದ ಸಮಾಜದ ವಿಷಯದಲ್ಲಿ ನಮ್ಮ ಏಕಾಗ್ರತೆ ಅತ್ಯಂತ ಮೌಲ್ಯ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಸಂಪದ ಸಂಪಾದಕರು ಮತ್ತು ವರದಿಗಾರ ಸಂಘದ ಪದಾಧಿಕಾರಿಗಳಾದ ಧರಣೇಶ್ ಮನು. ಸ್ವಾಮಿ ತಿಮ್ಲಾಪುರ. ಮಂಜು ಗುರುಗದಹಳ್ಳಿ. ರಾಜು ಬೆನ್ನೇನಹಳ್ಳಿ. ಮಂಜುನಾಥ್ ಡಿ . ಸರ್ವೇಶ್ವರ ಚಾರ್. ತ್ರಿವೇಣಿ ಸುಂದರ್. ಕುಸುಮ. ಸೇರಿದಂತೆ ಪದಾಧಿಕಾರಿಗಳು ಹಾಜರಿದ್ದರು.
ವರದಿ ಮಂಜು ಗುರುಗದಹಳ್ಳಿ.

About Mallikarjun

Check Also

2026ರೊಳಗೆ ನೂತನ ಅನುಭವ ಮಂಟಪ ಲೋಕಾರ್ಪಣೆಗೆ ಸಿದ್ಧವಾಗಲಿದೆ.-ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ.

The new Anubhav Mantapa will be ready for public inauguration by 2026. - District In-charge …

Leave a Reply

Your email address will not be published. Required fields are marked *