Breaking News

ಸಿ.ಎ.ಎ., ಎನ್.ಆರ್.ಸಿ ಮತ್ತು ಎನ್.ಪಿ.ಆರ್ ಜಾರಿಗೆಗೆ ವಿರೋಧ: ಸಿ.ಪಿ.ಐ.ಎಂ.ಎಲ್ವಿಜಯ ದೊರೆರಾಜು

Opposition to implementation of CAA, NRC and NPR: CPIML Vijaya Doraraj

ಗಂಗಾವತಿ: ಕೇಂದ್ರ ಸರ್ಕಾರ ಜಾರಿಗೊಳಿಸಿದ ಅಂA, ಓಖಅ & ಓPಖ ಕಾನೂನು ಅಸಂವಿಧಾನಿಕವಾಗಿದ್ದು, ತಾರತಮ್ಯದಿಂದ ಕೂಡಿದ್ದಾಗಿದೆ. ಇವುಗಳನ್ನು ಜಾರಿಗೊಳಿಸಬಾರದೆಂದು ನಮ್ಮ ಸಿ.ಪಿ.ಐ.ಎಂ.ಎಲ್ ಪಕ್ಷ ಒತ್ತಾಯಿಸುತ್ತದೆ ಎಂದು ಪಕ್ಷದ ಜಿಲ್ಲಾ ಕಾರ್ಯದರ್ಶಿಯಾದ ವಿಜಯ್ ದೊರೆರಾಜು ಪ್ರಕಟಣೆಯಲ್ಲಿ ತಿಳಿಸಿದರು.
ಅವರು ಇಂದು ತಹಶೀಲ್ದಾರರ ಮುಖಾಂತರ ರಾಷ್ಟçಪತಿಗಳಿಗೆ ಮನವಿ ಸಲ್ಲಿಸಿ ಮಾತನಾಡಿದರು. ಸಂವಿಧಾನದ ೧೪ನೇ ಆರ್ಟಿಕಲ್ ಭಾರತದಲ್ಲಿರುವ ಪ್ರತಿಯೊಬ್ಬ ವ್ಯಕ್ತಿ ಬರೀ ಭಾರತೀಯರೇ ಅಲ್ಲ-ಭಾರತದ ಕಾನೂನಿನ ಅಡಿಯಲ್ಲಿ ಸಮಾನ ರಕ್ಷಣೆಗೆ ಹಕ್ಕುದಾರರು ಎಂದು ಸ್ಪಷ್ಟವಾಗಿ ಹೇಳುತ್ತದೆ, ಆದರೆ ಈ ಪೌರತ್ವ ತಿದ್ದುಪಡಿ ಕಾಯ್ದೆಯಿಂದ ಶ್ರೀಲಂಕಾದ ತಮಿಳು, ಮಯನ್ಮಾರ್ ರೋಹಿಂಗ್ಯಾಗಳು, ಪಾಕಿಸ್ತಾನದ ಅಹ್ಮದಿಯಾ ಸಮುದಾಯದವರು ಮತ್ತು ಬಾಂಗ್ಲಾದೇಶದ ನಾಸ್ತಿಕರು ಭಾರತಕ್ಕೆ ನಿರಾಶ್ರಿತರಾಗಿ ಬಂದರೂ, ರಕ್ಷಣೆಗೆ ಆರ್ಹರಾಗುವುದಿಲ್ಲ, ಪೌರತ್ವಕ್ಕೆ ಈಗ ಇರುವ ಮಾನದಂಡಗಳು, ಜನ್ಮ, ಮೂಲ ಅಥವಾ ನೈಸರ್ಗೀಕರಣ (ಕೆಲವು ಷರತ್ತುಗಳೊಂದಿಗೆ), ಈ ತಿದ್ದುಪಡಿಯಲ್ಲಿ ಸೇರಿಸಿರುವ ಧರ್ಮದ ಮಾನದಂಡವು ಭಾರತದ ಮತಾತೀತ ದೇಶದ ಪರಿಕಲ್ಪನೆಗೆ ವಿರುದ್ಧವಾಗಿದ್ದು, ಹಿಂದು ರಾಷ್ಟçದೆಡೆ ಎಳೆದೊಯ್ಯುತ್ತದೆ. ಸಿಎಎ ಈಗ ಪ್ರಸ್ತಾಪದಲ್ಲಿರುವ ನಾಗರಿಕರ ರಾಷ್ಟಿçÃಯ ನೋಂದಣಿ ಎನ್.ಆರ್.ಸಿ ಯೊಂದಿಗೆ ಸೇರಿಸಿದಾಗ ಮತ್ತಷ್ಟು ಅಪಾಯಕಾರಿಯಾಗುತ್ತದೆ.
ದೇಶದಾದ್ಯಂತ ಪ್ರತಿಯೊಬ್ಬ ನಾಗರಿಕನ ಪಟ್ಟಿಯನ್ನು ಮಾಡುವುದು ಇದರ ಉದ್ದೇಶ. ಇದೊಂದು ದೊಡ್ಡ ಸಮಸ್ಯೆ, ಆಸ್ಲಾಮಿನಲ್ಲಿ ೧೯೭೧ ಮಾರ್ಚ್ ೨೪ ರ ಮುಂಚೆ ವಿತರಿಸಲಾಗಿದ್ದ ತಮ್ಮ ಅಥವಾ ತಮ್ಮ ಪೂರ್ವಜರ ಸರಕಾರಿ ದಾಖಲೆಗಳನ್ನು ಜನರು ಒದಗಿಸಬೇಕಾಯಿತು. ನಿಜವಾದ ನಾಗರಿಕರಿಗೆ ಇಂತಹ ದಾಖಲೆಗಳನ್ನು ಹೊಂದಿಸುವುದಕ್ಕೆ ಪರದಾಡುವಂತಾಯಿತು. ೧೯ ಲಕ್ಷ ಜನರು ಈ ಪಟ್ಟಿಯಿಂದ ಹೊರಗಾಗಿ ಹಾಗೂ ಅವರು ಈಗ ವಿದೇಶಿ ಟ್ರಬ್ಯೋನಲ್‌ನಲ್ಲಿ ತಮ್ಮ ಪೌರತ್ವ ಸಾಬಿತುಪಡಿಸಬೇಕಾಗಿದೆ ಇಲ್ಲದಿದ್ದರೆ ಬಂಧನ ಗೃಹದಲ್ಲಿ ಬಂಧಿಯಾಗುತ್ತಾರೆ.
ಭಾರತದ ಎಲ್ಲಾ ಜನರು ದಾಖಲೆಗಳನ್ನು ಸಲ್ಲಿಸಲು ಪರದಾಡಬೇಕಾಗುತ್ತದೆ. ಜನನ ಪ್ರಮಾಣಪತ್ರ ಇಲ್ಲದವರು, ಯಾವುದೇ ಆಸ್ತಿ ಅಥವಾ ಭೂಮಿಯ ಧಾಖಲೆ ಇಲ್ಲದವರು ವಿವಾಹದ ನಂತರ ಸರಿಯಾದ ದಾಖಲೆಗಳಿಲ್ಲದೆ ಹೆಸರು ಬದಲಾಯಿಸಿಕೊಂಡವರು (ವಿಶೇಷವಾಗಿ ವಿಧವೆಯರನ್ನು ಒಳಗೊಂಡAತೆ) ಅಲೆಮಾರಿ ಸಮುದಾಯದವರು, ದಲಿತರು (ವ್ಯವಸ್ಥಿತ ದಬ್ಬಾಳಿಕೆಯಿಂದ ಭೂ ಒಡೆತನದಿಂದ ವಂಚಿತರಾದವರು), ಅನಾಥ ಮಕ್ಕಳು, ಮುಂತಾದ ಕಾರಣಗಳಿಗಾಗಿ ನಿರಾಶ್ರಿತ ಕುಟುಂಬಗಳು ಹಾಗೂ ಇನ್ನಿತರ ಸಮುದಾಯಗಳು ಇವರೆಲ್ಲರ ಬದುಕು ಬೀದಿಗೆ ಬರುತ್ತದೆ ಮತ್ತು ಇವರು ಸರಿಯಾದ ದಾಖಲೆಗಳನ್ನು ತೋರಿಸದ್ದಿದ್ದರೆ ಬಂಧಿಗಳಾಗುತ್ತಾರೆ.
ಗೌರವಾನ್ವಿತ ರಾಷ್ಟçಪತಿಗಳು ಕೇಂದ್ರ ಸರ್ಕಾರಕ್ಕೆ ಈ ಜನ ವಿರೋಧಿ ಕಾನೂನುಗಳನ್ನು ವಾಪಸ್ಸು ಪಡೆಯುವಂತೆ ಆದೇಶಿಸಬೇಕು ಹಾಗೂ ದೆಹಲಿಯಲ್ಲಿ ನಮಾಜ್ ಮಾಡುತ್ತಿದ್ದ ಮುಸಲ್ಮಾನ ಸಮುದಾಯದ ಮೇಲೆ ಪೊಲೀಸ್‌ನವರು ದೌರ್ಜನ್ಯ ನಡೆಸಿದ್ದು ಪೊಲೀಸ್ ಅಧಿಕಾರಿಗಳನ್ನು ಸೇವೆಯಿಂದ ವಜಾಗೋಳಿಸಬೇಕೆಂದು ನಮ್ಮ ಸಿ.ಪಿ.ಐ.ಎಂ.ಎಲ್ ಪಕ್ಷ ಒತ್ತಾಯಿಸುತ್ತದೆ ಎಂದರು.
ಈ ಸಂದರ್ಭದಲ್ಲಿ ಕಾ|| ಭಾರಧ್ವಾಜ್, ಪರಶುರಾಮ, ಬಾಬರ್, ಅಬ್ದುಲ್, ಚಾಂದ್‌ಪಾಷಾ ಸೇರಿದಂತೆ ಇನ್ನಿತರ ಕಾರ್ಮಿಕರು ಉಪಸ್ಥಿತರಿದ್ದರು.

About Mallikarjun

Check Also

ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಮನೆಗೆ ಬೆಂಕಿ. ಅಪಾರ ಪ್ರಮಾಣದಲ್ಲಿ ನಷ್ಟ.

ತಿಪಟೂರು ತಾಲ್ಲೂಕಿನ ಕಿಬ್ಬನಹಳ್ಳಿ ಹೋಬಳಿ ಕುಪ್ಪಾಳು ಗ್ರಾಮ ಪಂಚಾಯತಿ ವ್ಯಾಪ್ತಿಯ ಕೊಟ್ಟಿಗೆಹಳ್ಳಿ ಗ್ರಾಮದ ದಲಿತ ಸಮುದಾಯದ ಕೆಂಪರಾಮಯ್ಯ ಸನ್ ಆಫ್ …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.