Breaking News

ಕಾರ್ಮಿಕ ವರ್ಗದ ಮಹಾನಾಯಕ ಕಾಮ್ರೆಡ್ ಕಾಲ್ ಮಾರ್ಕ್ಸ್ ರವರ 142ನೇ ಸ್ಮರಣದಿನದಕಾರ್ಯಕ್ರಮ

142nd Commemoration Day Program of the Great Leader of the Working Class Comrade Karl Marx

ಕೊಪ್ಪಳ: ಎಸ್.ಯು.ಸಿ.ಐ ಕಮ್ಯುನಿಸ್ಟ್ ಪಕ್ಷದ ಕಛೇರಿಯಲ್ಲಿ ಕಾರ್ಮಿಕ ವರ್ಗದ ಮಹಾನಾಯಕ ಕಾಮ್ರೆಡ್ ಕಾಲ್ ಮಾರ್ಕ್ಸ್ ರವರ 142ನೇ ಸ್ಮರಣ ದಿನದ ಕಾರ್ಯಕ್ರಮ

ಎಸ್‌.ಯು.ಸಿ.ಐ ಕಮ್ಯುನಿಸ್ಟ್ ಪಕ್ಷದ ಜಿಲ್ಲಾ ಕಚೇರಿಯಲ್ಲಿ ವಿಶ್ವದ ದುಡಿಯುವ ಜನಗಳ ಪರ ಧ್ವನಿ ಎತ್ತಿದ, ಸಹಸ್ರಮಾನದ ಮೇಧಾವಿ ವೈಜ್ಞಾನಿಕ ಸಮತಾವಾದಿ ಸಿದ್ಧಾಂತದ ಪ್ರತಿಪಾದಕ ಕಾರ್ಮಿಕ ವರ್ಗದ ಮಹಾನ್ ನಾಯಕ ಕಾಮ್ರೆಡ್ ಕಾರ್ಲ್ ಮಾರ್ಕ್ಸ್ ರವರ 142ನೇ ಸ್ಮರಣ ದಿನವನ್ನು ಆಚರಿಸಲಾಯಿತು.

 ಈ ಸಂದರ್ಭದಲ್ಲಿ ಪಕ್ಷದ ಮುಖಂಡರಾದ ಶರಣಪ್ಪ ಉದ್ಬಾಳ್ ಮಾತನಾಡಿ ವಿಶ್ವದ ದುಡಿಯುವ ಜನಗಳ ಆಶಾಕಿರಣ ಕಾರ್ಮಿಕ ವರ್ಗದ ವಿಮೋಚನೆಗೆ ದಾರಿ ತೋರಿದ ಶ್ರೇಷ್ಠ ಮೇಧಾವಿ ಹಾಗೂ ಮಹಾನ್ ಕ್ರಾಂತಿಕಾರಿಯಾಗಿದ್ದ ಅವರು ಯಾವ ಶೋಷಿತ ಜನರ ರಕ್ತವನ್ನು ಜಿಗಣೆಯಂತೆ ಶ್ರೀಮಂತ ಬಂಡವಾಳಿಗರು ಹಿರುತ್ತಿದ್ದರೋ, ಆ ಜನರ ಕೈಗೆ ಅವರು ಮಾರ್ಕ್ಸ್ ವಾದದ ಅಸ್ತ್ರವನ್ನು ನೀಡಿದರು. ಸಮಾಜವಾದಿ ಕ್ರಾಂತಿಯ ದಾರಿಯ ಮೂಲಕ ಸಮತಾವಾದಿ ಸಮ ಸಮಾಜವನ್ನು ನಿರ್ಮಿಸುವ ವೈಜ್ಞಾನಿಕ ತತ್ವ ಸಿದ್ಧಾಂತವನ್ನು ಜಗತ್ತಿಗೆ ನೀಡಿದವರು. ಆ ಮಾರ್ಕ್ಸ್ ವಾದದ ಬೆಳಕಿನಲ್ಲಿ ಈ ದೇಶದ ಮಹಾನ್ ಕ್ರಾಂತಿಕಾರಿ ಕಾಮ್ರೇಡ್ ಶಿವದಾಸ್ ಘೋಷ್ ರವರು ನಮ್ಮ ಪಕ್ಷ ಎಸ್.ಯು.ಸಿ.ಐ ಕಮ್ಯುನಿಸ್ಟ್ ಪಕ್ಷ ವನ್ನು ಈ ನೆಲದಲ್ಲಿ ಸ್ಥಾಪಿಸಿದರು. ಅಂತೆಯೇ ನಾವೆಲ್ಲರೂ ಮಾರ್ಕ್ಸ್ ವಾದ ಲೆನಿನ್ ವಾದ ಮತ್ತು ಶಿವದಾಸ್ ಘೋಷ್ ಅವರ ಚಿಂತನೆಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಭಗತ್ ಸಿಂಗ್ ನೇತಾಜಿ ಕಂಡಂತೆ ಈ ದೇಶದಲ್ಲಿಯೂ ಸಮಾಜವಾದಿ ಕ್ರಾಂತಿ ನಡೆಸಲು ಮುನ್ನುಗ್ಗಬೇಕು ಎಂದು ಕರೆ ನೀಡಿದರು.

 ಈ ಸಂದರ್ಭದಲ್ಲಿ ಪಕ್ಷದ ಸದಸ್ಯರಾದ ಶರಣು ಗಡ್ಡಿ, ರಮೇಶ್.ವಿ, ಶರಣು ಪಾಟೀಲ್, ಗಂಗರಾಜ ಅಳ್ಳಳ್ಳಿ, ದೇವರಾಜ್, ಮಂಜುಳಾ,ಶಾರದಾ ಮುಂತಾದವರು ಭಾಗವಹಿಸಿದ್ದರು.

About Mallikarjun

Check Also

ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಮನೆಗೆ ಬೆಂಕಿ. ಅಪಾರ ಪ್ರಮಾಣದಲ್ಲಿ ನಷ್ಟ.

ತಿಪಟೂರು ತಾಲ್ಲೂಕಿನ ಕಿಬ್ಬನಹಳ್ಳಿ ಹೋಬಳಿ ಕುಪ್ಪಾಳು ಗ್ರಾಮ ಪಂಚಾಯತಿ ವ್ಯಾಪ್ತಿಯ ಕೊಟ್ಟಿಗೆಹಳ್ಳಿ ಗ್ರಾಮದ ದಲಿತ ಸಮುದಾಯದ ಕೆಂಪರಾಮಯ್ಯ ಸನ್ ಆಫ್ …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.