Breaking News

ಶ್ರೀ ಶಾರದಾಂಬೆಗೆ ಕಾರ್ತಿಕೋತ್ಸವದಸಂಭ್ರಮ

Kartikotsava celebration for Mr. Sharadambe

ಗಂಗಾವತಿ,,,12, ಪ್ರತಿಯೊಬ್ಬ ವ್ಯಕ್ತಿ ಸನ್ಮಾರ್ಗದಿಂದ ಧಾರ್ಮಿಕ ಆಚರಣೆಗಳು ಪೂರಕವಾಗಿದ್ದು ಅಜ್ಞಾನ ಅಂದಕಾರ ಮೂಢನಂಬಿಕೆಗಳಿಂದ ಹೊರಬರಲು ಕಾರ್ತಿಕ ದೀಪೋತ್ಸವ ಅತ್ಯಂತ ಸಹಕಾರಿಯಾಗಿದೆ ಎಂದು ಶಂಕರ ಮಠದ ಹಿರಿಯ ಸದಸ್ಯರಾದ ರಾಘವೇಂದ್ರ ರಾವ್ ಅಳ ವಂಡಿಕರ ಹೇಳಿದರು,, ಅವರು ನಗರದ ಶಂಕರ ಮಠದ ಶ್ರೀ ಶಾರದಾಂಬ ದೇಗುಲದಲ್ಲಿ ಶ್ರಾವಣ ಮಾಸದ ಕಡೆ ಸೋಮವಾರ ದಂದು ಕಾರ್ತಿಕೋತ್ಸವ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿ, ಶೃಂಗೇರಿ ಪೀಠದ ಜಗದ್ಗುರುಗಳಾದ ಶ್ರೀ ಭಾರತಿ ತೀರ್ಥ ಮಹಾಸ್ವಾಮಿಗಳ ಸನ್ಯಾಸತ್ವ ಪಡೆದ 50ನೇ ವರ್ಷದ ಹಿನ್ನೆಲೆಯಲ್ಲಿ 2023 ಹಾಗೂ 24ನೆಯ ಸಾಲಿನಲ್ಲಿ ವರ್ಷವಿಡಿ ಹಲೋ ವಿಶೇಷ ಧಾರ್ಮಿಕ ಪೂಜಾ ಕಾರ್ಯಕ್ರಮಗಳನ್ನು ನಡೆಸುತ್ತಾ ಬರಲಾಗಿದ್ದು, ಪ್ರಸ್ತುತ ಕಾರ್ತಿಕೋತ್ಸವದಲ್ಲಿ ಸರ್ವ ಜನಾಂಗದ ಮಹಿಳೆಯರು, ವಿವಿಧ ಭಜನಾ ಮಂಡಳಿಗಳ ಭಗಿನಿಯರು, ಪಾಲ್ಗೊಳ್ಳುವುದರ ಮೂಲಕ, ಯಶಸ್ಸಿಗೆ ಸಹಕಾರ ನೀಡಿದ್ದಾರೆ ಎಂದು ಮುಕ್ತ ಕಂಠದಿಂದ ಪ್ರಶಂಶಿಸಿದರು, ಇದಕ್ಕೂ ಪೂರ್ವದಲ್ಲಿ ಶ್ರೀ ಶಾರದಾ ಶಂಕರ ಭಕ್ತ ಮಂಡಳಿ, ಭ ಗೀ ನಿಯರ ಸಂಘ, ಶ್ರೀ ಗಂಗಾದೇಶ್ವರ ಮಹಿಳಾ ಭಜನಾ ಮಂಡಳಿ, ಸತ್ಯದೇವ ಭಜರ ಮಂಡಳಿ ಸೇರಿದಂತೆ ಇತರರು, ಭಜನೆ, ಸಂಕಲ್ಪ, ಇತ್ಯಾದಿ ಧಾರ್ಮಿಕ ವಿಧಿ ವಿಧಾನಗಳನ್ನು ದೇವಸ್ಥಾನದ ಅರ್ಚಕ ಕುಮಾರ್ ಭಟ್ ನೆರವೇರಿಸಿದರು, ಈ ಸಂದರ್ಭದಲ್ಲಿ, ಗಾಯಿತ್ರಿ ಅಳವಂಡಿ ಕರ್, ಲೀಲಾ, ಸರ್ವಮಂಗಳ, ಸಂಧ್ಯಾ ಕುಲಕರ್ಣಿ, ದತ್ತಣ್ಣ ಶಂಕ್ರಣ್ಣ ಹೊಸಳ್ಳಿ, ಶ್ರೀಧರ ವೇಣುಗೋಪಾಲ್, ದತ್ತಾತ್ರೇಯ ವೈದ್ಯ ಸೇರಿದಂತೆ ಇತರರು ಪಾಲ್ಗೊಂಡಿದ್ದರು

About Mallikarjun

Check Also

ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಮನೆಗೆ ಬೆಂಕಿ. ಅಪಾರ ಪ್ರಮಾಣದಲ್ಲಿ ನಷ್ಟ.

ತಿಪಟೂರು ತಾಲ್ಲೂಕಿನ ಕಿಬ್ಬನಹಳ್ಳಿ ಹೋಬಳಿ ಕುಪ್ಪಾಳು ಗ್ರಾಮ ಪಂಚಾಯತಿ ವ್ಯಾಪ್ತಿಯ ಕೊಟ್ಟಿಗೆಹಳ್ಳಿ ಗ್ರಾಮದ ದಲಿತ ಸಮುದಾಯದ ಕೆಂಪರಾಮಯ್ಯ ಸನ್ ಆಫ್ …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.