Breaking News

ಬಿ.ಇಡಿ ವಿದ್ಯಾರ್ಥಿಗಳಿಗೆ ಆಂತರಿಕ ಅಂಕ ಕೊಡಲು ಬಳ್ಳಾರಿ ವಿ‌ವಿ ನಿರ್ಬಂಧ ಆದೇಶವನ್ನು ವಾಪಸ್ಸು ಪಡೆಯಲು ಅಗ್ರಹಿಸಿ ಎಸ್ ಎಫ್ ಐ ಬೃಹತ್ ಪ್ರತಿಭಟನೆ

SFI staged massive protest demanding withdrawal of Bellary VV restriction order to give internal marks to B.ED students

.

ಬಳ್ಳಾರಿ ವಿವಿ ವ್ಯಾಪ್ತಿಯ ಕೊಪ್ಪಳ, ವಿಜಯನಗರ, ಬಳ್ಳಾರಿ ಜಿಲ್ಲೆಯ ಬಿ.ಇಡಿ ಪ್ರಥಮ ಹಾಗು ದ್ವಿತೀಯ ವರ್ಷದಲ್ಲಿ ಅಧ್ಯಯನ ಮಾಡುತ್ತಿರುವ ಪ್ರಶಿಕ್ಷಣಾರ್ಥಿಗಳಿಗೆ ಬಳ್ಳಾರಿಯ ವಿಜಯನಗರ ಶ್ರೀ ಕ್ರಷ್ಣದೇವರಾಯ ವಿಶ್ವವಿಧ್ಯಾಲಯದ ಪರೀಕ್ಷಾ ವಿಭಾಗದ ಕುಲಸಚಿವರು ದಿನಾಂಕ;06-12-2023ರಂದು ತನ್ನ ಅದೀನದಲ್ಲಿ ಬರುವ ಬಿ.ಇಡಿ ಕಾಲೇಜುಗಳಿಗೆ ಆಂತರಿಕ ಅಂಕಗಳ ಪರಶೀಲನಾ ಸಮಿತಿಯನ್ನು ರಚಿಸಿದ್ದು, ಡಿಸೆಂಬರ್14ರಿಂದ16ರ ಒಳಗಾಗಿ ಕಾಲೇಜುಗಳಿಗೆ ಬೇಟಿ ನೀಡಲಿದ್ದು ಕಾಲೇಜು ಗುಂಪು ಸರಾಸರಿ 87% ಮೀರದಂತೆ ವಿದ್ಯಾರ್ಥಿವಾರು ವೈಯಕ್ತಿಕ 90% ಮೀರದಂತೆ ಆಂತರಿಕ ಅಂಕಗಳನ್ನು ನೀಡಲು ಆದೇಶಸಿದೆ ಸದರಿ ಈ ಕ್ರಮದಿಂದ ಬಳ್ಳಾರಿ ವಿವಿ ವ್ಯಾಪ್ತಿಯ ಪ್ರಶಿಕ್ಷಣಾರ್ಥಿಗಳಿಗೆ ಅನ್ಯಾಯವಾಗಲಿದ್ದು ಕಳೆದ ಸೆಮಿಸ್ಟರ್ ಗಿಂತ ಶೇ10ರಿಂದ15% ಕಡಿಮೆ ಆಂತರಿಕ ಅಂಕಗಳು ಈ ಬಾರಿ ಬರಲಿವೆ ರಾಜ್ಯದ ಇನ್ನಿತರ ವಿ.ವಿಗಳಲ್ಲಿ 100ಕ್ಕೆ100ರಷ್ಠು ಆಂತರಿಕ ಅಂಕಗಳನ್ನು ನೀಡಲು ಅವಕಾಶ ಕಲ್ಫಿಸಿದ್ದು ಸಹಜವಾಗಿ ಅಲ್ಲಿಯ ಪ್ರಶಿಕ್ಷಣಾರ್ಥಿಗಳು ಅತ್ಯುತ್ತಮ ಫಲಿತಾಂಶ ಪಡೆಯುತ್ತಾರೆ. ಭವಿಷ್ಯದಲ್ಲಿ ಶಿಕ್ಷಕರ ಸ್ಫರ್ಧಾತ್ಮಕ ಪರೀಕ್ಷೆಗಳನ್ನು ರಾಜ್ಯದ ಎಲ್ಲಾ ವಿವಿಗಳ ಪ್ರಶಿಕ್ಷಣಾರ್ಥಿಗಳ ಜತೆ ಫೈಟ ಮಾಡುವದರಿಂದ ನೇಮಕಾತಿ ಆಯ್ಕೆಯಲ್ಲಿ ಬಳ್ಳಾರಿ ವಿವಿ ವ್ಯಾಪ್ತಿಯ ಪ್ರಶಿಕ್ಷಣಾರ್ಥಿಗಳು ಹೊರಬೀಳುವುದು ಅಚ್ಚರಿ ಸಂಗತಿಯೇನಲ್ಲ! ಮತ್ತು ವರ್ಷ ಪೂರ್ತಿ ಪ್ರಶಿಕ್ಷಣಾರ್ಥಿಗಳ ಹಾಜರಾತಿˌಪಠ್ಯ ಹಾಗು ಪಠ್ಯೇತರ ಚಟುವಟಿಕೆಗಳ ಪಾಲ್ಗೊಳ್ಳುವಿಕೆಯನ್ನು ಆಯಾ ಕಾಲೇಜು ಉಪನ್ಯಾಸಕರು ಮತ್ತು ಪ್ರಾಂಶುಪಾಲರು ಗಮನಿಸಿರುತ್ತಾರೆ ಅವರು ಆಂತರಿಕ ಅಂಕಗಳನ್ನು ನೀಡುವುದು ಸೂಕ್ತ ಬದಲಾಗಿ ಸೆಮಿಸ್ಟರ್ ಕೊನೆಯಲ್ಲಿ ಕಾಲೇಜುಗಳಿಗೆ ಸಮಿತಿ ಬೇಟಿ ನೀಡಿ ಒಂದು ಘಂಟೆಯಲ್ಲಿ ಎಲ್ಲಾ ಪ್ರಶಿಕ್ಷಣಾರ್ಥಿಗಳ ದಾಖಲೆಗಳನ್ನು ಪರಿಶೀಲಿಸಿ ಆಂತರಿಕ ಅಂಕ ನೀಡುವುದು ಎಷ್ಠರಮಟ್ಟಿಗೆ ಸರಿ? ಹಾಗು ಸಮಿತಿಯು ಒಂದು ಕಾಲೇಜನಲ್ಲಿ ಒಂದರಿಂದ ಎರಡು ತಾಸು ಇರಬಹದು ಆ ಸಮಯದಲ್ಲಿ ಪ್ರಥಮ ಮತ್ತು ದ್ವಿತೀಯ ವರ್ಷದ ಒಟ್ಟು 200 ಪ್ರಶಿಕ್ಷಣಾರ್ಥಿಗಳ ದಾಖಲೆಗಳನ್ನು ಪರಶೀಲಿಸಲು ಸಾದ್ಯವೇ ಒಂದು ವೇಳೇ ಪರಶೀಲಿಸಿದರು ಎಷ್ಟರಮಟ್ಟಿಗೆ ಸೂಕ್ತ ಮೌಲ್ಯಮಾಪನ ಮಾಡಲು ಸಾದ್ಯ ಮೇಲಾಗಿ ಆಂತರಿಕ ಅಂಕಗಳ ಮೌಲ್ಯಮಾಪನಕ್ಕೆ ಪ್ರಶಿಕ್ಷಣಾರ್ಥಿಗಳು ಬರೆದ ದಾಖಲೆಗಳಷ್ಠೆ ಸಾಕೆ? ವಿವಿಯ ಸದರಿ ಕ್ರಮವು ಅವೈಜ್ಞಾನಿಕವಾಗಿದ್ದು ಇದರಿಂದ ಪ್ರಶಿಕ್ಷಣಾರ್ಥಿಗಳಿಗೆ ಅನ್ಯಾಯವಾಗುವುದು ಆದ ಕಾರಣ ವಿವಿಯು ಆಂತರಿಕ ಅಂಕಗಳನ್ನು ನೀಡಲು ನಿರ್ಭಂದ ಹೇರಿರುವ ಕ್ರಮವನ್ನು ಖಂಡಿಸಿ ಪ್ರತಿಭಟನೆ ನಡೆಸಿ ಮನವಿ ನೀಡುತ್ತಿದ್ದು ಕೂಡಲೇ ಕುಲಪತಿಗಳು ಗಮನಿಸಿ ಆದೇಶ ವನ್ನು ವಾಪಸ್ಸು ಪಡೆಯಬೇಕೆಂದು ಇಂದು ಕೊಪ್ಪಳದ ಕೇಂದ್ರೀಯ ಬಸ್ ನಿಲ್ದಾಣದಿಂದ ತಹಶಿಲ್ದಾರರ ಕಚೇರಿಗೆ ಬೃಹತ್ ಪ್ರತಿಭಟನೆ ಮೂಲಕ ಮನವಿ ಸಲಿಸಿ ಒತ್ತಾಯಿಸಲಾಯಿತು.

ಈ ಸಂದರ್ಭದಲ್ಲಿ ಸಂಘಟನೆಯ ರಾಜ್ಯಾಧ್ಯಕ್ಷ ಅಮರೇಶ ಕಡಗದ, ಜಿಲ್ಲಾ ಮುಂಖಡರಾದ ಅಮರಯ್ಯ ಹಿರೇಮಠ, ಯಲ್ಲಾಲಿಂಗ, ಅಮರಯ್ಯ, ಬಿ.ಇಡಿ ವಿದ್ಯಾರ್ಥಿಗಳಾದ ಲೋಕಶ, ಮಾರುತಿ, ಮಂಜುನಾಥ,ಅಂಭಿಗೇಶ, ಆಕಾಶ, ಸ್ವಾತಿ,ಪೂಜಾ, ಗಾಯಿತ್ರಿ,ನಿವೇದಿತಾ,ಶಿಲ್ಪ, ಹನುಮಂತಿ, ಐಶ್ವರ್ಯ, ತೇಜಸ್ವಿನಿ,ಗೀತಾ ಇತರರು ಇದ್ದರು ಪ್ರತಿಭಟನೆಯಲ್ಲಿ ಕುಷ್ಟಗಿ, ಯಲಬುರ್ಗಾ ಹಾಗೂ ಕೊಪ್ಪಳದ ಎಲ್ಲಾ ಬಿ.ಇಡಿ ಕಾಲೇಜ್ ವಿದ್ಯಾರ್ಥಿಗಳು ಭಾಗವಹಿಸಿದ್ದರು ಕೊಪ್ಪಳ ಶಾಸಕರ ಆಪ್ತ ಸಹಾಯಕರಿಗೂ ಈ ಸಂದರ್ಭದಲ್ಲಿ ಮನವಿ ಸಲ್ಲಿಸಿ ಆದೇಶ ವಾಪಸ್ ಗೆ ಮಾತನಾಡಲು ಆಗ್ರಹಿಸ ಲಾಯಿತ್ತು

ಬಳ್ಳಾರಿ ವಿ.ವಿ ಆದೇಶ ಪ್ರತಿಯನ್ನು ನಗರದ ಅಶೋಕ ಸರ್ಕಲ್ ನಲ್ಲಿ ಸುಟ್ಟು ಆಕ್ರೋಶ ವ್ಯಕ್ತಪಡಿಸಲಾಯಿತ್ತು

       ಅಮರೇಶ ಕಡಗದ
        ರಾಜ್ಯಾಧ್ಯಕ್ಷರು
ಭಾರತ ವಿದ್ಯಾರ್ಥಿ      ಫೆಡರೇಷನ್
               SFI

About Mallikarjun

Check Also

ಹನೂರು ವಿದಾನಸಭಾ ಕ್ಷೇತ್ರದಲ್ಲಿ ಮೂಲಭೂತ ಸೌಲಭ್ಯಗಳಿಗೆ ಆಗ್ರಹಿಸಿ ಮತದಾನ ಬಹಿಷ್ಕಾರ ಮತಗಟ್ಟೆ ಧ್ವಂಸ

ವರದಿ : ಬಂಗಾರಪ್ಪ ಸಿ .ಹನೂರು : ಸಾರ್ವತ್ರಿಕ ಲೋಕಸಭಾ ಚುನಾವಣೆಯಲ್ಲಿ ಮತದಾನ ಬಹಿಷ್ಕಾರದ ಬಗ್ಗೆ ಮಾಹಿತಿ ಪಡೆದ ಅಧಿಕಾರಿಗಳು …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.