Breaking News

ಖಾಸಗಿ ಶಾಲೆಗಳಿಗಿಂತ ಸರ್ಕಾರಿ ಶಾಲೆಗಳು ಯಾವುದಕ್ಕೂ ಕಡಿಮೆ ಇಲ್ಲ – ಫಕೀರಸಾಬ್ ಯಡಿಯಪೂರ.

Government schools are no less than private schools – Fakirsaab Yedipur.

ಜಾಹೀರಾತು

ಕೊಪ್ಪಳ 15ಆಗಷ್ಟ: ಬಂಡಿಹರ್ಲಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳೇ ಬಂಡಿಹರ್ಲಾಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 78ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಮುದ್ದು ಮಕ್ಕಳ,ಶಿಕ್ಷಕರು, ಮತ್ತು ಊರಿನ ಗ್ರಾಮಸ್ಥರು ಸೇರಿ ಘೋಷ ವ್ಯಾಕ್ಯ ಪದಗಳನ್ನು ಫೋಷಿಸುತ್ತ ಪಥ ಸಂಚಲನ ಮಾಡಿಕೊಂಡು, ಮಹ್ಮಾತ ಗಾಂಧೀಜಿಯ ವೃತದಲ್ಲಿ ಗಾಂಧಿಜಿ ಮೂರ್ತಿ ಪೂಜೆ ನೇರೆವರಿಸಿ ರಾಷ್ಟ್ರ ಗೀತೆಯನ್ನು ನುಡಿದು, ಎಸ್ ಡಿ ಎಮ್ ಸಿ ಅಧ್ಯಕ್ಷರು ಫಕೀರಸಾಬ್ ಯಡಿಯಪೂರ ರವರು ಧ್ವಜರೊಣ ಕಾರ್ಯಕ್ರಮವನ್ನು ನೆರವೇರಿಸಿಕೊಟ್ಟರು.

ಹೈದರಾಬಾದ್ ಕರ್ನಾಟಕ ವ್ಯಾಪ್ತಿಗೆ ಬರುವ ಕೊಪ್ಪಳ ಜಿಲ್ಲೆಯಲ್ಲಿ 108 ಶಾಲೆಗಳಲ್ಲಿ ಇಂಗ್ಲಿಷ್ ಎಲ್ಕೆಜಿ ಮತ್ತು ಯುಕೆಜಿ ತರಗತಿಗಳು ಪ್ರಾರಂಭವಾಗಿದ್ದು ,
ಅದರಲ್ಲಿ ಹಳೆಬಂಡಿ ಹರ್ಲಾಪುರ ಸರ್ಕಾರಿ ಹಿರಿಯ ಶಾಲೆಯಲ್ಲಿ ಕಟ್ಟಡ ಚಿತ್ರ ವಿನ್ಯಾಸ , ಸಮವಸ್ತ್ರ, ಶೂ, ಐಡಿ ಕಾರ್ಡ್ ಚಿಕ್ಕ ಚಿಕ್ಕ ಮಕ್ಕಳನ್ನು ನೋಡಿದಾಗ ಈ ಸ್ವತಂತ್ರೋತ್ಸವ ದಿನಾಚರಣೆವು ವಿಶಿಷ್ಟತೆಯಿಂದ ಕೂಡಿತ್ತು,
ಊರಿನ ಗ್ರಾಮಸ್ಥರು ವಿನ್ಯಾಸವುಳ್ಳ ಕಟ್ಟಡವನ್ನು ಉದ್ಘಾಟಿಸಿ, ಚಿಕ್ಕ ಚಿಕ್ಕ ಮಕ್ಕಳನ್ನು ಮುಖದಲ್ಲಿ ಮಂದಹಾಸವನ್ನು ನೋಡಿ ಖುಷಿ ಕೊಟ್ಟಿತ್ತು.

ನಂತರ ಶಾಲಾ ಅಭಿವೃದ್ಧಿಗೆ ಗ್ರಾಮಸ್ಥರು ಮತ್ತು ವಿವಿಧ ದಾನಿಗಳು ಸಹಕಾರ ಪ್ರಾಮುಖ್ಯತೆವಾದುದು, ಶಾಲೆಗೆ ಊಟದ ತಟ್ಟೆಗಳು ನೀಡಿದ ಶ್ರೀ ಕನಕಪ್ಪ ಮುಂಡರಗಿ ಇವರನ್ನು ಸನ್ಮಾನಿಸಿ, ಅನುಪಸ್ಥಿತಿಯಲ್ಲಿ ಗ್ಲಾಸ್ ನೀಡಿದ ಲಕ್ಷ್ಮಣ ಹೊಸಳ್ಳಿ ಮತ್ತು ನಜೀರ್ ಮಹಮ್ಮದ್ ನಗರ್ , ಟ್ರಿಜರ್ ನೀಡಿದ ಹನುಮಂತಪ್ಪ ಪೂಜಾರ್ ಮತ್ತು ಶ್ರೀಮತಿ ಕಾವೇರಿ ದಾವಿದ್ ಮತ್ತು ಪಂಪಾಪತಿ ದಲಾಲಿ ಇವರನ್ನು ಕೃತಜ್ಞತೆಯನ್ನು ಶಾಲೆಯ ಮುಖ್ಯೋಪಾಧ್ಯರಾದ ಗೋಪಾಲ್ ರವರು ಸಲ್ಲಿಸಿದರೂ.
ಖಾಸಗಿ ಶಾಲೆಗಳಿಗಿಂತ ಸರ್ಕಾರಿ ಶಾಲೆಗಳು ಏನು ಕೊರತೆ ಇಲ್ಲ ಎನ್ನುವ ಹಾಗೆ ಮಾದರಿ ರೂಪದಲ್ಲಿ ಮಾಡುತ್ತೇವೆ,
ಕರ್ನಾಟಕದಲ್ಲಿ ಇರುವ ಎಲ್ಲಾ ಶಾಲೆಗಳು ಇಂಗ್ಲಿಷ್ ಮಧ್ಯದಲ್ಲಿ ಪ್ರಾರಂಭವಾಗಲಿ ಎಂದು ಎಸ್ ಡಿ ಎಮ್ ಸಿ ಅಧ್ಯಕ್ಷರು ಫಕೀರಸಾಬ್ ಹೇಳಿದರು.

ಈ ಸಂದರ್ಭದಲ್ಲಿ ಮಾತನಾಡಿದ ಪಾಲಕರದ ರಹಿಮಾನ್ ಬಾಷಾ ಪ್ರತಿಯೊಬ್ಬ ಪಾಲಕರು ಶಾಲೆಯ ಕಾರ್ಯ ಚಟುವಟಿಕೆಯವಾಗಿ ಪಾಲ್ಗೊಳ್ಳಬೇಕು ಮತ್ತು ಸಹಕರಿಸಬೇಕು ಎಂದು ಹೇಳಿದರು.

ಗ್ರಾಮದ ಯುವಕ ಮತ್ತು ಸಮಾಜಸೇವಕರಾದ ಸಮೀರ್ ಬಂಡಿಯಹರ್ಲಾಪುರ್ ಮಾತನಾಡಿ ನಾಡಿನ ಜನತೆಗೆ ಸ್ವಾತಂತ್ರ್ಯೋತ್ಸವ ಶುಭಾಶಯ ತಿಳಿಸಿ, ಸರ್ಕಾರಿ ಶಾಲೆಗಳಿಗೆ ಹೆಚ್ಚಿನ ಅನುದಾನ ಕೊಡಬೇಕೆಂದು ವಿನಂತಿಸಿಕೊಂಡರು.

ಈ ಸಂದರ್ಭದಲ್ಲಿ ಶಾಲಾ ಮುಖ್ಯಪಾದ್ಯರಾದ ಗೋಪಾಲ,
ಹಿರಿಯ ಶಿಕ್ಷಕರಾದ ವಲ್ಲಬ , ಸಂತೋಷಪ್ಪ, ಭುವನೇಶ್ವರಿ ,ಮೆಹಬೂಬ ಪಾಷ, ಎಸ್ ಡಿ ಎಮ್ ಸಿ ಸದ್ಯಸರಾದ ಸುನೀಲ್,ಹುಸೇನ್ ಸಾಬ್ ಕೊಪ್ಪಳ ,ನಾಗರಾಜ್,ಅಂಜಿನಿ,ಗ್ರಾಮ ಪಂಚಾಯಿತಿ ಸದಸ್ಯರಾದ ಹನುಮಂತ ಕರಡಿ, ಕನಕಪ್ಪ,ಹನುಮಂತಪ್ಪ ಕಾಟ್ರಳ್ಳಿ,ಯುವಕರಾದ ಹಾಸ್ಯ ಕಲಾವಿದ ಮಂಜುನಾಥ ಆಗೋಲಿ,ಪಂಪಾಪತಿ, ಪ್ರವೀಣ,ರವಿ ಹಟ್ಟಿ, ಹುಸೇನ್ ಆಟೋ. ಅಂಗನವಾಡಿ ಕೇಂದ್ರ ಚಂದ್ರಮ್ಮ,ರುಕ್ಷನ ಬೇಗಂ,ಪತ್ರಕರ್ತ ಧರ್ಮಣ್ಣ ಹಟ್ಟಿ ಉಪಸ್ಥಿತಿಯಲ್ಲಿ ಇದ್ದರು.

About Mallikarjun

Check Also

ತೆಲಗಿ ಮಾದರಿಯಲ್ಲಿ ಮತ್ತೊಂದು ಭಾರೀ ನಕಲಿ ಛಾಪಾ ಕಾಗದ ಹಗರಣ

Another massive fake printing paper scam on the Telugu model ಕಾನೂನು ಬಾಹಿರ ಫ್ರಾಂಕಿಂಗ್ ಮೂಲಕ ಸರ್ಕಾರದ …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.