Our Soil My Country Campaign: Soil collection by Bharat Scouts & Guides
ಕೊಪ್ಪಳ ಆಗಸ್ಟ್ 25 (ಕರ್ನಾಟಕ ವಾರ್ತೆ): ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಕೊಪ್ಪಳ ಜಿಲ್ಲಾ ಸಂಸ್ಥೆಯಿಂದ ಅಜಾಧಿಕಾ ಅಮೃತ್ ಮಹೋತ್ಸವದ ಅಂಗವಾಗಿ “ಮೇರಾ ಮಿಟ್ಟಿ ಮೇರಾ ದೇಶ್” ಅಭಿಯಾನದಡಿ
ಮಣ್ಣು ಸಂಗ್ರಹಿಸಿದ ಕಳಸಕ್ಕೆ ಪೂಜಾ ಕಾರ್ಯಕ್ರಮವು ಆಗಸ್ಟ್ 25ರಂದು ಸಂಸ್ಥೆಯ ಜಿಲ್ಲಾ ಕೇಂದ್ರ ಕಾರ್ಯಾಲಯದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಜಿಲ್ಲಾ ಕಾರ್ಯದರ್ಶಿಗಳಾದ ಮಾರುತಿ ಆರೇರ, ಸಹಾಯಕ ಕಾರ್ಯದರ್ಶಿಗಳಾದ ಪ್ರಭಾಕರ್ ದಾಸರ, ಮೌಲಾನಾ ಅಜಾದ್ ಶಾಲೆಯ ಪ್ರಾಂಶುಪಾಲರಾದ ನೀಲಪ್ಪ, ಶಾಸಕರ ಮಾದರಿ ಶಾಲೆಯ ಮುಖ್ಯ ಗುರುಗಳಾದ ಅಶೋಕ್ ಕಂಚಗಾರ್, ಜಿಲ್ಲಾ ಸಂಸ್ಥೆಯ ಖಜಾಂಚಿ ಪ್ರಹ್ಲಾದ್ ಬಡಿಗೇರ್, ಹಿರಿಯ ಶಿಕ್ಷಕರಾದ ಶಶಿಧರ್ ಪೂರ್ತಿಗೇರಿ, ಮೌಲಾನಾ ಆಜಾದ್ ಶಾಲೆಯ ಸ್ಕೌಟ್ ಶಿಕ್ಷಕರಾದ ಶಶಿಕುಮಾರ್, ಎ ಎಸ್.ಓ.ಸಿ ಶರೀಫ್ ಹತ್ತಿಮತ್ತೂರ, ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಎಲ್ಲಾ ತಾಲೂಕುಗಳಿಂದ ಸಂಗ್ರಹ: ಕೊಪ್ಪಳ ಜಿಲ್ಲೆಯ ಎಲ್ಲಾ ತಾಲೂಕುಗಳಿಂದ ಮಣ್ಣು ಸಂಗ್ರಹ ಮಾಡಿದ್ದು, ಜಿಲ್ಲಾ ಸಂಸ್ಥೆ ಮೂಲಕ ಶಿಕ್ಷಕರಾದ ಬಸವರಾಜ ಚಿತ್ತಾಪುರ ಹಾಗೂ ಸಂಸ್ಥೆಯ ಇನ್ನೀತರ ಪದಾಧಿಕಾರಿಗಳ ಸಮ್ಮುಖದಲ್ಲಿ,
ಆಗಸ್ಟ್ 26ರಂದು ರಾಜ್ಯ ಸಂಸ್ಥೆಯಿಂದ ಜರಗುವ ಕಾರ್ಯಕ್ರಮಕ್ಕೆ ಕಳುಹಿಸಲಾಯಿತು.
ಮೈನ್ನಳ್ಳಿ ಗ್ರಾಮದ ಸರ್ಕಾರಿ ಮಾದರಿಯ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಣ್ಣಿನ ಕಳಸಕ್ಕೆ ಶಾಲೆಯ ಶಿಕ್ಷಕರು ಮತ್ತು ಸ್ಕೌಟ್ಸ್ ಗೈಡ್ಸ್ ವಿದ್ಯಾರ್ಥಿಗಳು ಪೂಜೆ ಸಲ್ಲಿಸಿ ಕಾರ್ಯಕ್ರಮ ಯಶಸ್ವಿಗೊಳಿಸಿದರು.