Breaking News

ಕ್ರಾಂತಿಚಕ್ರ ಬಳಗ ಕಾರ್ಯಾಲಯದಲ್ಲಿ ಕೋರೆಗಾಂವ್ ದಿನಾಚರಣೆ ಆಚರಣೆ.

Koregaon Day Celebration at Krantichakra Balaga Office.

.

ಗಂಗಾವತಿ: ೧೮೧೮ ರ ಜನೇವರಿ-೦೧ ರಂದು ೨೫೦೦೦ ಜನ ಮರಾಠರ ವಿರುದ್ಧ ಮೆಹರರು ಕೋರೆಗಾಂವ್‌ನಲ್ಲಿ ಯುದ್ಧ ಮಾಡಿ ಅವರನ್ನು ಸೋಲಿಸಿದ್ದಾರೆ. ಅದರ ಅಂಗವಾಗಿ ಸದರಿ ದಿನವನ್ನು ಕೋರೆಗಾಂವ್ ವಿಜಯೋತ್ಸವ ದಿನವನ್ನಾಗಿ ಆಚರಿಸಲಾಗುತ್ತಿದೆ. ಅದರಂತೆ ಇಂದು ಕ್ರಾಂತಿ ಚಕ್ರ ಬಳಗ ಕಾರ್ಯಾಲಯದಲ್ಲಿ ಕೋರೆಗಾಂವ್ ದಿನಾಚರಣೆ ಆಚರಿಸಲಾಯಿತು ಎಂದು ರಾಜ್ಯಾಧ್ಯಕ್ಷರಾದ ಭಾರಧ್ವಾಜ್ ಪ್ರಕಟಣೆಯಲ್ಲಿ ತಿಳಿಸಿದರು.
ಮರಾಠರು ಮೆಹರರನ್ನು ಅಸ್ಪಶ್ಯರೆಂದು ತಿಳಿದು ಅವರನ್ನು ಕಡೆಗಾಣಿಸಿದ ವಿಷಯವಾಗಿ ಮೆಹರರು ಬ್ರಿಟಿಷರ ಪರವಾಗಿ ಮರಾಠರ ವಿರುದ್ಧ ಹೋರಾಟ ಮಾಡಿ ಅವರನ್ನು ಸೋಲಿಸಿದ್ದು ಈಗ ಇತಿಹಾಸವಾಗಿದೆ. ಈಗಲಾದರೂ ದಲಿತರನ್ನು ಕಡೆಗಾಣಿಸದೇ ಹತ್ತಿರ ಕರೆದುಕೊಳ್ಳಬೇಕು. ಇಲ್ಲದಿದ್ದಲ್ಲಿ ದಲಿತರ ಕೈಯಲ್ಲಿ ಸವರ್ಣೀಯರಿಗೆ ಸೋಲು ಖಾಯಂ ಆಗಲಿದೆ. ಆರ್.ಎಸ್.ಎಸ್ ಮುಖಂಡರು ದಲಿತರನ್ನು ಕಡೆಗಾಣಿಸುವುದನ್ನು ಬಿಟ್ಟು, ದಲಿತರೊಂದಿಗೆ ಹೊಂದಾಣಿಕೆ ಮಾಡಿಕೊಳ್ಳದಿದ್ದರೆ ಕಾರ್ಪೋರೇಟ್ ಕಂಪನಿಗಳು ಭಾರತವನ್ನು ಆಳುವುದು ಖಚಿತ ಎಂದಿದ್ದಾರೆ.
ಈ ಸಂದರ್ಭದಲ್ಲಿ ಶಿವಾನಂದ ಮೆಕ್ಯಾನಿಕ್, ಕೃಷ್ಣ ಬೇಡಜಂಗಮ, ವಿದ್ಯಾರ್ಥಿ ಘಟಕ ಮುಖಂಡ ಇಂಕಿಲಾಬ್ ಫಯಾಜ್ ಸೇರಿದಂತೆ ಇನ್ನಿತರರು ಇದ್ದರು.

About Mallikarjun

Check Also

ವೈದ್ಯರ ಭಾರವನ್ನು ಕಡಿಮೆ ಮಾಡುವವರು ಶುಶ್ರೂಷಕಿಯರು : ಡಾ.ಲಿಂಗರಾಜ್‌ಸರ್ಕಾರಿ ಉಪವಿಭಾಗಆಸ್ಪತ್ರೆಯಲ್ಲಿ ವಿಶ್ವ ದಾದಿಯರ ದಿನಾಚರಣೆ

ಗಂಗಾವತಿ,14:ವೈದ್ಯರ ಭಾರವನ್ನು ಕಡಿಮೆ ಮಾಡುವವರು ಶುಶ್ರೂಷಕಿಯರು, ಅವರಿಗೆ ಗೌರವ ಸಲ್ಲಿಸಲೆಂದೇ ಪ್ರತಿ ವರ್ಷ ಮೇ.12 ರಂದು ಅಂತಾರಾಷ್ಟ್ರೀಯ ಶುಶ್ರೂಷಕಿಯರ ದಿನವನ್ನು …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.