Sauharda Cooperative Societies support Nirmala Tungabhadra campaign: Sudhakar Kalmani

ಗಂಗಾವತಿ:ಶೃಂಗೇರಿಯ ಜಗದ್ಗುರು ಶ್ರೀ ಭಾರತಿ ತೀರ್ಥ ಮಹಾಸ್ವಾಮಿಗಳಿಂದ ಪ್ರಾರಂಭಗೊಂಡ ನಿರ್ಮಲ ತುಂಗಭದ್ರಾ ಅಭಿಯಾನ ಶಿವಮೊಗ್ಗ ತುಂಗ ಡ್ಯಾಮ್ ನಿಂದ ಹೊಸಪೇಟೆಯ ಭದ್ರಾ ಡ್ಯಾಮ್ ವರೆಗೂ ಮತ್ತು ತುಂಗಭದ್ರ ನದಿ ಗಂಗಾವತಿ ತಾಲೂಕಿನ ಕಿನ್ನಿಂದೇಯ ಪವಿತ್ರ ಸ್ಥಳದಿಂದ ಹರಿಯುತ್ತಿದ್ದು ಈ ತುಂಗಭದ್ರ ನದಿ ಅಪವಿತ್ರವಾಗದಂತೆ ಪವಿತ್ರವಾಗಿ, ಸ್ವಚ್ಛವಾಗಿ ಹರಿಯುವಂತೆ ಜನರಲ್ಲಿ ಜಾಗೃತಿ ಮೂಡಿಸುವ ಅಭಿಯಾನದ ರಥೋತ್ಸವಕ್ಕೆ ಸೌಹಾರ್ದ ಸಹಕಾರಿ ಸಂಘಗಳ ಬಳಗ ಗಂಗಾವತಿ, ಸ್ವಾಇಚ್ಛೆಯಿಂದ ಬೆಂಬಲ ನೀಡುತ್ತಿದೆ.
ಗಾಲಿಶ್ರೀ ಸೌಹಾರ್ದ ಸಹಕಾರಿ ಬ್ಯಾಂಕ್ ನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಸೌಹಾರ್ದ ಸಹಕಾರಿ ಸಂಘಗಳ ಬಳಗದ ಅಧ್ಯಕ್ಷರಾದ ಸುಧಾಕರ ಕಲ್ಮನಿ ಅವರು ಮಾತನಾಡಿ ಬಳ್ಳಾರಿ, ರಾಯಚೂರು, ಕೊಪ್ಪಳ, ಹಾಗೂ ಹೊಸಪೇಟೆ ಜಿಲ್ಲೆಯ ರೈತರ ಜೀವನಾಡಿಯಾದ ತುಂಗಭದ್ರಾ ನದಿಯ ಸ್ವಚ್ಛತೆಗೆ ಅಭಿಯಾನದ ಮೂಲಕ ಸರಕಾರದ ಕಣ್ಣು ತೆರೆಸುವ ಉದ್ದೇಶ ಹೊಂದಿದೆ. ಗಂಗಾ ಸ್ಥಾನ ತುಂಗಾ ಪಾನ” ಎಂಬ ಮಾತಿನಂತೆ ತುಂಗಭದ್ರ ಮಡಿಲಿಗೆ ದಿನದಿಂದ ದಿನಕ್ಕೆ ತ್ಯಾಜ್ಯಗಳು ಕಾರ್ಖಾನೆಯಿಂದ ಸೇರುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಇದಕ್ಕೆ ಸರ್ಕಾರ ಪರ್ಯಾಯ ವ್ಯವಸ್ಥೆಯನ್ನು ಅಯಾ ಕಾರ್ಖಾನೆಗಳ ಮಾಲೀಕರಿಗೆ ಹೊಣೆಗಾರಿಕೆ ನೀಡುವುದರ ಮೂಲಕ, ತುಂಗಭದ್ರ ಮಲಿನ ವಾಗದಂತೆ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಅವರು ಹೇಳಿದರು.
ನಂತರ ಶಾಂತಮೂರ್ತಿ ಎಂ ಮಾತನಾಡಿ, ಈಗಾಗಲೇ ತುಂಗಭದ್ರ ಜಲಾಶಯ 34 ಟಿಎಂಸಿ ಎಷ್ಟು ಹೂಳು ತುಂಬಿದ್ದು, ತೆರವಿಗೆ ಮುಂದಾಗಬೇಕು. ಇದರಿಂದ ಅಧಿಕ ಪ್ರಮಾಣದ ನೀರು ಸಂಗ್ರಹಿಸಲು ಸಾಧ್ಯ, ಜೊತೆಗೆ ರೈತರ ಕೃಷಿ ಚಟುವಟಿಕೆಗೆ ಹಾಗೂ ಕುಡಿಯುವ ನೀರಿಗೆ ಅನುಕೂಲವಾಗಲಿದೆ ಎಂದು ಸ್ಪಷ್ಟಪಡಿಸಿದರು. ಮತ್ತು ತುಂಗಭದ್ರೆ ನದಿ ರೈತರ ಜೀವನಾಡಿಯಾಗಿದ್ದು ಮತ್ತು ಲಕ್ಷಾಂತರ ಜನರ ಕುಡಿಯುವ ನೀರಿಗೆ ಅಮೃತಧಾರೆ ಯಾಗಿ ಹೆಸರುವಾಸಿಯಾಗಿದ್ದು, ಇಂತಹ ಪವಿತ್ರ ನದಿ ಮಲಿನಗೊಳ್ಳುವುದು ಬೇಡ, ಇದನ್ನು ಸ್ವಚ್ಛತೆಯಿಂದ ಕಾಪಾಡಿಕೊಳ್ಳಬೇಕಾಗಿರುವುದು ಪ್ರತಿಯೊಬ್ಬರ ಕರ್ತವ್ಯ ಎಂದು ಹೇಳಿದರು.
ತುಂಗಭದ್ರೆಯ ಮಕ್ಕಳಾದ ನಾವು ತಾಯಿ, ತುಂಗಭದ್ರೆಯ ಒಡಲ ಶುದ್ದಿಗೆ, ಜಾತಿ-ಮತ-ಪಂಥಗಳ ಮೀರಿ, ಶುದ್ಧ ಅಂತಃಕರ್ಣದಿಂದ ನೋಡಿಕೊಳ್ಳಬೇಕು, ತುಂಗಭದ್ರ ಅರಿದೇಹೋಗುವ ಪ್ರತಿಯೊಂದು ಜಿಲ್ಲೆಯ ನಾಗರಿಕರು ತಮ್ಮ ತನು-ಮನ- ಧನದಿಂದ ಎಲ್ಲರೊಂದಾಗಿ, ಪ್ಲಾಸ್ಟಿಕ್ ಬಳಕೆಯನ್ನು ನಿಯಂತ್ರಿಸಿ, ವೈಜ್ಞಾನಿಕವಾಗಿ ತ್ಯಾಜ್ಯ ನಿರ್ವಹಿಸಿ, ಕೃಷಿ ಮತ್ತು ಕಾರ್ಖಾನೆಯ ರಾಸಾಯನಿಕ ತ್ಯಾಜ್ಯ ನೀರು ಶುದ್ದೀಕರಣಗೊಳಿಸಿ, ನದಿ ಶುದ್ಧತೆಗೆ ಆದ್ಯತೆಕೊಟ್ಟು, ನೀರಿನ ಉತ್ತಮ ಬಳಕೆ ಮತ್ತು ಸಂರಕ್ಷಣೆಯಿಂದ, ಮಾನವ, ಜಲಚರ ಮತ್ತು ಸಮಸ್ತ ಜೀವಸಂಕುಲ ಉಳಿವಿಗೆ ಸ್ವಚ್ಛ, ಶುದ್ಧ ಕುಡಿಯುವ ಮತ್ತು ಬಳಸಲು ಯೋಗ್ಯವಾದ ಜೀವನದಿ ನಿರ್ಮಲ ತುಂಗಭದ್ರೆಯನ್ನು ಮುಂದಿನ ಪೀಳಿಗೆಯ ಭವಿಷ್ಯಕ್ಕಾಗಿ, ಉಳಿಸಿಕೊಳ್ಳಲು, ಪ್ರತಿಯೊಬ್ಬರು ಕಾಯಾ-ವಾಚಾ-ಮನಸಾ ನಿರ್ಮಲ ತುಂಗಭದ್ರೆಯ ಸಂಕಲ್ಪವನ್ನು ಸ್ವ-ಇಚ್ಛೆಯಿಂದ ಒಪ್ಪಿಕೊಂಡು, ಆತ್ಮಸಾಕ್ಷಿಯಾಗಿ ಈ “ಜಲಸಂಕಲ್ಪ” ವನ್ನು ಸ್ವೀಕರಿಸಬೇಕೆಂದು ಹೇಳಿದರು.
ಈ ಸಂದರ್ಭದಲ್ಲಿ ಸೌಹಾರ್ದ ಸಹಕಾರಿ ಸಂಘಗಳ ಮುಖ್ಯ ಕಾರ್ಯನಿರ್ವಾಹಕರಾದ ಶ್ರೀ ಕಲ್ಯಾಣ ಬಸವ ಷಣ್ಮುಖಪ್ಪ ಕುರುಗೋಡು, ಸತೀಶ್, ಶಾಂತಯ್ಯ ಹಿರೇಮರ್, ಮೌನೇಶ್, ವಸಂತ್ ಆದಿಮನಿ, ಮಲ್ಲಿಕಾರ್ಜುನ್ ಕೋಚಿ. ಲಿಂಗರಾಜ್, ಸಂತೋಪ್ ಲಂಕೆ, ರಾಘವೇಂದ್ರ, ಮಹಾಬಲೇಶ್, ಪಟ್ಟಣ್ ಶೆಟ್ಟಿ ಹಾಗೂ ನರಸಿಂಹ ಕುಲಕರ್ಣಿ ಉಪಸ್ಥಿತರಿದ್ದರು.