ಶಿಕ್ಷಣ ಇಲಾಖೆಯ ಕ್ರಮಗಳನ್ನು ಎತ್ತಿ ಹಿಡಿದ ಹೈಕೋರ್ಟ್: ಶಿಕ್ಷಣ  ಸಂಸ್ಥೆಗೆ 25 ಸಾವಿರ ರೂ ದಂಡ, ರಿಟ್ ಅರ್ಜಿ ವಜಾ

H.Mallikarjun
H.Mallikarjun - Kalyanasiri
3 Min Read
ಜಾಹೀರಾತು

ಸಾಮರ್ ಇಂಟರ್ ನ್ಯಾಷನಲ್ ಇಸ್ಲಾಮಿಕ್ ಶಾಲೆಯ ನೋಂದಣಿ ರದ್ದು: ಶಾಲಾ ಶಿಕ್ಷಣ ಇಲಾಖೆಯಿಂದ ಆದೇಶ – ವಿದ್ಯಾರ್ಥಿಗಳಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸುವಂತೆ ನಿರ್ದೇಶನ

ಜಾಹೀರಾತು

High Court upholds Education Department's actions: Educational institution fined Rs 25,000, writ petition dismissed

ಶಿಕ್ಷಣ ಇಲಾಖೆಯ ಕ್ರಮಗಳನ್ನು ಎತ್ತಿ ಹಿಡಿದ ಹೈಕೋರ್ಟ್: ಶಿಕ್ಷಣ  ಸಂಸ್ಥೆಗೆ 25 ಸಾವಿರ ರೂ ದಂಡ, ರಿಟ್ ಅರ್ಜಿ ವಜಾ

  ಬೆಂಗಳೂರು,ಏ.16:    ಥಣಿ ಸಂದ್ರದ ಸಾಮರ್ ಇಂಟರ್ ನ್ಯಾಷನಲ್ ಇಸ್ಲಾಮಿಕ್ ಶಾಲೆಯ ನೋಂದಣಿಯನ್ನು “ಕರ್ನಾಟಕ ಶಿಕ್ಷಣ ಕಾಯ್ದೆ 1983 ರ ಸೆಕ್ಷನ್ 34 ರಡಿ ಶಾಲಾ ಶಿಕ್ಷಣ ಇಲಾಖೆಯ ಆಯುಕ್ತಾಲಯ ರದ್ದುಡಿಸಿದೆ.

ಸರ್ಕಾರದ ತೀರ್ಮಾನದ ವಿರುದ್ಧ ಸಾಮರ್ ಇಂಟರ್ ನ್ಯಾಷನಲ್ ಇಸ್ಲಾಮಿಕ್ ಶಾಲಾ ಆಡಳಿತ ಮಂಡಳಿ ನಡೆಸಿದ ಕಾನೂನು ಹೋರಾಟಕ್ಕೆ ಹಿನ್ನೆಡೆಯಾಗಿದ್ದು, ಶಾಲಾ ಆಡಳಿತ ಮಂಡಳಿಯ ವಾದವನ್ನು ಹೈಕೋರ್ಟ್ ಸಂಪೂರ್ಣವಾಗಿ ತಿರಸ್ಕರಿಸಿದೆ. ಅನಗತ್ಯವಾಗಿ ರಿಜ್ ಅರ್ಜಿ ಸಲ್ಲಿಸಿದ ಅರ್ಜಿದಾರರಾದ ಶಾಲಾ ಆಡಳಿತ ಮಂಡಳಿಗೆ 25 ಸಾವಿರ ರೂ ದಂಡ ವಿಧಿಸಿ, ರಿಜ್ ಅರ್ಜಿ ವಜಾಗೊಳಿಸಿ, ಸರ್ಕಾರದ ಕ್ರಮವನ್ನು ಎತ್ತಿ ಹಿಡಿದಿದೆ.

ಹೆಜ್ಜೆ, ಹೆಜ್ಜೆಗೂ ನೆಲದ ಕಾನೂನು ಉಲ್ಲಂಘಿಸಿ ಸುಳ್ಳು ಮಾಹಿತಿ ನೀಡಿ ಸರ್ಕಾರವನ್ನು ದಾರಿ ತಪ್ಪಿಸುತ್ತಿದ್ದ ಶಿಕ್ಷಣ ಸಂಸ್ಥೆಗೆ ಕೊನೆಗೂ ಬೀಗ ಮುದ್ರೆ ಹಾಕುವಂತೆ ಸೂಚಿಸಲಾಗಿದೆ. ಎಪ್ರಿಲ್ 10 ರಂದು ಸರ್ಕಾರ ಅಧಿಕೃತ ಆದೇಶ ಜಾರಿ ಮಾಡಿದೆ. ಶಾಲೆಯಲ್ಲಿ ಕಲಿಯುತ್ತಿರುವ 1ನೇ  ತರಗತಿಯಿಂದ 7ನೇ ತರಗತಿಯ  ವಿದ್ಯಾರ್ಥಿಗಳು ಮತ್ತು 8ನೇ ತರಗತಿಯಿಂದ 10ನೇ ತರಗತಿಯ ಎಲ್ಲಾ  ವಿದ್ಯಾರ್ಥಿಗಳ ಶಿಕ್ಷಣಕ್ಕೆ ತೊಂದರೆಯಾಗದಂತೆ ತಕ್ಷಣವೇ ಪರ್ಯಾಯ ವ್ಯವಸ್ಥೆ ಮಾಡಬೇಕೆಂದು ಆದೇಶಿಸಿದೆ. 

ಈ ಆದೇಶ ಉಪ ನಿರ್ದೇಶಕರಿಗೆ ತಲುಪಿದ ಏಳು ದಿನಗಳ ಒಳಗಾಗಿ ಕರ್ನಾಟಕ ಶಿಕ್ಷಣ ಕಾಯ್ದೆ 1983 ರ, 1999 ರ 13[3] ರ ನಿಯಮದಂತೆ ಪ್ರಸ್ತುತ ಸಾಲಿನಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಸಮೀಪದ ಶಾಲೆಗೆ ದಾಖಲಿಸಲು ಉಪ ನಿರ್ದೇಶಕರು ಸೂಕ್ತ ಕ್ರಮ ವಹಿಸಬೇಕು. ವಿದ್ಯಾರ್ಥಿಗಳಿಗೆ ಪರ್ಯಾಯ ವ್ಯವಸ್ಥೆ ಮಾಡಬೇಕು ಎಂದು ಹೇಳಿದೆ.

ಸಾಮರ್ ಇಂಟರ್ ನ್ಯಾಷನಲ್ ಇಸ್ಲಾಮಿಕ್ ಶಾಲೆಯ ಶೈಕ್ಷಣಿಕ ದಾಖಲೆಗಳನ್ನು ಹತ್ತಿರದ ಸರ್ಕಾರಿ ಪ್ರಾಥಮಿಕ ಶಾಲೆಗೆ ಹಸ್ತಾಂತರಿಸಿ ಈ ಸಂಬಂಧಿತ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಲ್ಲಿ ಪ್ರತ್ಯೇಕ ದಾಸ್ತಾನು ವಹಿಯಲ್ಲಿ ನಮೂದಿಸಿ ದಾಖಲೆ ವಹಿ ನಿರ್ವಹಿಸಬೇಕು. ನೋಂದಣಿ ರದ್ದುಪಡಿಸಿರುವ ಆದೇಶವನ್ನು ಉಪ ನಿರ್ದೇಶಕರ ಹಂತದಲ್ಲಿ ಜಾರಿ ಮಾಡಬೇಕು. ಈ ಆದೇಶದ ತಿದ್ದುಪಡಿ ಇಲ್ಲವೆ ಮಾರ್ಪಾಡಿಗೆ ಅವಕಾಶವಿಲ್ಲ ಎಂದು ಸ್ಪಷ್ಟವಾಗಿ ತಿಳಿಸಲಾಗಿದೆ.

ಶಾಲಾ ಜಾಗಕ್ಕೆ ಸಂಬಂಧಿಸಿದಂತೆ ಶಿಕ್ಷಣ ಸಂಸ್ಥೆಯವರು ಯಾವುದೇ ದಾಖಲೆಗಳನ್ನು ಇಲಾಖೆಯ ಪರಿಶೀಲನೆಗೆ ಒದಗಿಸಿಲ್ಲ. ದಾಖಲೆಗಳಲ್ಲಿ ಶಿಕ್ಷಣ ಸಂಸ್ಥೆಯನ್ನು ಎರಡು ಹೆಸರುಗಳಿಂದ ನಮೂದಿಸಲಾಗಿದೆ. ಶಾಲೆಗೆ ಅನುಮತಿ ಪಡೆಯಲು ಸಲ್ಲಿಸಿದ ಮನವಿಯಲ್ಲಿ ತಪ್ಪು ಮತ್ತು ನಕಲಿ ದಾಖಲೆಗಳನ್ನು ಸಲ್ಲಿಸಲಾಗಿದೆ. ಬ್ಯಾಂಕ್ ದಾಖಲೆಗಳಲ್ಲಿಯೂ ಸಹ ತಿದ್ದುಪಡಿ, ಮಾರ್ಪಾಟುಗಳನ್ನು ಮಾಡಿರುವುದು ಸಂದೇಹಾಸ್ಪದವಾಗಿದೆ ಎಂದಿದೆ.

ವಿವಿಧ ಹಂತಗಳಲ್ಲಿ ಸಲ್ಲಿಸಿರುವ ದಾಖಲೆಗಳನ್ನು ತಿದ್ದುಪಡಿ ಮಾಡಿದ್ದು, ಸಾಕಷ್ಟು ಲೋಪದೋಷಗಳು ಕಂಡು ಬಂದಿವೆ. 1 ರಿಂದ 10 ನೇ ತರಗತಿಗೆ ಮಾನ್ಯತೆ ನವೀಕರಕ್ಕಾಗಿ ಸಲ್ಲಿಸಿದ ಅರ್ಜಿಯಲ್ಲಿ ಜಾಮೀಯಾ ಮಹಮ್ಮದೀಯ ಮನ್ಸೂರ ಎಂದು ನಮೂದಿಸಿ, ಹೈಕೋರ್ಟ್ ನಲ್ಲಿ ದೂರು ದಾಖಲಾದ ತರುವಾಯ ಸಂಸ್ಥೆಯ ಹೆಸರು ತಪ್ಪಾಗಿದೆ. ಸರಿ ಪಡಿಸಿಕೊಡುವಂತೆ ಶಿಕ್ಷಣ ಸಂಸ್ಥೆಯವರು ಕೋರಿರುವುದನ್ನು ಸಹ ಆದೇಶದಲ್ಲಿ ನಮೂದಿಸಲಾಗಿದೆ.

ಜೊತೆಗೆ ಮುಂಬೈ ವ್ಯಾಪ್ತಿಯಲ್ಲಿ ದಿ ಆಲ್ ಜಮಿಯಾ ಮೊಹಮ್ಮದೀಯ ಎಜುಕೇಶನ್ ಸೊಸೈಟಿ ಹೆಸರಿನಲ್ಲಿ ಸಂಸ್ಥೆ ನೋಂದಣಿಯಾಗಿದೆ. ಆದರೆ ಜಾಮಿಯ ಮೊಹಮ್ಮದ್ದೀಯ ಎಜುಕೇಶನ್ ಸೊಸೈಟಿ ಮತ್ತು ಜಾಮಿಯ ಮೊಹಮ್ಮದೀಯ ಮನ್ಸೂರ ಹೆಸರಿನಲ್ಲಿ ಯಾವುದೇ ಸಂಸ್ಥೆಯನ್ನು ನೋಂದಾಯಿಸಿಲ್ಲ ಎಂದು ಸದರಿ ಸಂಸ್ಥೆಯವರು ನೀಡಿರುವ ಸ್ಪಷ್ಟೀಕರಣವನ್ನು ಆದೇಶದಲ್ಲಿ ಸೇರಿಸಲಾಗಿದೆ. ಹೀಗೆ ಎಲ್ಲಾ ಹಂತಗಳಲ್ಲೂ ಶಿಕ್ಷಣ ಇಲಾಖೆಯನ್ನು ದಾರಿ ತಪ್ಪಿಸಿರುವುದು ಕಂಡು ಬಂದಿದೆ.

__—–++++±±++++(++++++++++++((((((((+++

ಶಾಲೆಯ ಮಾನ್ಯತೆಯನ್ನು ರದ್ದುಪಡಿಸಿದ ಶಾಲಾ ಶಿಕ್ಷಣ ಇಲಾಖೆಯ ಕ್ರಮವನ್ನು ಪ್ರಶ್ನಿಸಿ ಮುಂಬೈ ಮತ್ತು ಬೆಂಗಳೂರಿನ ಜಾಮಿಯಾ ಮೊಹಮ್ಮದೀಯ ಎಜುಕೇಶನ್ ಸೊಸೈಟಿ ಸಲ್ಲಿಸಿದ್ದ ರಿಜ್ ಅರ್ಜಿಯನ್ನು ಹೈಕೋರ್ಟ್ ನ್ಯಾಯಮೂರ್ತಿ ಇ.ಎಸ್. ಇಂದ್ರೇಶ್ ನೇತೃತ್ವದ ನ್ಯಾಯಪೀಠ ವಜಾಗೊಳಿಸಿದೆ. ಅನಗತ್ಯವಾಗಿ ರಿಟ್ ಅರ್ಜಿ ಸಲ್ಲಿಸಿದ ಕಾರಣಕ್ಕೆ ಅರ್ಜಿದಾರರಾದ ಶಾಲಾ ಆಡಳಿತ ಮಂಡಳಿಗೆ 25 ಸಾವಿರ ರೂ ದಂಡ ವಿಧಿಸಿ ದಂಡದ ಮೊತ್ತವನ್ನು ಕರ್ನಾಟಕ ಕಾನೂನು ಸೇವಾ ಪ್ರಾಧಿಕಾರಕ್ಕೆ ಪಾವತಿಸುವಂತೆ ಆದೇಶಿಸಿದೆ.

ಶಿಕ್ಷಣ ಸಂಸ್ಥೆಯ ಮಾನ್ಯತೆ ರದ್ದುಪಡಿಸಲು ಕೈಗೊಂಡ ಶಾಲಾ ಶಿಕ್ಷಣ ಇಲಾಖೆಯ ಕ್ರಮಗಳನ್ನು ನ್ಯಾಯಪೀಠ ಎತ್ತಿ ಹಿಡಿದಿದೆ. ಶಿಕ್ಷಣ ಸಂಸ್ಥೆಯ ಕ್ರಮಗಳು ಸಮಪರ್ಕವಾಗಿವೆ. ಜೊತೆಗೆ ಸಂಸ್ಥೆಯ ವಿರುದ್ಧ ಕೊತ್ತನೂರು ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಮೊಕದ್ದಮೆಯನ್ನು ಆದೇಶದಲ್ಲಿ ನ್ಯಾಯಪೀಠ ಉಲ್ಲೇಖಿಸಿದೆ.

Total Views: 0
Share This Article