ಪ್ರಶ್ನೆ ಪತ್ರಿಕೆ ಸೋರಿಕೆ ಹಗರಣ, ನೀಟ್ ಪರೀಕ್ಷೆ ಹಾಗೂ NTA ಸಂಸ್ಥೆಯನ್ನು ರದ್ದುಗೊಳಿಸುವಂತೆ, ಧರ್ಮೇಂದ್ರ ಪ್ರಧಾನ್ ರಾಜಿನಾಮೆಗಾಗಿ ಒತ್ತಾಯಿಸಿ ಎಸ್ಎಫ್ಐ ಪ್ರತಿಭಟನೆ

H.Mallikarjun
H.Mallikarjun - Kalyanasiri
4 Min Read

SFI protests over the question paper leak scandal and the NEET exam, demanding the scrapping of the NTA and the resignation of Dharmendra Pradhan.

ಪ್ರಶ್ನೆ ಪತ್ರಿಕೆ ಸೋರಿಕೆ ಹಗರಣ, ನೀಟ್ ಪರೀಕ್ಷೆ ಹಾಗೂ NTA ಸಂಸ್ಥೆಯನ್ನು ರದ್ದುಗೊಳಿಸುವಂತೆ, ಧರ್ಮೇಂದ್ರ ಪ್ರಧಾನ್ ರಾಜಿನಾಮೆಗಾಗಿ ಒತ್ತಾಯಿಸಿ ಎಸ್ಎಫ್ಐ ಪ್ರತಿಭಟನೆ

ಜಾಹೀರಾತು

ಗಂಗಾವತಿ:ಭಾರತ ವಿದ್ಯಾರ್ಥಿ ಫೆಡರೇಶನ್ (ಎಸ್ಎಫ್ಐ) ಗಂಗಾವತಿ ತಾಲ್ಲೂಕು ಸಮಿತಿ ಪ್ರಶ್ನೆ ಪತ್ರಿಕೆ ಸೋರಿಕೆ ಹಗರಣ, ನೀಟ್ ಪರೀಕ್ಷೆ ಹಾಗೂ NTA ಸಂಸ್ಥೆಯನ್ನು ರದ್ದುಗೊಳಿಸುವಂತೆ, ಧರ್ಮೇಂದ್ರ ಪ್ರಧಾನ್ ರಾಜಿನಾಮೆಗಾಗಿ ಒತ್ತಾಯಿಸಿ ಪ್ರತಿಭಟನೆಡಸಿ ಶ್ರೀಮಾನ್ಯ ರಾಷ್ಟ್ರಪತಿಗಳಿಗೆತಹಸಿಲ್ದಾರರು ಮುಖಾಂತರ ಮನವಿ ಸಲ್ಲಿಸಿ

ಜಿಲ್ಲಾ ಅಧ್ಯಕ್ಷ ಶಿವುಕುಮಾರ್ ಮಾತನಾಡಿ ದೇಶದಲ್ಲಿ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳು  ವೈದ್ಯಕೀಯ ಮತ್ತು ಇತರೆ ಕೋರ್ಸ್ ಗಳಿಗೆ ಪ್ರವೇಶ ಪಡೆಯಲು ರಾಷ್ಟ್ರ ಮಟ್ಟದಲ್ಲಿ ನಡೆಸುವ ನೀಟ್ ಪರೀಕ್ಷೆಯ ನಿರಂತರವಾಗಿ ಹಗರಣ ಬಯಲಿಗೆ ಬರುತ್ತಿವೆ. ನ್ಯಾಷನಲ್ ಟೆಸ್ಟ್ ಏಜೆನ್ಸಿ (ಎನ್.ಟಿ.ಎ) ಪರೀಕ್ಷೆಯ ನಡವಳಿಕೆ ಹಾಗೂ ಪರೀಕ್ಷೆಗಳನ್ನು ನಡೆಸುವ ಬಗ್ಗೆ ಪಾರದರ್ಶಕತೆಯನ್ನು ಪ್ರಶ್ನಿಸುವ ಹಲವಾರು ದೂರುಗಳು ದೇಶಾದ್ಯಂತ ಬರುತ್ತಿವೆ. ಪ್ರವೇಶವನ್ನು ನಡೆಸಲು ಅಸಮರ್ಥ ಮತ್ತು ಅನರ್ಹವಾಗಿದೆ ಎಂಬುದು ಮತ್ತೊಮ್ಮೆ ಸಾಬೀತಾಗಿದೆ ಎಂದರು .

ವರ್ಷದಿಂದ ವರ್ಷಕ್ಕೆ, ಪರೀಕ್ಷೆಯಿಂದ ಪರೀಕ್ಷೆಗೆ, ನ್ಯಾಷನಲ್ ಟೆಸ್ಟ್ ಏಜೆನ್ಸಿ (ಎನ್.ಟಿ.ಎ) ಪರೀಕ್ಷೆಗಳನ್ನು ನಡೆಸುವಲ್ಲಿ ತನ್ನ ಆದಾಯವನ್ನು ಸಾಬೀತುಪಡಿಸುತ್ತಿದೆ. ಇದರಿಂದ ವಿದ್ಯಾರ್ಥಿಗಳು ಎದುರಿಸಬೇಕಾದ ಮಾನಸಿಕ ಒತ್ತಡ ಮತ್ತು ತೊಂದರೆಗಳಿಗೆ ಎನ್.ಡಿ.ಎ ಸರ್ಕಾರವೇ ಜವಾಬ್ದಾರರಾಗಿರಬೇಕು ಎಂದು ಎಸ್ಎಫ್ಐ ಗಂಗಾವತಿ ತಾಲೂಕ ಸಮಿತಿಯು ಆಗ್ರಹಿಸುತ್ತದೆ

ಜಿಲ್ಲಾ ಕಾರ್ಯದರ್ಶಿ ಬಾಲಾಜಿ ಚಳ್ಳಾರಿ ಮಾತಾನಾಡಿ NTA ಹಲವಾರು ಪರೀಕ್ಷೆಗಳನ್ನು ನಡೆಸಲು NTA ವಿಫಲವಾಗಿದೆ ಮತ್ತು ಭ್ರಷ್ಟಾಚಾರವಾಗಿರುವುದು ಮತ್ತು ಪತ್ರಿಕೆ ಸೋರಿಕೆಯಾಗಿರುವುದು ಸ್ಪಷ್ಟವಾಗಿದೆ. ಇದು ವಿದ್ಯಾರ್ಥಿಗಳ ಭವಿಷ್ಯದ ಜೊತೆ ಚೆಲ್ಲಾಟವಾಡುತ್ತಿದೆ, ಸುಮಾರು 22 ವಿದ್ಯಾರ್ಥಿಗಳು ಪ್ರೆಶ್ನೆ ಪತ್ರಿಕೆ ಸೋರಿಕೆಯಿಂದ ಬೇಸತ್ತು ಸಾವಿಗೆ ಶರಣಾಗಿದ್ದಾರೆ, ವ್ಯವಸ್ಥೆ ಅವರನ್ನು ಕೊಂದಿದೆ ಆದರಿಂದ NTA ರದ್ದು ಪಡಿಸಬೇಕು ಹಾಗೂ ಪ್ರಶ್ನೆ ಪತ್ರಿಕೆ ಸೋರಿಕೆ ಮತ್ತು ಅಕ್ರಮದ ನೇರ ಹೊಣೆಯನ್ನು ಭಾರತ ಸರ್ಕಾರದ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ನೈತಿಕ ಹೊಣೆ ಒತ್ತು ರಾಜೀನಾಮೆ ನೀಡಬೇಕೆಂದು ಆಗ್ರಹಿಸಿದರು.

ತಾಲೂಕ ಅಧ್ಯಕ್ಷ ನಾಗರಾಜ್ ಯು ಮಾತನಾಡಿ ಒಂದು ಸಂಸ್ಥೆಯ ನಿರಂತರ ವೈಫಲ್ಯದ ಬಲಿಪೀಠದಲ್ಲಿ ವಿದ್ಯಾರ್ಥಿಗಳ ಭವಿಷ್ಯವನ್ನು ಬಲಿಕೊಡಲು ಸಾಧ್ಯವಿಲ್ಲ. ಈ ಅವ್ಯವಸ್ಥೆಯಿಂದ ತೊಂದರೆಗೊಳಗಾದ ಎಲ್ಲಾ ಅಭ್ಯರ್ಥಿಗಳೊಂದಿಗೆ ಎಸ್ಎಫ್ಐ ಸಂಪೂರ್ಣ ಐಕ್ಯತೆ ವ್ಯಕ್ತಪಡಿಸುತ್ತದೆ ಹಾಗೂ ಭಾರತದ ಪರೀಕ್ಷಾ ವ್ಯವಸ್ಥೆಯಲ್ಲಿರುವ ಈ ಗಂಭೀರ ಬಿಕ್ಕಟ್ಟಿಗೆ ಅಂತ್ಯ ಹಾಡಲು ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಶೈಕ್ಷಣಿಕ ಸಮುದಾಯ ಒಗ್ಗೂಡಿ ಹೋರಾಡುತ್ತೇವೆ ಎಂದರು.

ಬಲಿಯಾದ ವಿದ್ಯಾರ್ಥಿಗಳ ಕುಟುಂಬಗಳಿಗೆ ₹5 ಕೋಟಿ ಪರಿಹಾರ ನೀಡಬೇಕು.

NEET ಪರೀಕ್ಷೆ ರದ್ದಾದ ಬಳಿಕ ನಿರಾಶೆಯಿಂದ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿಗಳ ಕುಟುಂಬಗಳನ್ನು ಎಸ್‌ಎಫ್‌ಐ ನಿಯೋಗಗಳು ಭೇಟಿ ಮಾಡುತ್ತಿವೆ.
ಹಿಸಾರ್‌ನ ಸಿಮ್ರಾನ್, ಧರ್ಮಪುರಿಯ ರೋಶ್ನಿ, ಕೇರಳದ ಇಜಾ ಮಹೇಶ್ ಅವರ ಕುಟುಂಬಗಳನ್ನು ಎಸ್‌ಎಫ್‌ಐ ನಾಯಕರು ಭೇಟಿ ಮಾಡಿ ಸಾಂತ್ವನ ತಿಳಿಸಿದ್ದಾರೆ.

ರಾಜಸ್ಥಾನ ಸೇರಿದಂತೆ ದೇಶದಾದ್ಯಂತ ಎಲ್ಲಾ ಬಲಿಯಾದ ವಿದ್ಯಾರ್ಥಿಗಳ ಕುಟುಂಬಗಳನ್ನು ಭೇಟಿ ಮಾಡಿ ಅವರಿಗೆ ಸಂಪೂರ್ಣ ಕಾನೂನು ನೆರವು ನೀಡಲಾಗುವುದು. ಪ್ರತಿಯೊಂದು ಕುಟುಂಬಕ್ಕೂ ₹5 ಕೋಟಿ ಪರಿಹಾರ ನೀಡಬೇಕೆಂದು ಎಸ್‌ಎಫ್‌ಐ ಆಗ್ರಹಿಸುತ್ತದೆ. ನ್ಯಾಯ ಮತ್ತು ಪರಿಹಾರಕ್ಕಾಗಿ ನ್ಯಾಯಾಲಯದ ಮೊರೆ ಹೋಗಲಾಗುವುದು.
ನೀಟ್ ಪರೀಕ್ಷೆಯಲ್ಲಿ ಗ್ರಾಮೀಣ ಪ್ರದೇಶದ ದಲಿತ, ಹಿಂದುಳಿದ, ಅಲ್ಪಸಂಖ್ಯಾತ, ತಳಸಮುದಾಯದ ವಿದ್ಯಾರ್ಥಿಗಳು ಲಕ್ಷಾಂತರ ರೂಪಾಯಿ ಸುರಿಯುವ ಶ್ರೀಮಂತ ,ಉನ್ನತ ಶೈಕ್ಷಣಿಕ ಸೌಲಭ್ಯವುಳ್ಳ ಅಭ್ಯರ್ಥಿಗಳ ಜೊತೆಗೆ ಪೈಪೋಟಿ ನಡೆಸಿ ಸೀಟು ಗಿಟ್ಟಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ.

ಈ ಹಿನ್ನೆಲೆಯಲ್ಲಿ ಪ್ರತಿ ವರ್ಷಗಳಲ್ಲಿ ನೀಟ್ ಪರೀಕ್ಷೆಯಿಂದ ಅನ್ಯಾಯಕ್ಕೊಳಗಾದ ಸುಮಾರು ವಿದ್ಯಾರ್ಥಿಗಳು ಆತ್ಮಹತ್ಯೆಗೆ ಗುರಿಯಾಗಿದ್ದಾರೆ. ಒಬ್ಬ ವಿದ್ಯಾರ್ಥಿಗೆ ನೀಟ್ ಪರೀಕ್ಷೆಯ ಕೋಚಿಂಗ್ ಗೆ ಒಂದು ಲಕ್ಷದಿಂದ ಹತ್ತು ಲಕ್ಷದವರೆಗೆ ಹಣ ವಸೂಲಿ ನಡೆಯುತ್ತಿದೆ ಇದರಿಂದ ಹಣ ಬರಿಸಲು ಸಾಧ್ಯವಿಲ್ಲದ ಬಡಕುಟುಂಬದ ವಿದ್ಯಾರ್ಥಿಗಳು ಪರೀಕ್ಷೆಗೆ ಅರ್ಹತೆ ಪಡೆಯಲು ವಂಚಿತರಾಗುತ್ತಿದ್ದಾರೆ. ಆದ್ದರಿಂದ ನೀಟ್ ಪರೀಕ್ಷೆಯನ್ನು ರದ್ದುಗೊಳಿಸದಿದ್ದರೆ ಬಡ, ಮಧ್ಯಮ ವರ್ಗದ ವಿದ್ಯಾರ್ಥಿಗಳ ಶೈಕ್ಷಣಿಕ ಹಕ್ಕುಗಳು ಕಿತ್ತುಕೊಂಡಂತೆ ಆಗುತ್ತಿದೆ.  

ಜೂನ್ 2026ರ UGC-NET ಪರೀಕ್ಷೆಯಲ್ಲಿ ನಡೆದಿರುವ ಗಂಭೀರ ಅಕ್ರಮಗಳು ಮತ್ತು ಅವ್ಯವಸ್ಥೆಗಳನ್ನು ತೀವ್ರವಾಗಿ ಖಂಡಿಸುತ್ತದೆ. ಈ ಘಟನೆಗಳು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ನ್ಯಾಯಸಮ್ಮತ, ಪಾರದರ್ಶಕ ಮತ್ತು ವಿಶ್ವಾಸಾರ್ಹ ಪರೀಕ್ಷೆಗಳನ್ನು ನಡೆಸುವಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿವೆ.

SFIಯ ತನ್ನ ದೀರ್ಘಕಾಲದ ಬೇಡಿಕೆಯನ್ನು ಮತ್ತೊಮ್ಮೆ ಪುನರುಚ್ಚರಿಸುತ್ತದೆ—ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA)ಯನ್ನು ತಕ್ಷಣವೇ ರದ್ದುಪಡಿಸಬೇಕು ಹಾಗೂ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರನ್ನು ಹುದ್ದೆಯಿಂದ ವಜಾಗೊಳಿಸಬೇಕು. ಭಾರತದ ಉನ್ನತ ಶಿಕ್ಷಣದ ಪ್ರವೇಶ ಹಾಗೂ ನೇಮಕಾತಿ ಪರೀಕ್ಷೆಗಳನ್ನು ಪದೇ ಪದೇ ಅಸಮರ್ಥತೆ, ಅಪಾರದರ್ಶಕತೆ ಮತ್ತು ಹೊಣೆಗಾರಿಕೆಯ ಕೊರತೆಯನ್ನು ತೋರಿಸಿರುವ ಸಂಸ್ಥೆಯ ಕೈಯಲ್ಲಿ ನೀಡಲಾಗದು, ಈ ಕೂಡಲೇ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಬೇಕು ಇಲ್ಲದಿದ್ದಲ್ಲಿ ಮುಂದೆ ಭಾರತ ವಿದ್ಯಾರ್ಥಿ ಫೆಡರೇಷನ್ ಎಸ್ಎಫ್ಐ ಗಂಗಾವತಿ ತಾಲೂಕ ಸಮಿತಿಯು ಉಪವಾಸ ಸತ್ಯಾಗ್ರಹ ಕೂಡಲಾಗುವುದು ಎಂದು ಒತ್ತಾಯಿಸಿ ತಹಸೀಲ್ದಾರರ ಮುಖಂತರ ರಾಷ್ಟ್ರಪತಿಗಳಿಗೆ ಮನವಿ ಮಾಡಲಾಯಿತು.

ಈ ಜಿಲ್ಲಾ ಕಾರ್ಯದರ್ಶಿ ಬಾಲಾಜಿ ಚಳ್ಳಾರಿ, ತಾಲೂಕ ಅಧ್ಯಕ್ಷ ನಾಗರಾಜ್ ಯು, ಉಪಾಧ್ಯಕ್ಷ ಶರೀಫ್ ಎಂ, ಜಂಟಿ ಕಾರ್ಯದರ್ಶಿಗಳಾದ ದರ್ಶನ್, ಬಸಯ್ಯ ಮತ್ತು ಸಮೋಹಿಕ ಸಂಘಟನೆಯ ಮುಖಂಡರು,  ವಿದ್ಯಾರ್ಥಿಗಳಾದಎಸ್ ಎಂ ಕಾವ್ಯ, ಕಾರ್ತಿಕ್, ಮಣಿಕಂಠ ಡಿ, ನಾಗರಾಜ್, ಅಕ್ಷತಾ, ಕೀರ್ತಿ, ದೆವ್ವಮ್ಮ, ಸಂಜನಾ ಉಪಸ್ಥಿತರಿದ್ದರು

Total Views: 0
Share This Article