Breaking News

ಜಗತ್ತಿನ ಇತಿಹಾಸದಲ್ಲಿ ಭಾರತೀಯ ಸ್ವಾತಂತ್ರ್ಯ ಕ್ಕೆ ವಿಶಿಷ್ಟ ಸ್ಥಾನವಿದೆ

ಗಂಗಾವತಿ:ಜಗತ್ತಿನ ಇತಿಹಾಸದಲ್ಲಿ ಭಾರತೀಯ ಸ್ವಾತಂತ್ರ್ಯ ಕ್ಕೆ ವಿಶಿಷ್ಟ ಸ್ಥಾನವಿದೆ. ಅದು ನೂರು ವರ್ಷಗಳ ಕಾಲ ಲಕ್ಷಾಂತರ ಭಾರತೀಯರು ನಡೆಸಿದ ನಿರಂತರ ಹೋರಾಟ , ತ್ಯಾಗ, ಬಲಿದಾನದ ಫಲವಾಗಿದೆ. ಹಾಗಾಗಿ ನಾವು ಪಡೆದ ಸ್ವಾತಂತ್ರ್ಯ ಅನನ್ಯ ಮೌಲ್ಯಗಳ ಸಂಕೇತವಾಗಿದೆ. ಆ ಮೌಲ್ಯಗಳಾದ ರಾಷ್ಟಾಭಿಮಾನ, ದೇಶಕ್ಕಾಗಿ ಸಮರ್ಪಣ ಮನೋಭಾವ, ಕಾಯಕಶೀಲತೆ,ಪ್ರಮಾಣಿಕತೆ, ಸತ್ಯ, ಶಾಂತಿ, ಅಹಿಂಸೆ ಮುಂತಾದವುಗಳನ್ನು ಇಂದಿನ ಯುವ ಜನಾಂಗಕ್ಕೆ ತಿಳಿಸಬೇಕಾದ ಅಗತ್ಯವಿದೆ ಅಂದಾಗ ಮಾತ್ರ ಅಮೇರಿಕಾದಂತೆ ಭಾರತವನ್ನು ಬಲಿಷ್ಠ ರಾಷ್ಟ್ರವನ್ನು ಕಟ್ಟಲು ಸಾಧ್ಯ ಎಂದು ಗಂಗಾವತಿ ಕಲ್ಮಠದ . ಕೊಟ್ಟೂರು ಮಹಾಸ್ವಾಮಿಗಳು ಅಭಿಪ್ರಾಯಪಟ್ಟರು. ಅವರು ಶ್ರೀ ಕೊಟ್ಟೂರೇಶ್ವರ ವಿದ್ಯಾವರ್ಧಕ ಸಂಘದ ಆಶ್ರಯದಲ್ಲಿ ನಡೆದ 78ನೇ ಸ್ವಾತಂತ್ಯ್ರೋತ್ಸವ ದಿನಾಚರಣೆಯ ಅಂಗವಾಗಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ನಗರದ ವಿವಿಧ ಸರಕಾರಿ ಇಲಾಖೆಗಳ ಕರ್ತವ್ಯ ನಿಷ್ಠ ಅಧಿಕಾರಿಗಳನ್ನು, ಸಿಬ್ಬಂದಿಗಳನ್ನು ಹಾಗೂ ಸಂಸ್ಥೆಯ ವಿವಿಧ ಶಾಲಾ ಕಾಲೇಜುಗಳ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ದೈಹಿಕ ನಿರ್ದೇಶಕ ಹೊನ್ನಪ್ಪ ಮಸ್ತಮ್ಮನವರ್ ನೇತೃತ್ವದಲ್ಲಿ ಧ್ವಜ ಕವಾಯತ್ ನಡೆದು ವಿವಿಧ ಶಾಲಾಕಾಲೇಜುಗಳ ಸೇವಾದಳ, ಸ್ಕೌಟ್ಸ್, ಗೈಡ್ಸ್ ಗಳ ತಂಡಗಳು ಗೌರವ ವಂದನೆ ಸಲ್ಲಿಸಿದವು. ವೇದಿಕೆಯಲ್ಲಿ ಸಂಘದ ಕಾರ್ಯದರ್ಶಿ ಶರಣೇಗೌಡ ಮಾಲೀಪಾಟೀಲ್, ಕೋಶಾಧ್ಯಕ್ಷ ಸುರೇಶ ಸಿಂಗನಾಳ, ನಿರ್ದೇಶಕರಾದ ಗುಂಜಳ್ಳಿ ರಾಜಶೇಖರಪ್ಪ, ಮಾಜಿ ಸಂಸದ ಎಸ್, ಶಿವರಾಮನಗೌಡ, ಕಳಕನಗೌಡ ಪಾಟೀಲ್, ಸದಸ್ಯರಾದ ಭಾವಿಕಟ್ಟಿ ರಾಜಶೇಖರಪ್ಪ, ಕಮತಗಿ ಲಿಂಗಪ್ಪ, ಗುಂಜಳ್ಳಿ ತಿಪ್ಪೇಶ್ , ನಗರಸಭಾ ಸದಸ್ಯ ವಾಸುದೇವ ನವಲಿ ಅತಿಥಿಗಳಾಗಿ ಆಗಮಿಸಿದ್ದರು. ಪ್ರಾಚಾರ್ಯ ಡಾ. ಶರಣಬಸಪ್ಪ ಕೋಲ್ಕಾರ ಸ್ವಾಗತಿಸಿ ಪ್ರಸ್ಥಾವಿಕವಾಗಿ ಮಾತನಾಡಿದರು.‌ ಪ್ರಾಚಾರ್ಯರಾದ ವಿ.ಜಿ.ಯಾವಗಲ್, ಜಿ.ಬಸವರಾಜ ಅಯೋಧ್ಯ, ಡಾ. ರವಿಚವ್ಹಾಣ ಮುಖ್ಯೋಪಾಧ್ಯಾಯರಾದ ಪ್ರಕಾಶ ಪಾಟೀಲ್, ಸಿದ್ದಯ್ಯ, ರಾಮನಗೌಡ, ಲಕ್ಷೀಕಾಂತ,ಅನಿತಾ, ಮಂಜುನಾಥ, ಅಪ್ಪಣ್ಣ, ವೆಂಕನಗೌಡ ವೇದಿಕೆಯಲ್ಲಿದ್ದರು. ಶಿಕ್ಷಕರಾದ ಮುತ್ತನಗೌಡ, ರೇಣುಕಾ ಕಾರ್ಯಕ್ರಮ ನಿರೂಪಿಸಿದರು

ಜಾಹೀರಾತು

About Mallikarjun

Check Also

ಕರ್ನಾಟಕ ಸಂಪಾದಕರು ಮತ್ತು ವರದಿಗಾರರ ಸಂಘದ ವತಿಯಿಂದ ಎಪಿಜೆ ಅಬ್ದುಲ್ ಕಲಾಂ ರವರಿಗೆ ಹುಟ್ಟು ಹಬ್ಬದ ಶುಭಾಶಯಗಳು.

Happy birthday to APJ Abdul Kalam from Karnataka Editors and Correspondents Association. ತಿಪಟೂರು. ತಾಲ್ಲೂಕಿನ ಹಾಸನ …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.