ವಿವಿಧ ಸೌಲಭ್ಯಗಳನ್ನು ಒದಗಿಸುವಂತೆ AIPWA ಸಂಘಟನೆಯಿಂದ ಪ್ರತಿಭಟನೆ

H.Mallikarjun
H.Mallikarjun - Kalyanasiri
1 Min Read
ಜಾಹೀರಾತು


ಗಂಗಾವತಿ ನಗರದ ವಾರ್ಡ್ ನಂಬರ್ 27 ಹಾರಿಜನವಾರ್ಡ್ ಏರಿಯಾದಲ್ಲಿ ಮೂಲಭೂತ ಸೌಲಭ್ಯಗಳನ್ನು ಒದಗಿಸುವಂತೆ ಒತ್ತಾಯಿಸಿ ಅಖಿಲ ಭಾರತ ಪ್ರಗತಿಪರ ಮಹಿಳಾ ಸಂಘಟನೆಯ ನೇತೃತ್ವದಲ್ಲಿ ಇಂದು ಗಂಗಾವತಿ ನಗರಸಭೆ ಮುಂದೆ ಪ್ರತಿಭಟನೆ ಮಾಡಿ ಒತ್ತಾಯದ ಪತ್ರ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಅಖಿಲ ಭಾರತ ಪ್ರಗತಿಪರ ಮಹಿಳಾ ಸಂಘದ ರಾಜ್ಯ ಅಧ್ಯಕ್ಷರಾದ ಕಾ//ನಿರ್ಮಲ ರವರು ನಮ್ಮ ಸಂಘಟನೆಯ

ಜಾಹೀರಾತು

ತಾಲ್ಲೂಕು ಸಮಿತಿಯು 27ನೇ ವಾರ್ಡ್ ನ ಸಮಸ್ಯೆಗಳ ಕುರಿತು ಈಗಾಗಲೇ ಸುಮಾರು ಪತ್ರಗಳನ್ನು ಸಲ್ಲಿಸಿದ್ದರು ಕೂಡ ಇದುವರೆಗೆ ಯಾವುದೇ ಕ್ರಮ ತೆಗೆದು ಕೊಳ್ಳದೆ ಇರುವುದು ನಾಚಿಕೆ ಗೇಡಿನ ಸಂಗತಿಯಾಗಿದೆ ಈಗಲಾದರೂ ಹೆಚ್ಚೆತ್ತುಕೊಂಡು ಕೂಡಲೇ ವಾರ್ಡ್ ನ ಸಮಸ್ಯೆ ಬಗೆಹರಿಸಬೇಕು ಇಲ್ಲದಿದ್ದರೆ ಮುಂದೆ ದೊಡ್ಡ ಮಟ್ಟದ ಹೋರಾಟ ನಡೆಸಬೇಕಾಗುತ್ತದೆ ಎಂದು ಹೆಚ್ಚರಿಸಿದರು.
ಮನವಿ ಪತ್ರ ಸ್ವಿಕರಿಸಿದ AEE ಶಂಕರ್ ಗೌಡ ರವರು ಇಂದೆ ವಾರ್ಡಿನಲ್ಲಿ ಇರುವ ಸಮಸ್ಯೆಗಳಾದ ಶೌಚಾಲಯ ಕ್ಲೀನಿಂಗ್,ಶೌಚಾಲಯಕ್ಕೆ ರಸ್ತೆ,ಶೌಚಾಲಯಕ್ಕೆ ಸರಿಯಾದ ನೀರಿನ ವ್ಯವಸ್ಥೆ ಹಾಗೂ ವಾರ್ಡ್ ನಲ್ಲಿ ಫಾಗಿಂಗ್ ಮಾಡಿಸುವುದು,ವಾರ್ಡ್ ನಲ್ಲಿ ಬ್ಲೀಚಿಂಗ್ ಪೌಡರ್ ಇತರೆ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸುತ್ತೆವೆ ಎಂದು ಒಪ್ಪಿಕೊಂಡರು.
ಈ ಸಂಧರ್ಭದಲ್ಲಿ ಹಿರಿಯ ಹೋರಾಟಗಾರರಾದ ಕಾ//ಭಾರದ್ವಾಜ್,ಕಾ//ರತ್ನಮ್ಮ ಬೆಂಗಳೂರ,ಕಾ//ವಿಜಯ ದೊರೆರಾಜು,ಕಾ//ಸಣ್ಣ ಹನುಮಂತಪ್ಪ ಹುಲಿಹೈದರ,ಕಾ//ಹುಲಿಗಮ್ಮ,ಕಾ//ರಾಘಮ್ಮ,ಕಾ//ಶೃತಿ,ಕಾ//ನೇತ್ರಾ,ಕಾ//ರೇಣುಕಮ್ಮ ಇತರರು ಇದ್ದರೂ.

Total Views: 0
Share This Article