Find the miscreants and punish them severely: Maniyar

ಗಂಗಾವತಿ.ಜು.15: ಮುಖ್ಯಮಂತ್ರಿ ಸಿದ್ದರಾಮಯ್ಯನವರ ಭಾವಚಿತ್ರವನ್ನು ವಿರೂಗೊಳಿಸಿ ಸಾಮಾಜಿಕ ಜಾಲ ತಾಣಗಳಲ್ಲಿ ಹರಿಬಿಟ್ಟು ತೇಜೋವದೆಗೆ ಯತ್ನಿಸಿದ ಕಿಡಿಗೇಡಿಗಳನ್ನು ಪತ್ತೆಹಚ್ಚಿ ಬಂಧಿಸುವಂತೆ ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಪ ಶಾಮೀದ್ ಮನಿಯಾರ್ ಒತ್ತಾಯಿಸಿದ್ದಾರೆ.
ಈ ಕುರಿತಂತೆ ನಗರ ಠಾಣೆ ಉಪ ವಿಭಾಗದ ಉಪ ಆಧಿಕ್ಷರಿಗೆ ದೂರು ಸಲ್ಲಿಸಿರುವ ಮನಿಯಾರ್, ಸಿ.ಎಂ ಸಿದ್ದರಾಮಯ್ಯನವರು ದೀನ ದಲಿತರ, ಬಡವರ ಪರವಾಗಿ ಹಲವಾರು ಯೋಜನೆಗಳನ್ನು ಜಾರಿ ಮಾಡಿದ್ದಾರೆ. ಸಮಾಜದ ಎಲ್ಲಾ ವರ್ಗಗಳ ಮೆಚ್ಚಿನ ನಾಯಕರಾಗಿದ್ದಾರೆ. ಅಂತಹ ಮೇರು ನಾಯಕನ ತೇಜೋವದೆ ಮಾಡುವ ನಿಟ್ಟಿನಲ್ಲಿ ಕೆಲ ಕಿಡಿಗೇಡಿಗಳು ಮುಖ್ಯಮಂತ್ರಿಗಳ ಪೋಟೋವನ್ನು ವಿರೂಪಗೊಳಿಸಿ ಸ್ತ್ರೀ ರೂಪದಲ್ಲಿ ಅತ್ಯಂತ ಅವಹೇಳನಕಾರಿಯಾಗಿ “ಕರ್ನಾಟಕದ ದರಿದ್ರ ಲಕ್ಷ್ಮೀ ನಾನೇ” ಎಂದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಇದು ತೀವ್ರ ಖಂಡನೀಯ. ಸಿ.ಎಂ.ಸಿದ್ದರಾಮಯ್ಯನವರ ತೇಜೋವದೆಗೆ ಕಾರಣರಾದ ಕಿಡಿಗೇಡಿಗಳನ್ನು ಕೂಡಲೇ ಪತ್ತೆ ಹಚ್ಚಿ ಕಠಿಣ ಶಿಕ್ಷೆಗೆ ಗುರಿಪಡಿಸಬೇಕು ಎಂದು ಶಾಮೀದ್ ಮನಿಯಾರ್ ಒತ್ತಾಯಿಸಿದ್ದಾರೆ.
Kalyanasiri Kannada News Live 24×7 | News Karnataka
