Breaking News

ಕೊಪ್ಪಳ ಜಿಲ್ಲೆಯ ಸಮಗ್ರ ಅಭಿವೃದ್ಧಿಗಾಗಿ  ಆಗ್ರಹಿಸಿ ಪ್ರತಿಭಟನೆ.

Protest demanding comprehensive development of Koppal district

ಕೊಪ್ಪಳ ಜಿಲ್ಲೆಯ ಸಮಗ್ರ ಅಭಿವೃದ್ಧಿಗಾಗಿ  ಆಗ್ರಹಿಸಿ ಎಸ್‌ಯುಸಿಐ(ಕಮ್ಯೂನಿಸ್ಟ್) ಪಕ್ಷದ ನೇತೃತ್ವದಲ್ಲಿ ಪ್ರತಿಭಟನೆ. ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಪಕ್ಷದ ನಾಯಕರಾದ ಕಾಮ್ರೆಡ್ ಶರಣಪ್ಪ ಉದ್ಬಳ್ ಮಾತನಾಡಿ, “ಜಿಲ್ಲೆಯಲ್ಲಿ ತೀವ್ರವಾದ ಬರಗಾಲವಿದೆ. ರೈತರು-ಕೃಷಿ ಕೂಲಿ ಕಾರ್ಮಿಕರು ತೀವ್ರವಾದ ಸಂಕಷ್ಟವನ್ನು ಎದುರಿಸುತ್ತಿದ್ದಾರೆ. ಆದರೆ ಕೇಂದ್ರ ಸರ್ಕಾರವಾಗಲಿ ಅಥವಾ ರಾಜ್ಯ ಸರ್ಕಾರವಾಗಲಿ ಬರ ಪರಿಹಾರ ನೀಡಿಲ್ಲ. ತೀವ್ರ ಬರಗಾಲವಿರುವುದರಿಂದ ಬರಗಾಲ ಕಾಮಗಾರಿ ಆರಂಭಿಸಿ ಕೂಲಿ ಕಾರ್ಮಿಕರ ಗುಳೆಯನ್ನು ತಪ್ಪಿಸಬೇಕು. ಜಾನುವಾರುಗಳಿಗೆ ಮೇವು ಕೇಂದ್ರಗಳನ್ನು ಸ್ಥಾಪನೆ ಮಾಡಬೇಕು” ಎಂದು ಆಗ್ರಹಿಸಿದರು.
“ ಖಾಲಿ ಹುದ್ದೆಗಳನ್ನು ಕೂಡಲೇ ಭರ್ತಿ ಮಾಡಬೇಕು. ಉದ್ಯೋಗ ಸೃಷ್ಟಿಗೆ ಪೂರಕವಾದ ಉದ್ಯಮಗಳನ್ನು ಜಿಲ್ಲೆಯಲ್ಲಿ ಸ್ಥಾಪಿಸಬೇಕು.
“ಕೊಪ್ಪಳ ಜಿಲ್ಲೆಯ ಪಕ್ಕದಲ್ಲಿ ತುಂಗಭದ್ರ ಡ್ಯಾಮ್ ಇದ್ದರೂ ಸಹ ಜನರು ಕುಡಿಯುವ ನೀರಿಗೆ ಹಾಹಾಕಾರ ಪಡಬೇಕಾಗಿದೆ. ಕೊಪ್ಪಳ ನಗರದಲ್ಲಿ ಈಗ ಐದು ದಿನಕೊಮ್ಮೆ ನೀರು ಬಿಡಲಾಗುತ್ತಿದೆ.ಹಳ್ಳಿಗಳ ನೀರಿನ ವ್ಯವಸ್ಥೆಯಂತೂ ಅಯೋಮಯವಾಗಿದೆ. ಜಿಲ್ಲೆಯ ಬಹುತೇಕ ಗ್ರಾಮೀಣ ರಸ್ತೆಗಳು ಹಾಳಾಗಿವೆ. ಕಸ ವಿಲೇವಾರಿ, ಚರಂಡಿ ಸ್ವಚ್ಛತೆ, ರಾಜಕಾಲುವೆಗಳ ಸ್ವಚ್ಛತೆ ನಿರಂತರವಾಗಿ ನಡೆಯುತ್ತಿಲ್ಲ.“ಬರಗಾಲದಲ್ಲಿ ನರೇಗಾ ಯೋಜನೆಯ ಮಾನವ ದಿನಗಳನ್ನು 150 ದಿನಗಳಿಗೆ ಹೆಚ್ಚಿಸಲು ಅವಕಾಶವಿದೆ. ಅದನ್ನು ಕೂಡಲೇ ಜಾರಿ ಮಾಡಬೇಕು. ಮನರೇಗಾ ಕೂಲಿಯನ್ನು ₹600ಕ್ಕೆ ಹಾಗೂ ಮಾನವ ದಿನಗಳನ್ನು 200ಕ್ಕೆ ಹೆಚ್ಚಿಸಲು ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.
ಎಸ್‌ಯುಸಿಐ(ಕಮ್ಯೂನಿಸ್ಟ್) ಪಕ್ಷದ ಜಿಲ್ಲಾ ಮುಖಂಡ ಶರಣು ಗಡ್ಡಿ ಮಾತನಾಡಿ, “ ಜಿಲ್ಲಾ ಆಸ್ಪತ್ರೆಯಲ್ಲಿ  ತಜ್ಞವೈದ್ಯರ ನೇಮಕ ಮಾಡಬೇಕು. ಸಕಲ ಚಿಕಿತ್ಸೆ ಹಾಗೂ ಔಷಧಿಗಳು ಉಚಿತವಾಗಿ ಎಲ್ಲರಿಗೂ ನಿರಂತರವಾಗಿ ಸಿಗುವಂತಾಗಬೇಕು.ಅವೈಜ್ಞಾನಿಕವಾಗಿ  ಹಾಕಿರುವ ಹಿಟ್ನಾಳ್ ಟೋಲ್ ಪ್ಲಾಜವನ್ನು ತೆರವುಗೊಳಿಸಬೇಕು .“ಕೊಪ್ಪಳ ಜಿಲ್ಲೆಯ ಗ್ರಾಮೀಣ ಭಾಗದ ಶಾಲಾ ಕಾಲೇಜುಗಳಲ್ಲಿ ಬೋಧಕರ ಕೊರತೆ ತೀವ್ರವಾಗಿದ್ದು, ಶಾಲಾ ಕಾಲೇಜುಗಳಿಗೆ ಮೂಲಸೌಲಭ್ಯಗಳನ್ನು ಒದಗಿಸಬೇಕು” ಬಗರ್ ಹುಕುಂ ಸಾಗುವಳಿದಾರರಿಗೆ ಕೂಡಲೇ ಹಕ್ಕುಪತ್ರ ವಿತರಿಸಬೇಕು.
ಕೊಪ್ಪಳದ ಕಾಳಿದಾಸ ನಗರ, ಗಾಂಧಿ ನಗರ, ಕುವೆಂಪು ನಗರ, ಮುಂತಾದ ಏರಿಯಾಗಳಿಗೆ ಮೂಲ ಸೌಕರ್ಯ ಒದಗಿಸಬೇಕೆಂದು ಸರ್ಕಾರಕ್ಕೆ ಒತ್ತಾಯಿಸಿದರು.
ಮನವಿ ಪತ್ರವನ್ನು ಜಿಲ್ಲಾಧಿಕಾರಿಗಳ ಪರವಾಗಿ ರವಿಕುಮಾರ್ ವಸ್ತ್ರದ  ಅವರಿಗೆ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಪಕ್ಷದ ಸದಸ್ಯರುಗಳಾದ ಶರಣು ಪಾಟೀಲ್, ಗಂಗರಾಜ, ದೇವರಾಜ, ಸಿದ್ದಲಿಂಗರೆಡ್ಡಿ, ಶಾರದ, ಮಂಜುಳಾ, ಮೌನೇಶ. ಸಾರ್ವಜನಿಕರಾದ , ಮುದಿಯಪ್ಪ, ಉಮೇಶ್, ದುರ್ಗಮ್ಮ, ದ್ಯಾಮಣ್ಣ ರೇಣುಕಮ್ಮ, ಯಮನೂರಪ್ಪ, ವಿರುಪಾಕ್ಷಿ,ಬಸರಾಜಪ್ಪ,, ಶಂಕ್ರಮ್ಮ ಬಸವರಾಜಪ್ಪ,ಮಂಗಳೆಶ್ ರಾಠೋಡ್, ಅಬ್ದುಲ್ ವಾಹಿದ್ ಮುದಿಯಪ್ಪ, ಗೌಡಪ್ಪ,ಸೇರಿದಂತೆ ಇತರರು ಇದ್ದರು

About Mallikarjun

Check Also

ಮತದಾನ ಮಾಡದವರ ಪೌರತ್ವ ನಿಷೇಧಿಸಿ: ಸಗ್ರೀವಾ

ಗಂಗಾವತಿ.ಮೇ.06: ಲೋಕಸಭಾ ಚುನಾವಣೆ ನಿಮಿತ್ತ ಮೇ.07ರಂದು ನಡೆಯುವ ಮತದಾನದಲ್ಲಿ ಎಲ್ಲರೂ ಉತ್ಸಾಹದಿಂದ ಪಾಲ್ಗೊಂಡು ಮತ ಚಲಾಯಿಸಬೇಕು. ಮತದಾನ ಮಾಡದೆ ಹೊರ …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.