Breaking News

ದಿವ್ಯ ಸಂಜೀವಿನಿ – ಹೋಮಿಯೋಪತಿ ಔಷಧಿ

Divya Sanjeevini – Homeopathic medicine

 

ಇಂದಿನ ನಾಗರಿಕ ಸಮಾಜದ ಜೀವನಶೈಲಿಯಲ್ಲಿ ರೋಗಗಳು ಬಹು ಬೇಗನೇ ಮಾನವರ ದೇಹವನ್ನು  ಹೊಕ್ಕು. ವ್ಯಕ್ತಿಯನ್ನು ತಮ್ಮ ನಿಯಂತ್ರಣಕ್ಕೆ ತೆಗೆದುಕೊಂಡು ನಿಂತ್ರಾಣ ಮಾಡುತ್ತಿವೆ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಷಯವೇ,

ಅದಕ್ಕಾಗಿ ಪ್ರತಿಯೊಬ್ಬರ ರೋಗಗಳು ಆದಷ್ಟು ಬೇಗ ನಿಯಂತ್ರಣಕ್ಕೆ ಬಂದು, ಬೇಗ ಗುಣಮುಖವಾಗಲಿ ಎಂದೇ ಜನರು ಬಯಸುತ್ತಾರೆ ಅಲ್ಲವೇ! ಅಂದಹಾಗೆ ಈಗಿನ 

21ನೇ ಶತಮಾನದ ಕಾಲಘಟ್ಟದ ದಿನಗಳಲ್ಲಿ ಹೋಮಿಯೋಪತಿ ಔಷಧವೂ ತ್ವರಿತವಾಗಿ ರೋಗ ನಿರ್ಮೂಲನೆ ಮಾಡುವ ವೈದ್ಯಕೀಯ ಲೋಕದ ಸಂಜೀವಿನಿಯಾಗಿ ಕಾಣುತ್ತಿದೆ. ವಿಶ್ವ ಸೇರಿದಂತೆ ಭಾರತದಲ್ಲಿ ಇದನ್ನು ಹೆಚ್ಚಾಗಿ ಉಪಯೋಗಿಸುತ್ತಿರುವುದು ಸಹ ಸಧ್ಯ ಕಾಣುತ್ತಿದ್ದೇವೆ. ಹೋಮಿಯೋಪತಿ ಎಂದರೆ ಗ್ರೀಕ್ ಭಾಷೆಯ ಎರಡು ಪದಗಳಿಂದ ಆಯ್ಕೆ ಮಾಡಲಾಗಿದೆ. “ಹೊಮೋಯ್ಸ್” ಅಂದರೆ, “ಸಮನಾದ”; “ಪ್ಯಾತೋಸ್” ಅಂದರೆ “ನರಳುವಿಕೆ”. ಹೋಮಿಯೋಪತಿ ಎಂದರೆ, ಸರಳವಾಗಿ ಹೇಳುವುದಾದರೆ, ವ್ಯಕ್ತಿಗಳ ಸಾಮರ್ಥ್ಯವುಳ್ಳ ಔಷಧಗಳನ್ನು ಅತ್ಯಲ್ಪ ಪ್ರಮಾಣದಲ್ಲಿ ನೀಡಿ ಚಿಕಿತ್ಸೆ ಮಾಡುವುದು ಹಾಗೂ ಮಾನವನ ದೇಹದ ಯಾವುದೇ ಭಾಗಕ್ಕೂ ಹಾನಿಯುಂಟು ಮಾಡದೇ ರೋಗ ನಿಯಂತ್ರಣ ಮಾಡುವುದೇ ಹೋಮಿಯೋಪತಿ ಕಾರ್ಯ ವೈಖರಿಯಾಗಿದೆ ಎಂದೇ ಹೇಳಬಹುದು. ಅದಕ್ಕಾಗಿಯೇ 

ದೇಶದಲ್ಲಿ ಹೋಮಿಯೋಪತಿ ವೈದ್ಯಕೀಯ ಪದ್ಧತಿಯು ಜಾರಿಗೆ ಬಂದು ನೂರ ಐವತ್ತು ವರುಷಗಳೇ ಕಳೆದು ಹೋಗಿವೆ.ಇದನ್ನು ಭಾರತೀಯ ಸಂಸ್ಕೃತಿಯ ಬೇರು ಹಾಗೂ ಸಂಪ್ರದಾಯಗಳೊಳಗೆ ಅಂತರ್ಗತಗೊಳಿಸಲ್ಪಟ್ಟ

ರಾಷ್ಟ್ರೀಯ ವೈದ್ಯಕೀಯ ಪದ್ಧತಿಯಲ್ಲೊಂದು ದಿವ್ಯ ಸಂಜೀವಿನಿ ಔಷಧಿಯಾಗಿ ರೂಪುಗೊಂಡಿದೆ.  

ಹಾಗಾಗಿ ಹೋಮಿಯೋಪತಿ 

ಗುಳಿಗೆಗಳ ಸುರಕ್ಷೆ ಮತ್ತು ತನ್ನ ಚಿಕಿತ್ಸೆಯು ಪರಿಣಾಮಕಾರಿಯಾಗಿ  ಕೆಲಸ ಮಾಡುತ್ತಿರುವ ಕಾರಣ ಜನಸಾಮಾನ್ಯರು ಹೆಚ್ಚು ಆಸಕ್ತಿ ತೋರುತ್ತಿದ್ದಾರೆ. ಒಂದು ಅಧ್ಯಯನದ ಮೂಲದ ಪ್ರಕಾರ, ಭಾರತೀಯ ಜನಸಂಖ್ಯೆಯ ಶೇ.14 ಕ್ಕಿಂತಲೂ ಹೆಚ್ಚು ಜನರು ಇದರ ಪ್ರಯೋಜನಗಳು ಪಡೆದು ಆರೋಗ್ಯವಂತರಾಗುತ್ತಿದ್ದಾರೆ ಎಂಬುದು ತಿಳಿದು ಬಂದಿದೆ. ಹೀಗಾಗಿ ಈದಿಗ ಆರೋಗ್ಯ ಶುಶ್ರೂಶೆಯ ಅಗತ್ಯಗಳಿಗೆ ಹೋಮಿಯೋಪತಿಯು ರಾಮಬಾಣವಾಗಿ ಕೆಲಸ ಮಾಡುತ್ತಿರುವ ಕಾರಣದಿಂದ  ಹೆಚ್ಚು ಹೆಚ್ಚಾಗಿ ಇದರ ಮೇಲೆ ಜನರು ಅವಲಂಬಿತರಾಗುತ್ತಿದ್ದಾರೆ.  

ದೇಶದ ಹಲವಾರು ಜನರ ಆರೋಗ್ಯ ಸಮಸ್ಯೆಗಳಿಗೆ ಪರಿಣಾಮಕಾರಿಯಾಗಿ ರೋಗ ನಿಯಂತ್ರಣ ಮಾಡುವಲ್ಲಿ

ಪ್ರಮುಖ ಪಾತ್ರ ವಹಿಸುತ್ತಿದೆ. ಇದರ ಪ್ರಮುಖ ಶಕ್ತಿಯೆಂದರೆ, ಅದು ವ್ಯಕ್ತಿಯ ಆರೋಗ್ಯ ಸಮಸ್ಯೆಗಳ ಪರಹಾರಕ್ಕೆ ಮಾನಸಿಕ, ಆಧ್ಯಾತ್ಮಿಕ, ಭಾವನಾತ್ಮಕ, ಭೌತಿಕ ಕಾಯದ ಮಟ್ಟದ ಎಲ್ಲವನ್ನೂ ಸಮಗ್ರವಾಗಿ ಪರಿಶೀಲಿಸಿ ಪರಿಹಾರೋಪಾಯದ ಮಾರ್ಗವನ್ನು ಒದಗಿಸುತ್ತಿದೆ.

ಆದರೆ ಹೋಮಿಯೋಪತಿ ಔಷಧಿಗಳು ರೋಗಿಯ ರೋಗ ನಿಯಂತ್ರಣ ಮಾಡಲು ಸ್ವಲ್ಪ ಸಮಯ ತೆಗೆದುಕೊಳ್ಳುತ್ತವೆ ಎನ್ನುವುದಂತೂ ಸತ್ಯ. ತಡವಾಗಿ ಆದರೂ ಪರವಾಗಿಲ್ಲ.ರೋಗಿಯ ರೋಗವನ್ನು ಸಂಪೂರ್ಣವಾಗಿ ಗುಣಪಡಿಸುತ್ತದೆ ಎನ್ನುವುದಂತೂ ನೂರಕ್ಕೆ ನೂರರಷ್ಟು ಸತ್ಯ ಮತ್ತು ಗ್ಯಾರಂಟಿ ಎನ್ನಬಹುದು.

ಇಲ್ಲಿ ಇನ್ನೊಂದು ವಿಷಯ ಸೂಕ್ಷ್ಮವಾಗಿ ಗಮನಿಸಬೇಕು ಅದೇನೆಂದರೆ ಇತರ ಔಷಧಿಗಳಂತೆ ಹೋಮಿಯೋಪತಿ ಔಷಧಿಗಳು ಮಾನವನ ಪ್ರತಿಜೀವಕಗಳು ಮತ್ತು  ಜೀರ್ಣಕ್ರಿಯೆಗೆ ಯಾವುದೇ ರೀತಿಯಲ್ಲೂ ಅಡ್ಡಿ ಉಂಟು ಮಾಡುವುದಿಲ್ಲ.ಪ್ರತಿರಕ್ಷಣಾ ಪ್ರತಿರೋಧವನ್ನು ಕಡಿಮೆ ಮಾಡುವುದಿಲ್ಲ, ಇದು ಅಲರ್ಜಿಯ ಪ್ರತಿಕ್ರಿಯೆಗಳನ್ನು ಖಂಡಿತವಾಗಿಯೂ ಹಾನಿ 

ಮಾಡುವುದಿಲ್ಲ ಮತ್ತು ಹೋಮಿಯೋಪತಿ ವೈದ್ಯರ ಸಲಹೆಯಂತೆ ಇವುಗಳನ್ನು ತೆಗೆದುಕೊಂಡರೆ ದೀರ್ಘಾವಧಿಯಲ್ಲಿ ಮಾನವನ ಆರೋಗ್ಯ ಸುರಕ್ಷಿತವಾಗಿರುತ್ತದೆ. ಇದರ ಜೊತೆಗೆ 

ಹೋಮಿಯೋಪತಿಯೊಂದಿಗೆ ಪ್ಯಾನೇಸಿಯ ಚಿಕಿತ್ಸೆಯನ್ನು ಹೊಂದಿರುವ ಕೆಲವು ರೋಗಗಳಿವೆ. ಹೋಮಿಯೋಪತಿ ಈ ಕಾಯಿಲೆಗಳಲ್ಲಿ ನೀವು ಊಹಿಸಲೂ ಸಾಧ್ಯವಾಗದಂತಹ ಪರಿಣಾಮವನ್ನು ತೋರಿಸುತ್ತದೆ. ಹೋಮಿಯೋಪತಿ ಔಷಧವು ತನ್ನದೇ ಆದ ಕೆಲವು ವಿಶೇಷ ನಿಯಮಗಳನ್ನು ಹೊಂದಿದೆ. ನೀವು ಈ ನಿಯಮಗಳನ್ನು ಸರಿಯಾಗಿ ಅನುಸರಿಸಿದರೆ ಸಾಕು, ಈ ಔಷಧಿ ತಕ್ಷಣವೇ ನಿಮ್ಮ ಮೇಲೆ ಪರಿಣಾಮ ಬೀರುತ್ತದೆ ಆತ್ಮೀಯ ಬಂಧುಗಳೇ.

ಇನ್ನು ಹೇಳಬೇಕೆಂದರೆ ಮದ್ಯಪಾನ, ಗುಟ್ಕಾ, ಧೂಮಪಾನ ಮಾಡದ ಮತ್ತು ಆರೋಗ್ಯಕರ ಜೀವನಶೈಲಿಯನ್ನು ಅನುಸರಿಸುವ ಜನರು ಹೋಮಿಯೋಪತಿ ಔಷಧಿಯನ್ನು ತೆಗೆದುಕೊಳ್ಳುವುದರಿಂದ ಅವರ ಮೇಲೆ ಔಷಧಿಯ ಪರಿಣಾಮವು ಬೇಗನೇ ಗೋಚರಿಸುತ್ತದೆ. ಈ ಔಷಧಿಯ ಫಲಿತಾಂಶವು ಪರಿಣಾಮಕಾರಿಯಾಗಿ ಕೆಲಸ ಮಾಡಿ, ಅವರನ್ನು ಸದಾಕಾಲ ಆರೋಗ್ಯವಂತರಾಗಿ ಕಾಪಾಡುತ್ತದೆ.   

ಹಾಗಾಗಿ ಈ ಔಷಧಿಯನ್ನು ತೆಗೆದುಕೊಂಡ ನಂತರ ಔಷಧಿಯ ಬಾಟಲಿಯನ್ನು ಬಿಗಿಯಾಗಿ ಮುಚ್ಚಿ. ಔಷಧಿ ಬಾಟಲಿಯನ್ನು ಎಂದಿಗೂ ತೆರೆದಿಡಬೇಡಿ.

ಬಲವಾದ ಸೂರ್ಯನ ಬೆಳಕು ಇರುವಲ್ಲಿ ಈ ಔಷಧಿಯನ್ನು ಇಡಬೇಡಿ.

ಯಾವಾಗಲೂ ತಂಪಾದ ಸ್ಥಳದಲ್ಲಿ ಸಂಗ್ರಹಿಸಿಡಿ, ಬಿಸಿ ಹಾಗೂ ಎಲೆಕ್ಟ್ರಾನಿಕ್ ಸಾಧನಗಳಿಂದ ದೂರ ಇಡಿ.

ಹೋಮಿಯೋಪತಿ ಔಷಧವನ್ನು ಕೈಯಲ್ಲಿ ತೆಗೆದುಕೊಂಡು ತಿನ್ನಬಾರದು. ಮುಚ್ಚಳದ ಮೂಲಕ ಬಾಯಿಗೆ ಹಾಕಿಕೊಂಡು ನೇರವಾಗಿ ತಿನ್ನಿರಿ.

ಔಷಧಿಯನ್ನು ತೆಗೆದುಕೊಂಡ 30 ನಿಮಿಷಗಳವರೆಗೆ ಏನನ್ನೂ ತಿನ್ನಬೇಡಿ ಅಥವಾ ಕುಡಿಯಬೇಡಿ, ಹಲ್ಲುಜ್ಜ ಬೇಡಿ. ವಿಶೇಷವಾಗಿ ಟೀ, ಕಾಫಿ,ಚಾಹಾ, ಹುಳಿ ಆಹಾರಗಳು, ಈರುಳ್ಳಿಗಳಿಂದ ದೂರ ಇರಬೇಕು.

ಹೀಗೆ ವ್ಯವಸ್ಥಿತವಾಗಿ ಹೋಮಿಯೋಪತಿ ವೈದ್ಯರು ಸೂಚಿಸುವ ಸಲಹೆ ಸೂಚನೆಗಳನ್ನು ತಪ್ಪದೇ ಪಾಲಿಸಿದರೆ ಸಾಕು ಎಂತದೇ ಭಯಾನಕ ರೋಗವಿದ್ದರೂ ಗುಣಪಡಿಸಲು ಸಾಧ್ಯವಿದೆ. ಯಾವುದೇ ರೀತಿಯ ಅಡ್ಡ ಪರಿಣಾಮ ಬೀರುವುದಿಲ್ಲ. 

ಇದೊಂದು ಮಾನವರಿಗೆ ದಿವ್ಯ ಸಂಜೀವಿನಿ ಎಂದರೆ ಖಂಡಿತವಾಗಿಯೂ ತಪ್ಪಾಗಲಾರದು. ಕಡಿಮೆ ದರದಲ್ಲಿ ಹೆಚ್ಚಿನ ಲಾಭ ಪಡೆಯಬಹುದು.

ಲೇಖಕರು – ಸಂಗಮೇಶ ಎನ್ ಜವಾದಿ.

ಸಾಹಿತಿ, ಪತ್ರಕರ್ತರು, ಸಾಮಾಜಿಕ ಸೇವಕರು.

About Mallikarjun

Check Also

ರಾಷ್ಟ್ರೀಯ ಪಕ್ಷ ಬಿಎಸ್ಪಿಗೆ ಅವಕಾಶನೀಡಿ:ಎಂ.ಕೃಷ್ಣಮೂರ್ತಿ

ಕೊಪ್ಪಳ.ಮೇ.04: ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್-ಬಿಜೆಪಿ ಪಕ್ಷಕ್ಕೆ ಬುದ್ಧಿ ಕಲಿಸಿ ಬಿಎಸ್ ಪಿ ಪಕ್ಷವನ್ನು ಬೆಂಬಲಿಸುವಂತೆ ಬಹುಜನ ಸಮಾಜ …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.