Breaking News

ಹುಬ್ಬಳ್ಳಿ: ಕರ್ನಾಟಕ ಚೇಂಬರ್ ಅಧ್ಯಕ್ಷರಾಗಿ ಸಂಶಿಮಠ ಆಯ್ಕೆ

Teacher’s Day Celebration at Azzipur Government Senior Primary School,

ಜಾಹೀರಾತು

ಹುಬ್ಬಳ್ಳಿ: ಇಲ್ಲಿನ ಕರ್ನಾಟಕ ಚೇಂಬರ್ ಆಫ಼್ ಕಾಮರ್ಸ್ & ಇಂಡಸ್ಟ್ರಿ ಅಧ್ಯಕ್ಷರಾಗಿ ಎಸ್.ಪಿ.ಸಂಶಿಮಠ ಆಯ್ಕೆಯಾಗಿದ್ದಾರೆ.ಪ್ರಸ್ತುತ ಇದೇ ಸಂಸ್ಥೆಯ ಉಪಾಧ್ಯಕ್ಷರಾಗಿರುವ ಅವರು ಪ್ರತಿಸ್ಪರ್ಧಿ ಅಭ್ಯರ್ಥಿಗಿಂತ 58 ಮತಗಳ ಅಂತರ ಸಾಧಿಸಿ, ಚುನಾವಣೆಯ ಮೂಲಕ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ಮೂಲತಃ ಗದಗ ನಗರದ ಪ್ರಮುಖ ಚಹಾ ಪುಡಿ ವ್ಯಾಪಾರಿಗಳಾದ ಇವರು ಗದಗ ಜಿಲ್ಲಾ ವಾಣಿಜ್ಯೊಧ್ಯಮ ಮತ್ತು ಕೈಗಾರಿಕಾ ಸಂಸ್ಥೆಯಲ್ಲಿ ವಿವಿಧ ಹುದ್ದೆಗಳ ಮೂಲಕ ಕ್ರೀಯಾಶೀಲರಾಗಿ ಕೆಲಸ ಮಾಡುತ್ತಾ ಬಂದಿದ್ದಾರೆ.

ಇವರ ಆಯ್ಕೆಯಿಂದ ಕೊಪ್ಪಳ ಜಿಲ್ಲೆಯ ವಿವಿಧ ಕಾರ್ಯಗಳನ್ನು ಪರಸ್ಪರ ಹೊಂದಾಣಿಕೆಯಿಂದ ಮಾಡಲು ಸಾಧ್ಯವಾಗಲಿದೆ ಎಂದು ಬೆಂಗಳೂರಿನ ಫ಼ೆಡರೇಶನ್ ಆಫ಼್ ಕರ್ನಾಟಕ ಚೇಂಬರ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿಯ ಕಾರ್ಯಕಾರಿ ಮಂಡಳಿಯ ನೂತನ ಸದಸ್ಯ ಮತ್ತು ಕೊಪ್ಪಳ ಜಿಲ್ಲಾ ವಾಣಿಜ್ಯೊಧ್ಯಮ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷ ಅಶೋಕಸ್ವಾಮಿ ಹೇರೂರ ಅಭಿಪ್ರಾಯ ಪಟ್ಟಿದ್ದಾರೆ. ಈ ಸಂಧರ್ಭದಲ್ಲಿ ನೂತನ ಅಧ್ಯಕ್ಷ ಸಂಶಿಮಠ ಮತ್ತು ಉಪಾಧ್ಯಕ್ಷರಾಗಿ ಆಯ್ಕೆಯಾಗಿರುವ ಸಂದೀಪ್ ಬಿಡಸಾರಿಯಾ ಅವರಿಗೆ ಅಭಿಂದನೆಗಳನ್ನು ಹೇರೂರ ತಿಳಿಸಿದ್ದಾರೆ.

About Mallikarjun

Check Also

ಶಾಸಕ ಕೆ ಷಡಕ್ಷರಿ ಅವರಿಂದ ಕಾರ್ಮಿಕರಿಗೆ ಕಿಟ್ ವಿತರಣೆ

MLA K Shadakshari distributes kits to workers ತಿಪಟೂರು.ಇಂದು ಕಾರ್ಮಿಕ ಇಲಾಖೆ, ಹಾಗೂ ದೇವರಾಜು ಅರಸು ನಿಗಮದ ವತಿಯಿಂದ …

Leave a Reply

Your email address will not be published. Required fields are marked *