Distribution of 200 saplings by Vanasiri Foundation on Ganeshotsavam
ಸಿಂಧನೂರು ನಗರದ ರಾಮ ಕಿಶೋರ ಕಾಲೋನಿಯಲ್ಲಿ ವ ವಿವೇರಾ ಗ್ರ್ಯಾಂಡ್ 38 ನೇ ವರ್ಷದ ಗಣೇಶೋತ್ಸವ ಕಾರ್ಯಕ್ರಮದಲ್ಲಿ ವನಸಿರಿ ಫೌಂಡೇಶನ್ ವತಿಯಿಂದ 200ಸಸಿಗಳನ್ನ ವಿತರಣೆ ಮಾಡಲಾಯಿತು.ಪ್ರತಿ ವರ್ಷ ವನಸಿರಿ ಫೌಂಡೇಶನ್ ವತಿಯಿಂದ ಸಸಿಗಳನ್ನು ವಿತರಣೆ ಮಾಡುತ್ತಿರುವ ಕಾರ್ಯಕ್ಕೆ ಮಹಿಳೆಯರೆಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿ,ಸಂತೋಷ ಸಡಗರದಿಂದ ಸಸಿಗಳನ್ನು ತೆಗೆದುಕೊಂಡು ಹೋದರು.
ಈ ಸಂದರ್ಭದಲ್ಲಿ ಪರಿಸರ ರಾಜ್ಯ ಪ್ರಶಸ್ತಿ ಪುರಸ್ಕೃತರು ಹಾಗೂ ವನಸಿರಿ ಫೌಂಡೇಶನ್ ಅದ್ಯಕ್ಷರಾದ ಅಮರೇಗೌಡ ಮಲ್ಲಾಪುರ,ಜಿಲ್ಲಾ ಮಹಿಳಾ ಅಧ್ಯಕ್ಷೆ ಸಂಗೀತ ಸಾರಂಗಮಠ,ಗೌರವ ಅಧ್ಯಕ್ಷೆ ರಾಜೇಶ್ವರಿ ತಡಕಲ್,ಶಿವು ಲಯನ್ಸ್ ಕ್ಲಬ್,ಇನ್ನೂ ಹಲವಾರು ಮಹಿಳೆಯರು, ಯುವಕರು ಉಪಸ್ಥಿತರಿದ್ದರು.