Tipaturu – Appointment letter and ID card distribution to health workers.
ತಿಪಟೂರು -ಆರೋಗ್ಯ ಸಖಿಯರಿಗೆ ನೇಮಕಾತಿ ಪತ್ರ ಹಾಗೂ ಐ.ಡಿ ಕಾರ್ಡ್ ವಿತರಣೆ. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಜನಸ್ಪಂದನ ಟ್ರಸ್ಟ್ ಅಧ್ಯಕ್ಷ ಶಶಿಧರ್ (ಟೂಡಾ)
ತಾಲ್ಲೂಕಿನ ಮಹಿಳೆಯರಿಗೆ ಉತ್ತಮ ಆರೋಗ್ಯ ನೀಡುವ ಉದ್ದೇಶದಿಂದ ನಮ್ಮ ಆರೋಗ್ಯ ಕೇಂದ್ರಗಳನ್ನು ಪ್ರಾರಂಭಿಸಿದ್ದು, ಮುಂದಿನ ದಿನಗಳಲ್ಲಿ ತಾಲ್ಲೂಕಿನಾದ್ಯಂತ ಪ್ರಾರಂಭ ಮಾಡುವ ಆಶಯ ಹೊಂದಿದ್ದೇವೆ ಹಾಗೂ ಮಹಿಳೆಯರಿಗೆ ದೈಹಿಕ ಸ್ತ್ರೀರೋದ ಸಮಸ್ಯೆಗಳ ಜತೆಗೆ ಮಾನಸಿಕ ಆರೋಗ್ಯಕ್ಕಾಗಿ ಸಮಾಲೋಚನೆ ಅವಶ್ಯಕವಿದ್ದು ಮುಂದಿನ ದಿನಗಳಲ್ಲಿ ಮಹಿಳೆಯರಿಗೆ ಇಂತಹ ಕಾರ್ಯಕ್ರಮಗಳನ್ನು ಆಯೋಜನೆ ಮಾಡುವ ಯೋಜನೆ ಇದೆ ಎಂದರು.
ಇ ವೇಳೆ ಮಾತನಾಡಿದ ಮುದ್ರಾ ಆಸ್ಪತ್ರೆಯ ಡಾ. ಆರ್ ಅನಿಲ್ ಮಹಿಳೆಯರ ಆರೋಗ್ಯ, ಸಬಲೀಕರಣ ಹಾಗೂ ಶಿಕ್ಷಣ ಇವು ದೇಶದ ಅಭಿವೃದ್ಧಿಯ ಸೂಚ್ಯಂಕವಾಗಿದೆ. ಇಂದು ಗ್ರಾಮೀಣ ಮಹಿಳೆಯರು ಹಲವಾರು ಮಾನಸಿಕ ಹಾಗೂ ದೈಹಿಕ ಸಮಸ್ಯೆಗಳಿಂದ ಬಳಲುತ್ತಿದ್ದು, ಬಹಳ ಮುಖ್ಯವಾಗಿ ಮಾನಸಿಕ ಆರೋಗ್ಯಕ್ಕೆ ಸಂಬಂಧಿಸಿದಂತೆ ನಾವು ಕೆಲಸ ಮಾಡಬೇಕಿದೆ. ಜೊತೆಗೆ ಇಂದು ಪ್ರೌಢಾಶಾಲಾವಸ್ಥೆಯ ಹೆಣ್ಣುಮಕ್ಕಳಲ್ಲಿ ಋತುಮತಿ ಸಮಸ್ಯೆಗಳು ಹೆಚ್ಚಾಗಿದ್ದು ಅವರಲ್ಲಿ ಆರೋಗ್ಯದ ಜಾಗೃತಿ ಹಾಗೂ ಸ್ವಚ್ಛತೆ ಬಗ್ಗೆ ಅರಿವು ಮೂಡಿಸಬೇಕಿದೆ. ಇನ್ನೂ ಮುಂದಿನ ದಿನಗಳಲ್ಲಿ ಮುದ್ರಾ ಆಸ್ಪತ್ರೆಯು ತಾಲ್ಲೂಕಿನ ಗ್ರಾಮೀಣ ಮಹಿಳೆಯರ ಆರೋಗ್ಯಕ್ಕಾಗಿ ಕಾರ್ಯನಿರ್ವಹಿಸುತ್ತಿರುವ ನಮ್ಮ ಆರೋಗ್ಯ ಕೇಂದ್ರದ ಜತೆ ಕೈ ಜೋಡಿಸಿ ಇನ್ನೂ ಹೆಚ್ಚಿನ ರೀತಿಯಲ್ಲಿ ಜನಸ್ಪಂದನ ಟ್ರಸ್ಟ್‌ನೊಂದಿಗೆ ಸಮಾಜಮುಖಿ ಕೆಲಸಗಳನ್ನು ಮಾಡುತ್ತೇವೆ ಎಂದರು.
ಮುದ್ರಾ ಆಸ್ಪತ್ರೆಯ ಡಾ. ರಮೇಶ್ ಬಾಬು ಅವರು ಮಾತನಾಡಿ ಇಂದು ಮಹಿಳೆಯರ ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದು, ಬಹಳ ಮುಖ್ಯವಾಗಿ ಮಕ್ಕಳಾಗದಿರುವುದು, ಮುಟ್ಟಿನ ಸಮಸ್ಯೆ ಹಾಗೂ ಅರಿವಿನ ಕೊರತೆ ಇದೆ. ಇನ್ನೂ ಹೆಚ್ಚಿನದಾಗಿ ಇಂದು ಮಕ್ಕಳಾಗದಿರುವ ಸಮಸ್ಯೆಗಳು ಹೆಚ್ಚಾಗಿವೆ ಮತ್ತು ಗ್ರಾಮೀಣ ಮಹಿಳೆಯರಿಗೆ ಸೂಕ್ತ ಸಲಹೆ ಮತ್ತು ಸಮಾಲೋಚನೆ ಬಹಳ ಮುಖ್ಯ ಎಂದರು
ಕಾರ್ಯಕ್ರಮದಲ್ಲಿ ನಮ್ಮ ಆರೋಗ್ಯ ಕೇಂದ್ರದ ಮೇಲ್ವಿಚಾರಕ ಶ್ರೀಕಾಂತ್ ಕೆಳಹಟ್ಟಿ ಹಾಗೂ ಎಲ್ಲಾ ಆರೋಗ್ಯ ಸಖಿಯರು ಹಾಜರಿದ್ದರು.