Breaking News

ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರ ಸಂಘದ ನೇತೃತ್ವದಲ್ಲಿತಮಿಳುನಾಡಿಗೆ ಕಾವೇರಿ ನೀರು ಬಿಟ್ಟಿರುವುದನ್ನು ಖಂಡಿಸಿ ಹೆದ್ದಾರಿ ಬಂದ್

Under the leadership of the Karnataka State Sugarcane Growers Association, the highway was blocked to condemn the release of Cauvery water to Tamil Nadu.


ವರದಿ : ಬಂಗಾರಪ್ಪ ಸಿ .
ಚಾಮರಾಜನಗರ :ಬೆಂಗಳೂರು ಸೇರಿದಂತೆ ಹಲವೆಡೆ ನಮಗೆ ಕುಡಿಯಲು ನೀರುಇಲ್ಲದಿರುವಾಗ ತಮಿಳುನಾಡಿಗೆ ನೀರು ಬಿಟ್ಟಿರುವುದನ್ನು ವಿರೋದಿಸಿ ಕರ್ನಾಟಕ ಕಬ್ಬು ಬೆಳಗಾರ ಸಂಘದ ಪದಾಧಿಕಾರಿಗಳಿಂದ ಚಾಮರಾಜನಗರದ ಸೋಮವಾರಪೇಟೆಯ ಮುಖ್ಯರಸ್ತೆಯಲ್ಲಿ ಜಮಾಣಿಗೊಂಡು ರಾಜ್ಯ ಸರ್ಕಾರದ ನೀತಿಯನ್ನು ಖಂಡಿಸಿ ಹೆದ್ದಾರಿ ಬಂದ್ ಚಳುವಳಿಯನ್ನು ರಾಜ್ಯಾಧ್ಯಕ್ಷ ಹಳ್ಳಿಕೆರೆಹುಂಡಿ ಭಾಗ್ಯರಾಜ್ ನೇತೃತ್ವದಲ್ಲಿ ನಡೆಸಲಾಯಿತು .
ಚಳುವಳಿಯ ನಂತರ ಮಾತನಾಡಿದ ಅವರು ರಾಜ್ಯದಲ್ಲಿ ರಾಜ್ಯ ಸರ್ಕಾರವೇ ತೀವ್ರ ಬರಗಾಲವಿದೆ ಕುಡಿಯಲು ನೀರಿಲ್ಲ ಎಂದು ಜನಜಾನುವಾರುಗಳಿಗೆ ನೀರಿಲ್ಲ ಕಾವೇರಿ ಅಚ್ಚುಕಟ್ಟು ಭಾಗದಲ್ಲಿ ತೀವ್ರ ಬರಗಾಲವಿದೆ ಸಂಕಷ್ಟವಿದರು ಕೂಡ ತಮಿಳುನಾಡಿನ ಓಲೈಕೆ ರಾಜಕಾರಣಕ್ಕಾಗಿ ರಾಜ್ಯದ ನೀರಾವರಿ ಸಚಿವರು ರಾಜ್ಯದ ನೀರನ್ನು ಬಿಡುತ್ತಿರುವುದು ನಾಚಿಕೆಗೇಡಿನ ವಿಷಯ ರಾಜ್ಯದ ಜನರಿಗೆ ಬೆಳೆ ಬೆಳೆಯುವುದಕಲ್ಲ ಕುಡಿಯುವ ನೀರಿಗಾಗಿ ಅಹಾಕಾರವಿದ್ದರೂ ರಾಜಕಾರಣಕ್ಕಾಗಿ ನಿರ್ವಹಿಸುವುದು ಇದು ರೈತರಿಗೆ ಮತ್ತು ರಾಜ್ಯದ ಜನರಿಗೆ ನೀರಾವರಿ ಸಚಿವರು ಮಾಡಿದಂತಹ ದ್ರೋಹ ರಾಜ್ಯದ ಕೆ ಆರ್ ಎಸ್ ಡ್ಯಾಮ್ ನಲ್ಲಿ ಕೇವಲ 16 ಟಿಎಂಸಿ ನೀರು ಮಾತ್ರ ಇದ್ದು ರಾಜ್ಯದ ಜನರಿಗೆ ಕುಡಿಯುವ ಮತ್ತು ಜನಜಾನುವಾರುಗಳಿಗೆ ಪ್ರತಿ ತಿಂಗಳಿಗೆ ಎರಡು ಟಿಎಂಸಿ ನೀರು ಬೇಕಾಗುತ್ತದೆ ಆದರೆ ಪ್ರಾಧಿಕಾರದ ಆದೇಶದ ಮೇಲೆ ಡ್ಯಾಮ್ ನಿಂದ ನೀರನ್ನು ಬಿಟ್ಟರೆ ಅದರಲ್ಲಿ ಉಳಿಯುವುದು ಕೇವಲ ಹನ್ನೊಂದು ಟಿಎಂಸಿ ಮಾತ್ರ ಇದರಲ್ಲಿ ಎಂಟು ಟಿಎಂಸಿ ನೀರು ಡೆಡ್ ಸ್ಟೋರೇಜ್ ಆದ ಕಾರಣ ರಾಜ್ಯ ಸರ್ಕಾರ ನೀರನ್ನು ಬಿಟ್ಟು ಒಂದು ಕಣ್ಣಿಗೆ ಸುಣ್ಣ ಮತ್ತೊಂದು ಕಣ್ಣಿಗೆ ಬೆಣ್ಣೆ ಹಾಕುವ ರಾಜಕೀಯ ಹಿಬ್ಬಂದಿ ನೀತಿಯನ್ನು ಅನುಸರಿಸುತ್ತಿದೆ ರಾಜ್ಯದಲ್ಲಿ ಕಳೆದ ಸಾಲಿನಲ್ಲಿ ನೀರನ್ನು ಹರಿಸಿ ಯಾವುದೇ ಬೆಳೆ ನಷ್ಟವನ್ನು ಕೂಡ ರೈತರಿಗೆ ನೀಡದೆ ರೈತರನ್ನು ಬೀದಿ ಪಾಲು ಮಾಡಿದ್ದಾರೆ ಆದ್ದರಿಂದ ನ್ಯಾಯ ಮಂಡಳಿಗೆ ಮನವರಿಕೆ ಮಾಡಿ ತಕ್ಷಣ ನೀರನ್ನು ನಿಲ್ಲಿಸಬೇಕೆಂದು ಒತ್ತಾಯಿಸುತ್ತೇವೆ ಎಂದರು .

ಇದೇ ಸಮಯದಲ್ಲಿ ಜಿಲ್ಲಾಧ್ಯಕ್ಷ ಹಾಲಿನ ನಾಗರಾಜ್ ಹಾಡ್ಯ. ಡಾಕ್ಟರ್ ಅನುಮಯ್ಯ. ರವಿ. ಊಡಿಗಾಲ ಮಂಜುನಾಥ್. ಚೇರ್ಮನ್ ಗುರು ಮಲ್ಲಪ್ಪ. ಅರಳಿ ಕಟ್ಟೆ ಕುಮಾರ್. ಕನಕ. ಜನ್ನೂರು ಶಾಂತರಾಜು. ಮುದ್ದಹಳ್ಳಿಚಿಕ್ಕ ಸ್ವಾಮಿ. ಶಿವಣ್ಣ. ದೇವನೂರು ನಾಗೇಂದ್ರ. ಅಂಬಳೆ ಮಹದೇವಸ್ವಾಮಿ.ವಡಗೆರೆ ಗಣೇಶ್. ಮಲಿಯೂರು ಮಹೇಂದ್ರ. ಪ್ರವೀಣ್. ಸಿದ್ದರಾಜು. ಸತೀಶ್ ಸೇರಿದಂತೆ ಇನ್ನಿತರರು ಹಾಜರಿದ್ದರು .

About Mallikarjun

Check Also

ಅಶೋಕಸ್ವಾಮಿ ಹೇರೂರಭೇಟಿ:ಕಾಂಗ್ರೆಸ್ಸಿಗರಿಂದಮತಯಾಚನೆ.

ಗಂಗಾವತಿ:ರಾಜ್ಯ ವಾಣಿಜೋಧ್ಯಮ ಮತ್ತು ಕೈಗಾರಿಕಾ ಸಂಸ್ಥೆಯ ನಿರ್ದೇಶಕ ಮತ್ತು ರಾಜ್ಯ ಔಷಧ ವ್ಯಾಪಾರಿಗಳ ಸಂಘದ ಉಪಾಧ್ಯಕ್ಷ ಅಶೋಕಸ್ವಾಮಿ ಹೇರೂರ ಅವರನ್ನು …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.