Breaking News

ಅಪಾರ್ಟ್ ಮೆಂಟ್ ಗಳಲ್ಲಿ ವಾಸಿಸುವ ಜನರಿಗಾಗಿ ಪ್ರತ್ಯೇಕ ಇಲಾಖೆ ತೆರೆದು ಕಾನೂನುರೂಪಿಸುವುದುಅಗತ್ಯ:ಲೋಕಾಯುಕ್ತ ನ್ಯಾಯಮೂರ್ತಿ ಎನ್. ಸಂತೋಷ್ ಹೆಗಡೆ

A separate department should be opened and legalized for people living in apartments: Lokayukta Justice N. Santhosh Hegade

ಬೆಂಗಳೂರು; ಅಪಾರ್ಟ್ ಮೆಂಟ್ ಗಳಲ್ಲಿ ವಾಸಿಸುವ ಜನರಿಗಾಗಿ ಪ್ರತ್ಯೇಕ ಇಲಾಖೆ ತೆರೆದು, ಅವರ ಆಗುಹೋಗುಗಳನ್ನು ಸೂಕ್ತ ರೀತಿಯಲ್ಲಿ ನಿಭಾಯಿಸುವ ಅಗತ್ಯವಿದೆ. ಅಪಾರ್ಟ್ ಮೆಂಟ್ ವಾಸಿಗಳಿಗಾಗಿ ಪ್ರತ್ಯೇಕ ಕಾನೂನು ರೂಪಿಸುವುದು ಸೂಕ್ತ ಎಂದು ಲೋಕಾಯುಕ್ತ ನ್ಯಾಯಮೂರ್ತಿ ಎನ್. ಸಂತೋಷ್ ಹೆಗಡೆ ಹೇಳಿದ್ದಾರೆ.
ನಗರದ ಸೆಂಟ್ ಜೋಸೆಫ್ ಕಾನೂನು ಕಾಲೇಜಿನಲ್ಲಿ ನಡೆದ “ವಸತಿ ಸಮುಚ್ಚಯಗಳ ಕಾನೂನು ನಿಮಗೆ ತಿಳಿದಿರಬೇಕು” ಎಂಬ ವಿಚಾರಗೋಷ್ಠಿ ಉದ್ಘಾಟಿಸಿ ಮಾತನಾಡಿದ ಅವರು, ಅಪಾರ್ಟ್ ಮೆಂಟ್ ಮಾಲೀಕರ ಬೇಡಿಕೆ, ಕುಂದುಕೊರತೆಗಳನ್ನು ನಿವಾರಿಸುವ ಜವಾಬ್ದಾರಿಯನ್ನು ನಿವಾರಿಸಬೇಕಾಗಿದೆ. ಲೋಕಾಯುಕ್ತ ನಿವೃತ್ತ ನ್ಯಾಯಮೂರ್ತಿ ಎನ್.ಸಂತೋಷ್ ಹೆಗಡೆ ಮಾತನಾಡಿ, ತಮಗೆ ಒಂದು ಸಣ್ಣ ಅಪಾರ್ಟ್ ಮೆಂಟ್ ಹೊರತುಪಡಿಸಿದರೆ ಬೇರೆ ಆಸ್ತಿ ಇಲ್ಲ. ವಸತಿ ಸಮುಚ್ಚಯದಲ್ಲಿರುವವರ ಹಿತ ರಕ್ಷಣೆ ಅತ್ಯಂತ ಅಗತ್ಯವಾಗಿದೆ. ಮಾನವ ಸಂಘ ಜೀವಿ. ಎಲ್ಲರೊಂದಿಗೆ ಅರಿತು, ಬೆರೆತು ಬಾಳುವುದನ್ನು ಕಲಿಯಬೇಕಾಗಿದೆ. ಸರ್ಕಾರಕ್ಕೆ ಈ ಸಂಬಂಧ ಕಾನೂನು ರೂಪಿಸುವಂತೆ ಮನವಿ ಸಲ್ಲಿಸುವುದು ಸೂಕ್ತ. ಎಂದರು.
ನಿವೃತ್ತ ನ್ಯಾಯಮೂರ್ತಿ ಕೆ. ರಾಮಚಂದ್ರನ್ ಮಾತನಾಡಿ, ನಗರ ಮತ್ತು ಅರೆನಗರ ಪ್ರದೇಶಗಳ ವಸತಿ ಸಮುಚ್ಚಯಗಳಲ್ಲಿ ಇತ್ತೀಚೆಗೆ ಹೆಚ್ಚಿನ ಪ್ರಮಾಣದಲ್ಲಿ ಜನ ನೆಲೆಸುತ್ತಿದ್ದು, ವಸತಿ ಸಮುಚ್ಚಯಗಳ ಕಾನೂನುಗಳ ಬಗ್ಗೆ ವಿಶೇಷವಾಗಿ ಮಹಿಳೆಯರಿಗೆ ಅರಿವಿರಬೇಕು ಎಂದು ಹೇಳಿದ್ದಾರೆ.
ವಸತಿ ಸಮುಚ್ಚಯಗಳಲ್ಲಿ ಮಹಿಳೆಯರು ಹೆಚ್ಚಿನ ಪ್ರಮಾಣದಲ್ಲಿ ನೆಲೆಸುತ್ತಿದ್ದು, ಇದಕ್ಕಾಗಿಯೇ ಮೀಸಲಾಗಿರುವ ಕಾನೂನುಗಳ ಬಗ್ಗೆ ತಿಳಿದುಕೊಳ್ಳಬೇಕು. ಇದರಿಂದ ಕುಟುಂಬದ ರಕ್ಷಣೆ ಜೊತೆಗೆ ತಾವಿರುವ ವಾತಾವರಣವನ್ನು ಸಹನೀಯಗೊಳಿಸಬಹುದು ಎಂದರು.
ಮೂಲಭೂತವಾಗಿ ಪ್ರತಿಯೊಬ್ಬರೂ ಆಸ್ತಿ ಹಕ್ಕುಗಳ ಬಗ್ಗೆ ತಿಳಿದುಕೊಳ್ಳಲೇಬೇಕು. ತಾವು ಕೇರಳ ಹೈಕೋರ್ಟ್ ನಲ್ಲಿ ಎರಡು ದಶಕಗಳ ಕಾಲ ನಿಯಮ ಸಮಿತಿಯ ಸದಸ್ಯರಾಗಿ ಕಾರ್ಯನಿರ್ವಹಿಸಿದ್ದು, ಕರ್ನಾಟಕದಲ್ಲಿರುವ ನಿಯಮಗಳೇ ಕೇರಳದಲ್ಲಿವೆ. ಸಂವಿಧಾನ ಪ್ರತಿಯೊಬ್ಬರಿಗೂ ಘನತೆಯಿಂದ ಬದುಕುವ ಹಕ್ಕುಗಳನ್ನು ಕಲ್ಪಿಸಿದ್ದು, ನಾವು ವಾಸಿಸುವ ಪ್ರದೇಶಗಳ ಬಗೆಗಿನ ಕಾನೂನುಗಳನ್ನು ತಿಳಿದುಕೊಳ್ಳಲೇಬೇಕು ಎಂದು ಹೇಳಿದರು.
ರಾಜ್ಯ ವಕೀಲರ ಸಂಘದ ಅಧ್ಯಕ್ಷ ವಿವೇಕ್ ಸುಬ್ಬಾರೆಡ್ಡಿ ಮಾತನಾಡಿ, ವಸತಿ ಸಮುಚ್ಚಯ ನಿವಾಸಿಗಳ ರಕ್ಷಣೆಗಾಗಿ ಈ ವಲಯ ಸಂಘಟಿತರಾಗುವುದು ಅತ್ಯಂತ ಅಗತ್ಯವಾಗಿದೆ. ಸಂಘಟನೆ ರಾಜಕೀಯೇತರವಾಗಿರಬೇಕು. ರೇರಾ ಕಾನೂನುಗಳು ಆಸ್ತಿ ಖರೀದಿಗೆ ಸಂಬಂಧಿಸಿದ್ದಾಗಿದ್ದು, ವಸತಿ ಸಮುಚ್ಚಯಗಳು ತನ್ನದೇ ಆದ ಕಾನೂನುಗಳಡಿ ಕಾರ್ಯನಿರ್ವಹಿಸಬೇಕಾಗುತ್ತದೆ. ವಸತಿ ಸಮುಚ್ಚಯಗಳನ್ನು ನಿರ್ಮಿಸಿದ ನಂತರ ಅದನ್ನು ರೇರಾ ವಸತಿ ಸಮುಚ್ಚಯಗಳ ಸಂಘಟನೆಗಳಿಗೆ ಅಪಾರ್ಟ್ ಮೆಂಟ್ ಜವಾಬ್ದಾರಿಯನ್ನು ವಹಿಸಬೇಕು. ಚೀನಾದಲ್ಲಿ ಆಸ್ತಿ ಹೊಂದುವ ಅಧಿಕಾರ ಇಲ್ಲ. ಆದರೆ ಭಾರತದ ಕಾನೂನುಗಳು ಅತ್ಯಂತ ವೈವಿಧ್ಯಮಯ ಮತ್ತು ಬಲಿಷ್ಠವಾಗಿವೆ. ಆಸ್ತಿ ವ್ಯಕ್ತಿಗಳಿಗೆ ಭದ್ರತೆಯನ್ನೂ ಸಹ ನೀಡುತ್ತವೆ ಎಂದರು.
ನೆಕ್ಸ್ಟ್ ಲೀಗಲ್ ಸರ್ವೀಸ್ ನ ಹಿರಿಯ ವಕೀಲರಾದ ಬೀನಾ ಪಿಳ್ಳೈ ಮಾತನಾಡಿ, ವಸತಿ ಸಮುಚ್ಚಯಗಳ ಕಾನೂನುಗಳ ಬಗ್ಗೆ ಸ್ಪಷ್ಟತೆ ಬರಬೇಕಾಗಿದೆ. ಆಸ್ತಿ ಹಕ್ಕು ಅತ್ಯಂತ ವಿಸ್ತಾರವಾಗಿದ್ದು, ಇದು ಸಂವಿಧಾನದ ಹಕ್ಕುಗಳಾಗಿವೆ. ಅಪಾರ್ಟ್ ಮೆಂಟ್ ಕಾನೂನುಗಳು ತನ್ನದೇ ಆದ ಪ್ರತ್ಯೇಕ ಆಯಾಮವನ್ನು ಒಳಗೊಂಡಿವೆ ಎಂದು ಹೇಳಿದರು.
ಎಂ.ಆರ್.ಪಿ.ಎಲ್ ನ ಕಾನೂನು ವಿಭಾಗದ ಮುಖ್ಯಸ್ಥ ಅಲ್ ರಫೀಕ್ ಮೊಯಿದ್ದೀನ್ ಮಾತನಾಡಿ, ತಾವು 1999 ರಲ್ಲಿ ಅಪಾರ್ಟ್ ಮೆಂಟ್ ಅಸೋಸಿಯೇಷನ್ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದು, ಹಲವಾರು ವರ್ಷಗಳು ಕಳೆದರೂ ಸಹ ಅಪಾರ್ಟ್ ಮೆಂಟ್ ಕಾನೂನುಗಳ ಬಗ್ಗೆ ಸ್ಪಷ್ಟತೆ ಮೂಡಿಲ್ಲ ಎಂದರು.

About Mallikarjun

Check Also

ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಮನೆಗೆ ಬೆಂಕಿ. ಅಪಾರ ಪ್ರಮಾಣದಲ್ಲಿ ನಷ್ಟ.

ತಿಪಟೂರು ತಾಲ್ಲೂಕಿನ ಕಿಬ್ಬನಹಳ್ಳಿ ಹೋಬಳಿ ಕುಪ್ಪಾಳು ಗ್ರಾಮ ಪಂಚಾಯತಿ ವ್ಯಾಪ್ತಿಯ ಕೊಟ್ಟಿಗೆಹಳ್ಳಿ ಗ್ರಾಮದ ದಲಿತ ಸಮುದಾಯದ ಕೆಂಪರಾಮಯ್ಯ ಸನ್ ಆಫ್ …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.