
Statement against Minister Thangadgi: Hypocrite Swamiji's party love is just that: Jyoti
ಕೊಪ್ಪಳ: ಖಾವಿ ಹಾಕಿದ ಮೇಲೆ ಪೂರ್ವಾಶ್ರಮದ ಕುರಿತು ಒಂದು ನೆನಪು ಉಳಿಸಿಕೊಳ್ಳಬಾರದು, ಆದರೆ ಗಾಣಿಗ ಸಂಸ್ಥಾನದ ಸ್ವಾಮೀಜಿ ಮಾತ್ರ ತಾನೂ ಸಹ ಶಾಸಕ ಆಗಿದ್ದೇ ಎನ್ನುವ ಮೂಲಕ ತಮ್ಮ ಕಪಟತನ ಬಹಿರಂಗಪಡಿಸಿದ್ದಾರೆ ಎಂದು ಕಾಂಗ್ರೆಸ್ ನಾಯಕಿ, ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯೆ ಜ್ಯೋತಿ ಎಂ. ಗೊಂಡಬಾಳ ಕಿಡಿಕಾರಿದ್ದಾರೆ.
ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಅವರು, ನೆಲಮಂಗಲದ ಶ್ರೀಕ್ಷೇತ್ರ ತೈಲೇಶ್ವರ ಗಾಣಿಗರ ಮಹಸಂಸ್ಥಾನ ಮಠದ ಪೂರ್ಣಾನಂದಪೂರಿ ಸ್ವಾಮೀಜಿಗಳು ಉರ್ಫ್ ಬಿಜೆ ಪುಟ್ಟಸ್ವಾಮಿಗೆ ಹಿಂದೆ ಅಂಟಿದ ಖಾದಿ ಕೆಸರು ಹೋಗಿಲ್ಲ, ಅವರು ಈಗಲೂ ಬಿಜೆಪಿ ಅವರ ರೀತಿ ವಿರೋಧ ಪಕ್ಷದಲ್ಲಿ ಕುಳಿತ ಹಾಗೆ ಮಾತನಾಡುತ್ತಿದ್ದಾರೆ.
ಕನ್ನಡ ಮತ್ತು ಸಂಸ್ಕöÈತಿ ಇಲಾಖೆ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗಳ ಸಚಿವರಾದ ಶಿವರಾಜ ತಂಗಡಗಿಯವರ ಮೇಲೆ ಈ ಮಾಜಿ ಸಚಿವ ಹಾಗೂ ಹಾಲಿ ಸನ್ಯಾಸಿ ಬಿ ಜೆ ಪುಟ್ಟಸ್ವಾಮಿ ಮಾಡಿರುವ ಆರೋಪದಲ್ಲಿ ಹುರುಳಿಲ್ಲ. ಅವರು ಹೊರಿಸಿದ ಕಮಿಷನ್ ಆರೋಪ ಒಂದು ವ್ಯಂಗ್ಯ, ತಾವು ಪೀಠ ಸೇರಿದ ಮೇಲೆ ಅವರನ್ನು ಯಾರೂ ಕೇಳುತ್ತಿಲ್ಲ, ಪ್ರಚಾರ ಇಲ್ಲೆಂಬ ಕಾರಣಕ್ಕೆ ಈ ರೀತಿ ಹೇಳಿಕೆ ನೀಡಿದ್ದಾರೆ.
ವಾಸ್ತವವಾಗಿ ಇವರು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಅನುಯಾಯಿ, ಶೆಟ್ಟರ್ ಸಂಪುಟದ ಮಾಜಿ ಸಚಿವ ಪುಟ್ಟಸ್ವಾಮಿ, ಹಾಲಿ ಖಾವಿ ಧರಿಸಿ ಸಮಾಜ ಉದ್ಧಾರ ಮಾಡಲು ಬಂದಿದ್ದಾರೆ. ಆದರೆ ಕೆಲವೇ ವರ್ಷಗಳ ಹಿಂದೆ ಎಲ್ಲ ಅಧಿಕಾರ ಅನುಭವಿಸಿ, ಸುಳ್ಳು ಮತ್ತೊಂದು ಹೇಳಿಕೊಂಡಿದ್ದವರು ದಿಢೀರನೆ ದೊಡ್ಡ ವ್ಯಕ್ತಿ ಆಗಿ ಉದ್ಭವಿಸಲು ಇದು ಸಿನೆಮಾ ಅಲ್ಲ, ವಾಸ್ತವ ಜಗತ್ತು ಎಂಬ ಅರಿವು ಎಲ್ಲರಿಗೂ ಇದೆ.
ಸಚಿವ ತಂಗಡಗಿ ಅವರು ಅಧಿಕಾರವಹಿಸಿಕೊಂಡ ಮೇಲೆ ಎರಡೂ ಇಲಾಖೆಗಳು ಸಾಕಷ್ಟು ಹೆಸರು ಮತ್ತು ಪ್ರಗತಿ ಸಾಧಿಸಿದ್ದು, ಬಡವರಪರ ಕೆಲಸ ಮಾಡುವ ಕಾಂಗ್ರೆಸ್ ಸರಕಾರದ ಮೇಲೆ ಗೂಭೆ ಕೂರಿಸಲು ಬಂದ ಈ ಸ್ವಾಮೀಜಿ ಮೊದಲು ಪೀಠ ತ್ಯಜಿಸಿ, ಯಾರ ಅಪ್ಪಣೆ ಮೇರೆಗೆ ಇಂತಹ ಕಿತಾಪತಿ ಮಾಡಿದ್ದಾರೆ ಎಂದು ಬಹಿರಂಗಪಡಿಸಲಿ. ಇನ್ನು ಸರಕಾರ ಮಠಗಳಿಗೆ ಹಣ ಕೊಡಲೇಬೇಕು ಎಂಬ ಯಾವ ಕಾನೂನು ಸಹ ಇಲ್ಲ. ಇಲ್ಲಿ ಜನೋಪಯೋಗಿ ಕೆಲಸ ಮಾಡುವದು ಮುಖ್ಯ, ಯಾವ ಮಠಮಾನ್ಯಗಳು ನಿಜವಾದ ಸಮುದಾಯ ಸೇವೆ ಮಾಡುತ್ತಿವೆ ಅವರಿಗೆ ಸರಕಾರ ಧನಸಹಾಯ ಮಾಡುತ್ತಿದೆ, ಕೂಡಲೇ ಸ್ವಾಮೀಜಿ ಕ್ಷಮೆ ಕೇಳದಿದ್ದರೆ ದೂರು ನೀಡಬೇಕಾಗುತ್ತದೆ ಎಂದು ಹೇಳಿಕೆ ನೀಡಿದ್ದಾರೆ.