Breaking News

ಸಿಂಗಾಪುರದಲ್ಲಿ ಸರ್ಕಾರ ಬೀಳಿಸುವ ಪಿತೂರಿ ಕೆಲಸ ನಡೆಯುತ್ತಿದೆ: ಡಿ ಕೆ ಶಿವಕುಮಾರ್‌

Conspiracy to topple government in Singapore is at work: DK Shivakumar

ಬೆಂಗಳೂರು, ಜುಲೈ24: ನಮ್ಮ ಸರಕಾರದ ವಿರುದ್ಧ ಕೆಲವರು ಪಿತೂರಿ ನಡೆಸುತ್ತಿರುವ ಬಗ್ಗೆ ನಮಗೂ ಮಾಹಿತಿ ಇದೆ ಎಂದು ಡಿಸಿಎಂ ಡಿ ಕೆ ಶಿವಕುಮಾರ್ ಹೇಳಿದ್ದಾರೆ.
ಈ ಕುರಿತು ಬೆಂಗಳೂರಿನ ಸದಾಶಿವನಗರ ನಿವಾಸದ ಬಳಿ ಮಾಧ್ಯಮಗಳಿಗೆ ಸೋಮವಾರ ಪ್ರತಿಕ್ರಿಯೆ ನೀಡಿದರು. ಸರಕಾರ ಉರುಳಿಸಲು ಕೆಲವರು ಸಿಂಗಾಪುರದಲ್ಲಿ ಪಿತೂರಿ ಯೋಜಿಸಿದ್ದಾರಂತಲ್ಲ ಎಂಬ ಮಾಧ್ಯಮದವರ ಪ್ರಶ್ನೆಗೆ ಅವರು ಪ್ರತಿಕ್ರಿಯಿಸಿ, ಆ ಬಗ್ಗೆ ನನಗೂ ನಮ್ಮದೇ ಆದ ಮೂಲಗಳಿಂದ ಮಾಹಿತಿ ಇದೆ. ಅವರು ಬೆಂಗಳೂರಲ್ಲಿ ಮಾಡದೇ ಅಲ್ಲಿಗೆ ಹೋಗಿ ಮಾಡುವುದು ಅವರ ತಂತ್ರ. ಯಾರು ಏನು ಮಾಡುತ್ತಿದ್ದಾರೆ ಎಂಬುದು ಗೊತ್ತಿದೆ ಎಂದು ಕಿಡಿಕಾರಿದ್ದಾರೆ.

ಜಾಹೀರಾತು
ಜಾಹೀರಾತು

ಇನ್ನೂ ರಾಜರಾಜೇಶ್ವರಿ ಕ್ಷೇತ್ರದ ಶಾಸಕ ಹಾಗೂ ಮಾಜಿ ಸಚಿವ ಮುನಿರತ್ನ ಹನಿಟ್ರ್ಯಾಪ್ ಮಾಡುತ್ತಾರೆ ಎಂಬ ಕುರಿತು ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ನಿನ್ನೆ ವೇಲು ನಾಯ್ಕರ್ ಏನೇನು‌ ಮಾತನಾಡಿದ್ದಾರೋ‌ ಗೊತ್ತಿಲ್ಲ. ಅವರಿಗೆ ಯಾವ ಮಾಹಿತಿ ಇದೆಯೋ, ನಾನು ಸಭೆಗೆ ತಡವಾಗಿ‌ ಹೋಗಿದ್ದೆ ಎಂದು ಹೇಳಿದರು.
ಫೆರಿಫೆರಲ್ ರಿಂಗ್ ರಸ್ತೆ ಭೂ ಸ್ವಾಧೀನ ವಿಚಾರವಾಗಿ ಆ ಭಾಗದ ಕೆಲ ರೈತರು ಇಂದು ನನ್ನನ್ನು ಭೇಟಿ ಮಾಡಿದ್ದಾರೆ. ಇದೇ ತಿಂಗಳು 31 ರಂದು ಆ ರೈತರ ಜೊತೆ ಸಭೆ ಮಾಡುವುದಾಗಿ ತಿಳಿಸಿದ್ದೇನೆ ಎಂದರು.

About Mallikarjun

Check Also

ಪರವಾಗಿಅಮಾನತ್ತಾದರೂವ್ಯಾಪಾರಮುಂದುವರಿಸಿದ ಅಪೋಲೋ ಫ಼ಾರ್ಮಸಿ.

Apollo Pharmacy continued to trade despite being suspended. ಗಂಗಾವತಿ: ನಗರದಲ್ಲಿ ನಡೆಯುತ್ತಿದ್ದ ಡ್ರಗ್ ಮಾಫ಼ೀಯಾ ಬಗ್ಗೆ ಹಲವು …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.