Laborer dies due to electrocution

ಕೊಪ್ಪಳ : ಕುಕನೂರು ತಾಲೂಕಿನ ಶಿರೂರು ಗ್ರಾಮದ ಉಮೇಶ ಕಪಾಲಿ ಇವರ ಮನೆ ಕಟ್ಟಡ ಕಾಮಗಾರಿಗೆ ದಿ.21ರಂದು ಬೆಳಗ್ಗೆ 11 ಗಂಟೆಗೆ ಕೂಲಿ ಕೆಲಸಕ್ಕೆ ತೆರಳಿದ್ದ ಲಕ್ಷ್ಮಣ (28) ರಾಮಪ್ಪ ಪೂಜಾರ ಎನ್ನುವ ಯುವಕನಿಗೆ ವಿದ್ಯುತ್ ತಗಲಿ ಸಾವನ್ನಪ್ಪಿದ ಘಟನೆ ಜರುಗಿದೆ.
ಘಟನೆ ವಿವರ : ಎಂದಿನಂತೆ ಶಿರೂರು ಗ್ರಾಮದ ಉಮೇಶ ಕಪಾಲಿ ಇವರ ಮನೆ ಕಟ್ಟಡ ಕಾಮಗಾರಿಯ ಆರ್.ಸಿ.ಸಿ ಹಾಕುವ ಸಂದರ್ಭದಲ್ಲಿ ವಿದ್ಯುತ್ ತಗಲಿದ್ದು ಆತನನ್ನು ಚಿಕಿತ್ಸೆಗಾಗಿ ಕುಕನೂರು ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗುವ ಮಾರ್ಗ ಮಧ್ಯೆ 11.30ಕ್ಕೆ ಮೃತಪಟ್ಟಿದ್ದು ಸರಕಾರಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.
ಸಹೋದರ ಈರಣ್ಣ ರಾಮಪ್ಪ ಪೂಜಾರ ದೂರಿನನ್ವಯ ಪ್ರಕರಣ ದಾಖಲು.
ಪ್ರಕರಣ ಕುರಿತಂತೆ ಮೃತನ ಸಹೋದರ ನೀಡಿದ ದೂರು : ಶಿರೂರ ಗ್ರಾಮದ ಉಮೇಶ ಕಪಾಲಿಯವರ ಮನೆಯ ಕಟ್ಟಡ ಕಾಮಗಾರಿಯನ್ನು ಕುಕನೂರು ಪಟ್ಟಣದ ಪ್ರಕಾಶ ಕಲಾಲ್ ಹಾಗೂ ಬೆದವಟ್ಟಿ ಗ್ರಾಮದ ಈರಪ್ಪ ಹುಲ್ಲೂರ ಇವರು ಮಾಡುತ್ತಿದ್ದು ಮನೆ ಕಟ್ಟಡ ಕಾಮಗಾರಿಯ ಕೂಲಿ ಕೆಲಸಗಾರರ ಸುರಕ್ಷತೆಗೆ ಯಾವುದೇ ಮುಂಜಾಗ್ರತೆ ಕ್ರಮಗಳನ್ನು ತೆಗೆದುಕೊಳ್ಳದೇ ನಿರ್ಲಕ್ಷ್ಯ ವಹಿಸಿದ್ದರಿಂದ ಈ ಅವಘಡ ಸಂಭವಿಸಿದ್ದು ಆತನ ಸಾವಿಗೆ ಉಮೇಶ ದುರಗಪ್ಪ ಕಪಾಲಿ, ಪ್ರಕಾಶ ಕಲಾಲ್, ಈರಪ್ಪ ನಾಗಪ್ಪ ಈಳಗೇರ ಈ ಮೂವರ ವಿರುದ್ದ ದೂರು ನೀಡಲಾಗಿದೆ.
ಕುಕನೂರು ಠಾಣೆಯಲ್ಲಿ ದೂರು ದಾಖಲು : ಕುಕನೂರು ಠಾಣಾ ಗುನ್ನೆ ನಂ, 117/2024, ಕಲಂ 106 ಆರ್/ಡಬ್ಲೂ 3(5)ಬಿಎನ್ಎಸ್ -2023 ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.