Breaking News

ಜು. 16 ರಂದು ಉಚಿತ ಕೃತಕ ಅಂಗಾಂಗ ಜೋಡಣಾ ಶಿಬಿರ

Ju. Free Prosthesis Camp on 16th

ಬೆಂಗಳೂರು; ನಾರಾಯಣ್‌ ಸೇವಾ ಸಂಸ್ಥಾನ್‌ ಸೇವಾ ಸಂಸ್ಥೆ ಯಿಂದ ಜುಲೈ 16 ರಂದು ಬೆಂಗಳೂರಿನಲ್ಲಿ ದಿವ್ಯಾಂಗರಿಗೆ ಹೊಂದಿಕೆಯಾಗುವಂತೆ ಅಂಗಾಂಗ ಜೋಡಣೆಗಾಗಿ ಅಂಗಾಂಗ ಮಾಪನ ಶಿಬಿರ ಆಯೋಜಿಸಲಾಗಿದೆ. ವಿಶೇಷವಾಗಿ ಕರ್ನಾಟಕದ ಜನರಿಗಾಗಿ ಈ ಬೃಹತ್‌ ಶಿಬಿರ ಏರ್ಪಡಿಸಿದ್ದು, ಇದನ್ನು ಸದುಪಯೋಗಪಡಿಸಿಕೊಳ್ಳುವಂತೆ ಕೋರಿದೆ.

ಜಾಹೀರಾತು

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಉದಯ್‌ ಪುರನ ಪ್ರತಿಷ್ಠಿತ ರಾಷ್ಟ್ರೀಯ ಮಟ್ಟದ ಸ್ವಯಂ ಸೇವಾ ಸಂಸ್ಥೆ ನಾರಾಯಣ್‌ ಸೇವಾ ಸಂಸ್ಥಾನದ ಸಾರ್ವಜನಿಕ ಸಂಪರ್ಕಾಧಿಕಾರಿ ಭಗವಾನ್‌ ಪ್ರಸಾದ್‌ ಗೌರ್‌, ಪರಿಶಿಷ್ಟ ಪಂಗಡಗಳ ಕಲ್ಯಾಣ, ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ಬಿ. ನಾಗೇಂದ್ರ, ಅದಮ್ಯ ಚೇತನ ಸಂಸ್ಥೆಯ ಮುಖ್ಯಸ್ಥೆ ತೇಜಸ್ವಿನಿ ಅನಂತ್ ಕುಮಾರ್, ಆಚಾರ್ಯ ವಿಮಲ್ ಸಾಗರ್ ಮಹಾರಾಜ್ ಅವರು ಶಿಬಿರದಲ್ಲಿ ಭಾಗವಹಿಸಲಿದ್ದಾರೆ. ಅರ್ಹ ಫಲಾನುಭವಿಗಳಿಗೆ ಹೊಂದಿಕೆಯಾಗುವಂತೆ ಕೃತಕ ಅಂಗಾಂಗಗಳ ಅಳತೆ ತೆಗೆದುಕೊಂಡು ನಂತರ ಸಿದ್ಧಪಡಿಸಿ ಇನ್ನೊಂದು ತಿಂಗಳಲ್ಲಿ ನಡೆಯಲಿರುವ ಬೃಹತ್‌ ಶಿಬಿರದಲ್ಲಿ ಅಳವಡಿಸಲಾಗುವುದು ಎಂದರು.

ಕಳೆದ 38 ವರ್ಷಗಳಿಂದ ಅಪಘಾತ ಮತ್ತಿತರ ಅವಘಡಗಳಲ್ಲಿ ಅಂಗಾಂಗ ಕಳೆದುಕೊಂಡವರಿಗೆ ಕೃತಕ ಅಂಗಾಂಗ ಜೋಡಣೆ ಮಾಡುತ್ತಿದ್ದು, ಬೆಂಗಳೂರಿನ ವಿವಿಪುರದಲ್ಲಿರುವ ಅರಸೋಜಿ ರಾವ್‌ ಕಲ್ಯಾಣ ಮಂಟಪದಲ್ಲಿ ಬೆಳಿಗ್ಗೆ 9 ಗಂಟೆಯಿಂದ ಸಂಜೆ 5 ಗಂಟೆವರೆಗೆ ವಿಶೇಷ ಚೇತನರಿಗೆ ಪರಿಣಿತ ವೈದ್ಯರು ಅಳವಡಿಕೆಮಾಡಲಿರುವ ಅಂಗಾಂಗಗಳ ಅಳತೆ ತೆಗೆದುಕೊಳ್ಳಲಿದ್ದಾರೆ. ಇದು ನಾರಾಯಣ್‌ ಸೇವಾ ಸಂಸ್ಥಾನ್‌ ನ 988 ನೇ ಶಿಬಿರವಾಗಿದ್ದು, ಶೀಘ್ರದಲ್ಲೇ ಈ ಸಂಖ್ಯೆ ಸಾವಿರದ ಗಡಿ ದಾಟಲಿದೆ ಎಂದರು.

ನಾರಾಯಣ್‌ ಸೇವಾ ಸಂಸ್ಥಾನ್‌ ನ ವಕ್ತಾರ ರಜತ್‌ ಗೌರ್‌ ಮಾತನಾಡಿ, ಸಂಸ್ಥೆಯ ಅನುಭವಿ ಮೂಳೆ ತಜ್ಞರು, ಪ್ರಾಸ್ತೆಟಿಕ್ ವೈದ್ಯರ ತಂಡದಿಂದ ವಿಕಲಚೇತನರಿಗಾಗಿ ಆರೈಕೆ ಜೊತೆಗೆ ಅಂಗಾಂಗ ಅಳವಡಿಸಲು ನೆರವು ನೀಡಲಾಗುವುದು. ರೋಗಿಗಳು ತಮ್ಮ ಅಗತ್ಯತೆಗಳಿಗೆ ಅನುಗುಣವಾಗಿ ಉತ್ತಮ ಗುಣಮಟ್ಟದ ಹಗುರ ಮತ್ತು ದೀರ್ಘಕಾಲ ಬಾಳಿಕೆ ಬರುವ ಕೃತಕ ಅಂಗಾಂಗಳನ್ನು ತಯಾರಿಸಿ ಅಳವಡಿಸಲಾಗುವುದು ಎಂದರು.

ಶಿಬಿರದ ಸಮನ್ವಯಕಾರ ರೋಹಿತ್‌ ತಿವಾರಿ ಮಾತನಾಡಿ, ಫಲಾನುಭವಿಗಳು ಶಿಬಿರಕ್ಕೆ ಆಧಾರ್‌ ಕಾರ್ಡ್‌, ವಿಕಲಚೇತನ ಇಲಾಖೆ ನೀಡಿರುವ ಪ್ರಮಾಣ ಪತ್ರ, ತಮ್ಮ ಅಂಗಾಂಗ ನ್ಯೂನತೆ ಪ್ರತಿಬಿಂಬಿಸುವ ಎರಡು ಭಾವಚಿತ್ರ ತರಬೇಕು. ಶಿಬಿರದಲ್ಲಿ ಉಚಿತ ಊಟೋಪಚಾರದ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದರು.

About Mallikarjun

Check Also

ಜೆಜೆಎಂ ಕಾಮಗಾರಿ ಅವೈಜ್ಞಾನಿಕ :ಮಳೆ ನೀರು ಗ್ರಾಮದೊಳಕ್ಕೆ ಸಾರ್ವಜನಿಕರಆಕ್ರೋಶ

JJM’s work is unscientific: Public outrage over rain water in the village ವರದಿ : ಪಂಚಯ್ಯ …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.