Breaking News

ಮಣಿಪುರ ಹಿಂಸಾಚಾರ ಹಿನ್ನೆಲೆಯಲ್ಲಿ ಅಲ್ಲಿಯ ಸರಕಾರವನ್ನು ವಜಾ ಮಾಡಲು ಒತ್ತಾಯಿಸಿ ಮನವಿ







ಕೊಪ್ಪಳ: ದೇಶದಲ್ಲಿ ನಡೆಯುತ್ತಿರುವ ಕೆಲವು ಘಟನೆಗಳು ಗಾಬರಿ ಹುಟ್ಟುಸುತ್ತಿವೆ. ನಾವು ನಾಗರಿಕರೇ ಎಂದು ಪ್ರಶ್ನೆ ಮಾಡುವಂತಿವೆ, ಸಹಿಷ್ಣು ಭಾವಕ್ಕೆ ಧಕ್ಕೆಯಾದಂತಾಗಿದೆ.
ಮಣಿಪುರದಲ್ಲಿ ಕುಕಿ ಮತ್ತು ಮೈತೇಯಿ ಎಂಬ ಬುಡಕಟ್ಟು ಜನಾಂಗದವರಿದ್ದು ಅವರಿಬ್ಬರ ಮೀಸಲಾತಿ ಹಿನ್ನೆಲೆಯಲ್ಲಿ ಘರ್ಷಣೆ ಪ್ರಾರಂಭವಾಗಿ ಈಗ ತೀವ್ರ ಹಂತಕ್ಕೆ ಮುಟ್ಟಿದೆ. ಅಲ್ಲಿಯ ರಾಜ್ಯ ಸರಕಾರವಾಗಲಿ ಕೇಂದ್ರ ಸರಕಾರವಾಗಲಿ ಕ್ರಮಗಳನ್ನು ಕೈಕೊಳ್ಳುತ್ತಿಲ್ಲ. ಘರ್ಷಣೆಯಲ್ಲಿ ಅನೇಕರು ಸತ್ತಿದ್ದಾರೆ ಬಹಳಷ್ಟು ಸ್ವತ್ತು ಹಾಳಾಗಿದೆ.
ಮಾನವ ಮಾನವರಲ್ಲಿ ಸಹಜವಾಗಿರಬೇಕಾಗಿದ್ದ ಗೌರವಕ್ಕೆ ದಕ್ಕೆಯಾದಂತಾಗಿದೆ. ಕುಕಿ ಬುಡಕಟ್ಟಿನ ಹೆಣ್ಣು ಮಕ್ಕಳನ್ನು ಬೆತ್ತಲೆ ಮೆರವಣಿಗೆ ನಡೆದಿರುವುದು ದೇಶವೇ ತಲೆ ತಗ್ಗಿಸುವ ಸ್ಥಿತಿ ಉಂಟಾಗಿದೆ. ಪ್ರಧಾನ ಮಂತ್ರಿಯವರನ್ನು ಈ ಬಗ್ಗೆ ಕ್ರಮ ಕೈ ಕೊಳ್ಳಲು ವಿರೋಧ ಪಕ್ಷಗಳು ವಿನಂತಿಸಿದರು ಅವರು ಕ್ರಮ ಕೈಗೊಳ್ಳುತ್ತಿಲ್ಲ ಆದ್ದರಿಂದ ತಾವು ಈ ವಿಷಯವನ್ನು ಪರಿಶೀಲಿಸಿ ಮಣಿಪುರ ಸರಕಾರವನ್ನು ವಜಾಗೊಳಿಸಬೇಕಾಗಿ ವಿನಂತಿಸುತ್ತೇವೆ. ಮಹಿಳೆಯರ ಬೆತ್ತಲೆ ಮೆರವಣಿಗೆ ಮಾಡಿದವರಿಗೆ ಸೂಕ್ತ ಶಿಕ್ಷೆಯಾಗುವಂತೆ ಕ್ರಮಕೈಕೊಳ್ಳಬೇಕೆಂದು ಒತ್ತಾಯಿಸಿ ಇಂದು ಜಿಲ್ಲಾಧಿಕಾರಿ ಗಳಿಗೆ ಮನವಿ ಸಲ್ಲಿಸಿದರು.

ಜಾಹೀರಾತು
                                    


About Mallikarjun

Check Also

ಎಲ್ಲಾ ಸಾಹಿತ್ಯ ಪ್ರಕಾರಗಳಿಗಿಂತ ಮೂಲ ಜಾನಪದ ಸಾಹಿತ್ಯಕ್ಕೆ ಶ್ರೇಷ್ಠತೆ ಹೆಚ್ಚು ! ಸಿ.ವಿ.ಜಡಿಯವರ ಅಭಿಪ್ರಾಯ

Original folk literature is superior to all other literary genres! C.V.Jadi's opinion ಕೊಪ್ಪಳ: ಎಲ್ಲಾ ಬಗೆಯ …

Leave a Reply

Your email address will not be published. Required fields are marked *