Environmental protection is everyone’s responsibility – NA Chowdhury, Editor of New Age Herald

ಬೆಂಗಳೂರು; ಎಚ್.ಎ.ಎಲ್ ನ ಕೂಡ್ಲು ಗೇಟ್ ಬಳಿ ಇರುವ ಎಇಸಿಎಸ್ ಬಡಾವಣೆಯಲ್ಲಿ ಆರ್.ಡಬ್ಲ್ಯುಎ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದಿಂದ ಶಾಲಾ ಮಕ್ಕಳ ಜೊತೆಗೂಡಿ ಗಿಡನೆಡುವ ಕಾರ್ಯಕ್ರಮ ನ್ಯೂ ಏಜ್ ಹೆರಾಲ್ಡ್ ಪತ್ರಿಕೆ ಸಂಪಾದಕ ಎನ್.ಎ ಚೌಧರಿ ಚಾಲನೆ ನೀಡಿದರು.
ಸರ್ಕಾರಿ ಶಾಲಾ ಮಕ್ಕಳಲ್ಲಿ ಮುಂಗಾರು ಹಂಗಾಮಿನಲ್ಲಿ ಗಿಡನೆಟ್ಟು ಪರಿಸರ ಸಂರಕ್ಷಣೆ ಮಾಡುವ ಉದ್ದೇಶದಿಂದ ಪರಿಸರ ಜಾಗೃತಿ ಮೂಡಿಸಲಾಯಿತು. ಪ್ರತಿಯೊಂದು ಗಿಡ ಹತ್ತಾರು ಪಕ್ಷಿಗಳು, ಅಸಂಖ್ಯಾತ ಜೀವ ಸಂಕುಲಗಳಿಗೆ ಆಸರೆಯಾಗಲಿದೆ. ಹೀಗಾಗಿ ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಹೊಣೆ ಎಂದು ಸಂಘದ ಪದಾಧಿಕಾರಿಗಳು ಜಾಗೃತಿ ಮೂಡಿಸಿದರು.
ಅರಣ್ಯ ಇಲಾಖೆ ಗಿಡನೆಡುವ ಕಾರ್ಯಕ್ರಮಕ್ಕೆ ನೆರವು ನೀಡಿತು. ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ರೇವಣ್ಣ, ಕಾರ್ಯದರ್ಶಿ ನಾಗರಾಜ್, ಮುಖಂಡರಾದ ಲೋಕೇಶ್ ಮತ್ತಿತರರ ನೇತೃತ್ವದಲ್ಲಿ ನೂರಾರು ಗಿಡಗಳನ್ನು ಯಶಸ್ವಿಯಾಗಿ ನೆಡಲಾಯಿತು.