Businessman Ponnachi Rangaswamy appeals to the Minister to give suitable status to former MLA R Narendra

ವರದಿ : ಬಂಗಾರಪ್ಪ .ಸಿ .
ಹನೂರು : ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವು ಅಧಿಕಾರಕ್ಕೆ ಬಂದು ಸುಮಾರು ಎರಡು ವರ್ಷಗಳೆ ಕಳೆದಿದೆ ನಮ್ಮ ನಾಯಕರಾದ ಆರ್ ನರೇಂದ್ರರವರಿಗೆ ನಮ್ಮದೆ ಸರ್ಕಾರವಿದ್ದರು ಯಾವುದೇ ಸ್ಥಾನಮಾನ ನೀಡದಿರುವುದರಿಂದ ಕಾರ್ಯಕರ್ತರಿಗೆ ಹಾಗೂ ಪಕ್ಷ ಸಂಘಟನೆ ದೃಷ್ಟಿಯಿಂದ ನಮ್ಮ ನಾಯಕರಿಗೆ ಸೂಕ್ತವಾದ ಸ್ಥಾನಮಾನ ನೀಡಲೇಬೇಕೆಂದು ಸಚಿವರಾದ ಹೆಚ್ ಸಿ ಮಹದೇವಪ್ಪರವರಲ್ಲಿ ಉದ್ಯಮಿ ಪೊನ್ನಾಚಿ ರಂಗಸ್ವಾಮಿ ಮನವಿ ಮಾಡಿದ್ದರು.
ಮೈಸೂರಿನ ಲೋಕೋಪಯೋಗಿ ಇಲಾಖೆಯಲ್ಲಿನ ಅಥಿತಿ ಗೃಹದಲ್ಲಿ ಸಚಿವರನ್ನು ಕಾರ್ಯಕರ್ತರ ಜೊತೆಯಲ್ಲಿ ಬೇಟಿಯಾಗಿ ಮಾತನಾಡಿದ ಅವರು ಕಳೆದ ಸಲ ನಡೆದ ಲೋಕಸಭಾ ಚುನಾವಣೆಯಲ್ಲಿ ನಮ್ಮ ಹನೂರು ಕ್ಷೇತ್ರದದಿಂದ ಬಾರಿ ಬಹುಮತದಿಂದ ತಮ್ಮ ಸುಪುತ್ರರಾದ ಸುನೀಲ್ ಬೋಸ್ ರವರನ್ನು ಆಯ್ಕೆ ಮಾಡಲಾಗಿದೆ ,ಕಳೆದ ಕೆಲವು ವರ್ಷಗಳಿಂದ ನರೇಂದ್ರರವರು ಶಾಸಕರಾಗಿದ್ದ ಅವದಿಯಲ್ಲಿ ನಮ್ಮ ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಹೆಚ್ಚಾಗಿ ಮಾಡಿದ್ದರು ,ನಮ್ಮಲ್ಲಿ ಹೆಚ್ಚು ಕಾಡಂಚಿನ ಪ್ರದೇಶಗಳಿವೆ ,ಕುಗ್ರಾಮಗಳಿವೆ ಅಭಿವೃದ್ದಿ ಮಾಡಲು ನಮ್ಮ ನಾಯಕರಿಗೆ ಒಂದು ಅವಕಾಶವನ್ನು ವರೀಷ್ಟರಲ್ಲಿ ಚರ್ಚಿಸಿ ಸೂಕ್ತ ಸ್ಥಾನಮಾನವನ್ನು ನೀಡಬೇಕೆಂದು ಒತ್ತಾಯಿಸಿದರು.
ಇದೇ ಸಂದರ್ಭದಲ್ಲಿ ಹನೂರು ಹಾಗೂ ಕೊಳ್ಳೆಗಾಲ ವಿದಾನಸಭಾ ಕ್ಷೇತ್ರದ ಮುಖಂಡರು ಕಾರ್ಯಕರ್ತರು ಹಾಜರಿದ್ದರು.