Breaking News

ಮಾದಪ್ಪನ ಭಕ್ತರಿಗೆ ಅರಣ್ಯ ಇಲಾಖೆಯವರು ತೊಂದರೆ ಕೊಟ್ಟರೆ ಸಹಿಸಲ್ಲ ಮಾಜಿ ಶಾಸಕ ಆರ್ ನರೇಂದ್ರ

Former MLA R Narendra will not tolerate if the forest department disturbs the devotees of Madappa.


ವರದಿ : ಬಂಗಾರಪ್ಪ ಸಿ
ಹನೂರು : ಪ್ರಸಿದ್ಧ ಯಾತ್ರ ಸ್ಥಳವಾದ ಶ್ರೀ ಮಲೆ ಮಹದೇಶ್ವರ ಕ್ಷೇತ್ರದಲ್ಲಿ ತಲಾತಲಾಂತರಗಳಿಂದ ಮಾದಪ್ಪನ ಭಕ್ತರು ಆಗಮಿಸುತ್ತಿದ್ದು ಅರಣ್ಯ ಇಲಾಖೆಯ ಅಧಿಕಾರಿಗಳು ಇತ್ತೀಚಿನ ದಿನಗಳಲ್ಲಿ ನಾಗಮಲೆಗೆ ಹೊಗಲು ಚಾರಣಹೋಗಲು ನಿರ್ಭಂದಿಸಿರುವುದು ನೋವಿನ ಸಂಗಾತಿಯಾಗಿದೆ ಎಂದು ಮಾಜಿ ಶಾಸಕ ಆರ್ ನರೇಂದ್ರ ತಿಳಿಸಿದರು.
ಹನೂರು ಪಟ್ಟಣದ ಕಾಂಗ್ರೆಸ್ ಪಕ್ಷದ ಕಛೇರಿಯಲ್ಲಿ ಮಾತನಾಡಿದ ಅವರು ಹಲವಾರು ವರ್ಷಗಳಿಂದ ಹೋರ ರಾಜ್ಯಗಳಿಂದ ಮಾತ್ರವಲ್ಲದೆ ನಮ್ಮ ರಾಜ್ಯದಿಂದಲು ಸಹ ಮಂಡ್ಯ, ಮೈಸೂರು, ಚಾಮರಾಜನಗರ, ಕನಕಪುರ ರಾಮನಗರ ಸೇರಿದಂತೆ ತಮಿಳುನಾಡಿನಿಂದ ಸಾವಿರಾರು ಭಕ್ತರು ನಾಗಮಲೆ ಕ್ಷೇತ್ರಕ್ಕೆ ಭೇಟಿ ನೀಡಿ ತಮ್ಮ ಇಷ್ಟಾರ್ಥ ಸಿದ್ದಿಗಾಗಿ ಹರಕೆ ಸಲ್ಲಿಸುತ್ತಿದ್ದಾರೆ ಆದರೆ ಅರಣ್ಯ ಇಲಾಖೆಯವರು ಕೆಲವು ದಿನಗಳಿಂದ ಚಾರಣವನ್ನು ನಿಲ್ಲಿಸಿ ಧಾರ್ಮಿಕ ಭಾವನೆಗೆ ದಕ್ಕೆ ತಂದಿದ್ದಾರೆ ಈ ಕೂಡಲೆ ಅಧಿಕಾರಿಗಳು ಭಕ್ತರಿಗೆ ನಾಗಮಲೆಗೆ ಹೋಗಲು ಅವಕಾಶ ಮಾಡಿಕೊಡಬೇಕು, ಮಲೆ ಮಾದೇಶ್ವರ ಬೆಟ್ಟ ಕಾಡಂಚಿನ ಐದು ಗ್ರಾಮಗಳ ಜನರು ಸಣ್ಣಪುಟ್ಟ ಅಂಗಡಿಗಳನ್ನು ತೆರೆದು ನಾಗಮಲೆ ಕ್ಷೇತ್ರಕ್ಕೆ ಹೋಗುವವರನ್ನೇ ನಂಬಿಕೊಂಡು ತಮ್ಮ ಜೀವನ ನಡೆಸುತ್ತಿದ್ದಾರೆ. ಸರ್ಕಾರ ಚಾರಣ ಹೋಗುವವರಿಗೆ ನಿರ್ಬಂಧವಿದ್ದರೆ ಅದರ ಬಗ್ಗೆ ನಮ್ಮ ಯಾವುದೇ ಅಭ್ಯಂತರವಿಲ್ಲ, ನಿಮ್ಮ ಕಾನೂನನ್ನು ಪಾಲನೆ ಮಾಡಿ ಸರ್ಕಾರದ ನಿಯಮದಂತೆ ಚಾರಣ ಹೋಗುವವರೆಗೂ ಆನ್ಲೈನ್ನಲ್ಲಿ ಬುಕ್ ಮಾಡಿಕೊಂಡು ಅವಕಾಶ ನೀಡುವುದಾಗಿ ತಿಳಿದು ಬಂದಿದೆ ಅವರಿಗೂ ಸಹ ಅವಕಾಶ ಮಾಡಿಕೊಡಿ ಎಂದರು. ಇದನ್ನು ಹೊರತುಪಡಿಸಿ ದರ್ಶನಕ್ಕೆ ಹೋಗುವವರಿಗೆ ಯಾವುದೇ ತೊಂದರೆ ಕೊಡಬಾರದು . ಮಲೆ ಮಾದೇಶ್ವರ ಬೆಟ್ಟದಿಂದ ನಾಗಮಲೆ ಕ್ಷೇತ್ರಕ್ಕೆ ತೆರಳುವ ಭಕ್ತಾದಿಗಳನ್ನು ಜೀಪ್ ನಲ್ಲಿ ಕರೆದುಕೊಂಡು ಹೋಗಲಾಗುತ್ತಿತ್ತು . ಇದೀಗ ಜೀಪ್ ಗಳನ್ನು ಸಹ ನಿಷೇಧ ಮಾಡಲಾಗಿದೆ ಇದರಿಂದ ವಾಹನ ಚಾಲಕರ ಮಕ್ಕಳು ಬೀದಿಗೆ ಬರುವಂತೆ ಮಾಡಲಾಗಿದೆ ಇಂತಹ ನಿರ್ದಾರವನ್ನು ಕೂಡಲೆ ವಾಪಸು ಪಡೆಯಬೇಕು .ಅಧಿಕಾರಿಗಳು
ವಾಹನಗಳ ಸಮರ್ಪಕ ದಾಖಲಾತಿ ಇರುವವರಿಗೆ ಅವಕಾಶ ಮಾಡಿಕೊಡಬೇಕು.
ಈ ಸಂಬಂಧ ಕೂಡಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಅರಣ್ಯ ಸಚಿವರಾದ ಈಶ್ವರ್ ಖಂಡ್ರೆ ರವರ ಜೊತೆ ಮಾತುಕತೆ ನಡೆಸಿ ಸಮಸ್ಯೆ ಬಗೆಹರಿಸಲು ಕ್ರಮ ವಹಿಸುತ್ತೇನೆ ಅಲ್ಲಿಯವರೆಗೂ ಭಕ್ತಾದಿಗಳಿಗೆ ಹಾಗೂ ವಾಹನ ಚಾಲಕರಿಗೆ ಯಾವುದೇ ತೊಂದರೆ ಕೊಡಬಾರದೆಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಪಟ್ಟಣ ಪಂಚಾಯಿತಿ ಸದಸ್ಯರುಗಳಾದ ಗಿರೀಶ್, ಹರೀಶ್ . ಸೇರಿದಂತೆ ಇನ್ನಿತರರು ಹಾಜರಿದ್ದರು

About Mallikarjun

Check Also

ಜನ ವಿರೋಧಿ ಬಿಜೆಪಿ, ಕಾಂಗ್ರೆಸ್ ಪಕ್ಷಗಳನ್ನು ತಿರಸ್ಕರಿಸಿ

ಬಹುಜನ ಸಮಾಜ ಪಾರ್ಟಿಗೆ ಬೆಂಬಲಿಸಿ: ಶಂಕರ್ ಸಿದ್ದಾಪುರ ಗಂಗಾವತಿ. ಏ.26: ಬಹುಜನ ಸಮಾಜ ಪಾರ್ಟಿಯ ಕೊಪ್ಪಳ ಲೋಕಸಭಾ ನಿಯೋಜಿತ ಅಭ್ಯರ್ಥಿ …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.