Breaking News

ಶಾಲೆಗೆ ಮೂಲಭೂತ ಸೌಲಭ್ಯಕ್ಕೆ ಮನವಿ

Request for basic facility for schoo

ನವಲಿ : ಇಲ್ಲಿನ ಸರಕಾರಿ ಮಾದರಿಯ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 77ನೇ ಸ್ವಾತಂತ್ರ್ಯದಿನಾಚರಣೆ ಆಚರಿಸಲಾಯಿತು ನಂತರ ವೇದಿಕೆಯ ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕ ನುಡಿಗಳನ್ನಾಡಿದ ಶಾಲೆಯ ಮುಖ್ಯೋಪಧ್ಯಾಯರಾದ ಪ್ರಶಾಂತ ಬಂಕಾಪೂರರವರು ನಮ್ಮ ಶಾಲೆಯಲ್ಲಿ ಸುಮಾರು 450ಕ್ಕೂ ಹೆಚ್ಚು ಮಕ್ಕಳು ಅಭ್ಯಾಸ ಮಾಡುತಿದ್ದು ಮಕ್ಕಳ ಬಳಕೆಗೆ ನೀರಿನ ವ್ಯವಸ್ಥೆಯನ್ನ ಮತ್ತು ಮಕ್ಕಳ ಕಲಿಕೆಗೆ ಪೂರಕವಾದ ಸೌಲಭ್ಯ ಸಹಕಾರವನ್ನು ನೀಡಬೇಕೆಂದು ವೇದಿಕೆಯ ಮೇಲಿರುವ ಮಹನೀಯರಲ್ಲಿ ಮನವಿ ಮಾಡಿದರು. ನಂತರ ಮಾತನಾಡಿದ ಗ್ರಾಮ ಪಂಚಾಯಿತಿಯ ಉಪಾಧ್ಯಕ್ಷ ನಾಗರಾಜ ತಳವಾರ ಇದು ನಮ್ಮೂರ ಶಾಲೆ ಇಲ್ಲಿರುವ ಮಕ್ಕಳ ಶಿಕ್ಷಣದ ಅಭಿವೃದ್ದಿಗೆ ನಮ್ಮ ಗ್ರಾಮ ಪಂಚಾಯತವತಿಯಿಂದ ನಾವು ಸಹಕಾರ ನೀಡಲು ಸಿದ್ದರಿದ್ದೇವೆ ಎಂದರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಸುಧಾರಣ ಸಮಿತಿ ಅಧ್ಯಕ್ಷರಾದ ರಾಮಣ್ಣ ಗಾಳಿ ವಹಿಸಿಕೊಂಡಿದ್ದು 2ನೇ ಅವಧಿಗೆ ನವಲಿ ಗ್ರಾಮ ಪಂಚಾಯತ ಅಧ್ಯಕ್ಷರಾಗಿ ಆಯ್ಕೆಯಾದ ಶ್ರೀಮತಿ ಮಹಾದೇವಮ್ಮ ಹಾಗೂ ಉಪಾಧ್ಯಕ್ಷರಾದ ನಾಗರಾಜ ತಳವಾರ ಮತ್ತು ರಂಗ ಭೂಮಿ ಹವ್ಯಾಸಿ ಕಲಾವಿದರಾದ ಪ್ಯಾಟೇಪ್ಪ ನಾಯಕ ಹಾಗೂ ಕುಮಾರಿ ಪ್ರಿಯಾಂಕ ಇವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಪಿಡಿಓ ಸುರೇಶ, ಗ್ರಾಮ ಪಂಚಾಯತ ಸದಸ್ಯರು, ಶಾಲಾ ಸುಧಾರಣ ಸಮಿತಿ ಸದಸ್ಯರು, ಗಣ್ಯಮಾನ್ಯರು ಮತ್ತು ಶಾಲಾ ಶಿಕ್ಷಕರು ಸಿಬ್ಬಂದಿಗಳು ಉಪಸ್ಥೀತರಿದ್ದರು.

About Mallikarjun

Check Also

ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಮನೆಗೆ ಬೆಂಕಿ. ಅಪಾರ ಪ್ರಮಾಣದಲ್ಲಿ ನಷ್ಟ.

ತಿಪಟೂರು ತಾಲ್ಲೂಕಿನ ಕಿಬ್ಬನಹಳ್ಳಿ ಹೋಬಳಿ ಕುಪ್ಪಾಳು ಗ್ರಾಮ ಪಂಚಾಯತಿ ವ್ಯಾಪ್ತಿಯ ಕೊಟ್ಟಿಗೆಹಳ್ಳಿ ಗ್ರಾಮದ ದಲಿತ ಸಮುದಾಯದ ಕೆಂಪರಾಮಯ್ಯ ಸನ್ ಆಫ್ …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.