For students Talent to encourage Award: Rajasekhara Gowda Aadura
ಕೊಪ್ಪಳ: ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ
ಅನುಕೂಲವಾಗಲಿ ಎಂಬ ಸದುದ್ದೇಶದಿಂದ ಅವರನ್ನು
ಪ್ರೋತ್ಸಾಹಿಸಲು ಬ್ಯಾಂಕಿನ ಸದಸ್ಯರ ಮಕ್ಕಳಿಗೆ
ಪ್ರತಿಭಾ ಪುರಸ್ಕಾರ ಹಮ್ಮೀಕೊಳ್ಳಲಾಗಿದೆ ಎಂದು
ಶ್ರೀಗವಿಸಿದ್ದೇಶ್ವರ ಅರ್ಬನ್ ಬ್ಯಾಂಕಿನ ಅಧ್ಯಕ್ಷ
ರಾಜಶೇಖರಗೌಡ ಎಂ.ಆಡೂರ ಹೇಳಿದರು.
ಅವರು ಶ್ರೀಗವಿಸಿದ್ದೇಶ್ವರ ಅರ್ಬನ್ ಕೋ-ಆಪ್ ಬ್ಯಾಂಕಿನ
ವತಿಯಿAದ ಹಮ್ಮೀಕೊಂಡಿದ್ದ ಬ್ಯಾಂಕಿನ ಸದಸ್ಯರ
ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ
ಉದ್ಘಾಟಿಸಿ ಮಾತನಾಡಿ ವಿದ್ಯಾರ್ಥಿಗಳು ಪ್ರತಿ ವರ್ಷ ಹೆಚ್ಚು
ಹೆಚ್ಚು ಸಾಧನೆ ಮಾಡಲಿ ಎಂದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ
ಉಪಾಧ್ಯಕ್ಷರಾದ ಬಸಯ್ಯ ಹಿರೇಮಠ, ನಿರ್ದೆಶಕರಾದ
ಬಸವರಾಜ ಶಹಪೂರ, ವಿಶ್ವನಾಥ ಅಗಡಿ, ಗವಿಸಿದ್ದಪ್ಪ
ತಳಕಲ್,ಶಿವರಡ್ಡಿ ಭೂಮಕ್ಕನವರ,
ರಾಜೇಂದ್ರಕುಮಾರ ಶೆಟ್ಟರ್,ಶಿವಕುಮಾರ
ಪಾವಲಿಶೆಟ್ಟರ್, ರಮೇಶ ಕವಲೂರ, ನಾಗರಾಜ
ಅರಕೇರಿ,ಸುಮಂಗಲಾ ಸೋಮಲಾಪುರ, ಸೈಯದ್
ಷಹಾನಾಜಬೇಗಂ,ಜಯಶ್ರೀ ಬಬ್ಲಿ ಬ್ಯಾಂಕಿನ ಪ್ರಧಾನ
ವ್ಯವಸ್ಥಾಪಕ ಪ್ರಭಾಕರ ಜೋಶಿ, ವ್ಯವಸ್ಥಾಪಕ
ಮಲ್ಲಿಕಾರ್ಜುನ ಸಿದ್ನೆಕೊಪ್ಪ ಹಾಗೂ ಸಿಬ್ಬಂದಿ
ವರ್ಗದವರು ಪಾಲ್ಗೋಂಡಿದ್ದರು.