Breaking News

ದಿನೆದಿನೆಕಾವೇರುತ್ತಿರುವ ರೈತ ಸಂಘದಪ್ರತಿಭಟನೆ

Day by day farmers’ union protests


ವರದಿ : ಬಂಗಾರಪ್ಪ ಸಿ .
ಹನೂರು: ರೈತ ಸಂಘದ ಹೋರಾಟದ ಕಿಚ್ಚು ಅಧಿಕಾರಿಗಳ ವಿರುದ್ಧ ನಡೆಯುತತಿದ್ದು ಇಂದು ಆರನೆ ದಿನಕ್ಕೆ ಕಾಲಿಟ್ಟಿದೆ ಮುಂದಿನ ದಿನಗಳಲ್ಲಿ ಹೋರಾಟದ ರೀತಿಯನ್ನು ಬದಲಾಯಿಸಿ ಪ್ರತಿಭಟನೆ ಮಾಡಲು ಚರ್ಚಿಸಲಾಗುವುದು ಎಂದು ಚಾಮರಾಜನಗರ ಜಿಲ್ಲಾ ಉಪಾಧ್ಯಕ್ಷರಾದ ಗೌಡೆ ಗೌಡ ತಿಳಿಸಿದರು.

ನಂತರ ಮಾತನಾಡಿದ ಅವರು ತಾಲೂಕಿನ ಜಲ್ಲಿಪಾಳ್ಯ
ಗ್ರಾಮದಲ್ಲಿ ಗುರುವಾರ ರೈತರ ಮೆಲ್ಲೆ ಹಾಗೂ ಮಹಿಳೆ ಮೇಲೆ ಆರಣ್ಯ ಇಲಾಖೆಯ ಸಿಬ್ಬಂದಿಗಳು ಹಲ್ಲೆ -ರ ನಡೆಸಿದ್ದಾರೆ ಕರ್ನಾಟಕ ರಾಜ್ಯ ರೈತ ಸಂಘಟನೆ ಹೂಗ್ಯಂ ಗ್ರಾಮ ಅರಣ್ಯ ಇಲಾಖೆ ಅಧಿಕಾರಿಗಳ ಕಚೇರಿ ಮುಂಭಾಗ ಐದು ದಿನಗಳಿಂದಲೂ ಪ್ರತಿಭಟನೆ ನಡೆಸಲಾಗಿತು .
ಎರಡು ದಿನಗಳ ಹಿಂದೆ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷರಾದ ಬಡಗಲಪುರ ನಾಗೇಂದ್ರ ರವರು ಸಹ ಮಾತನಾಡಿದ್ದು.ರೈತರ ಮೇಲೆ ಹಲ್ಲೆ ನಡೆಸಿದ ಅರಣ್ಯ ಇಲಾಖೆಯ ಸಿಬ್ಬಂದಿ ಮೇಲೆ ಕಾನೂನು ಕ್ರಮ ವಾಗಬೇಕು. ಪೊಲೀಸ್ ಠಾಣೆ ಯಲ್ಲಿ ಅವರ ವಿರುದ್ಧ ಎಫ್ ಐ ಆರ್ ದಾಖಲು ಮಾಡಲಾಗಿದೆ ಕ ಕರ್ತವ್ಯದಿಂದ ವಜಾಗೊಳಿಸಬೇಕು. ಅವರ ವಿರುದ್ಧ ಮಾನ ನಷ್ಟ ಮೊಕದ್ದಮೆ ಹೂಡಿ ಹಾಗೂ ಮಹಿಳಾ ಆಯೋಗಕ್ಕೆ ದೂರು ನೀಡಲಾಗುವುದು ಎಂದು ತಿಳಿಸಿದರು
ರೈತರ ಪ್ರತಿಭಟನಾ ಸ್ಥಳಕ್ಕೆ ಡಿಎಫ್‌ಓ ರವರು ಸ್ಥಳಕ್ಕೆ ಬಂದು ಸಮಸ್ಯೆ ಬಗೆಹರಿಸದಿದ್ದಲ್ಲಿ, ಚಾಮರಾಜನಗರ, ಮಂಡ್ಯ, ರಾಮನಗರ ಮೈಸೂರು ಜಿಲ್ಲೆಗಳಿಂದ ರೈತ ಸಂಘದ ಪದಾಧಿಕಾರಿಗಳು ಜಿಲ್ಲಾ ಡಿಎಫ್‌ಓ ಕಚೇರಿಗೆ ಮುತ್ತಿಗೆ ಹಾಕಲಾಗುವುದು ಎಂದು ತಿಳಿಸಿದರು.
ರೈತರ ಮೇಲೆ ಹಲ್ಲೆ ಮಾಡಿರುವ ಅರಣ್ಯ ಇಲಾಖೆ ಅಧಿಕಾರಿಗಳು ರೈತರ ಮುಂದೆ ಕ್ಷಮೆ ಕೇಳ ದಿದ್ದರೆ ನಿರಂತರವಾಗಿ ಹೂಗ್ಯ ಗ್ರಾಮದ ಅರಣ್ಯ ಇಲಾಖೆ ಕಛೇರಿ ಮುಂಬಾಗ ಪ್ರತಿಭಟನೆ ನಡೆಯುತ್ತಲೇ ಇರುತ್ತದೆ ಎಂದು ಜಿಲ್ಲಾ ರೈತ ಸಂಘ ಉಪಾಧ್ಯಕ್ಷ ಗೌಡೇಗೌಡ ತಿಳಿಸಿದರು.
ಇದೇ ಸಂದರ್ಭದಲ್ಲಿ
ಹನೂರು ತಾಲೂಕು ಅಧ್ಯಕ್ಷ ಅಮ್ಮದ್ ಖಾನ್, ರವಿನಾಯ್ಡು, ರಾಜೇಂದ್ರ, ಅರ್ಮದ ರಾಜ್, ಕಾಶಿಗೌಡ, ಈರಣ್ಣ, ಹುಚ್ಚಯ್ಯ ಮಹಾದೇವ್. ಮುನಿಸ್ವಾಮಿ. ಪಳನಿ ಸ್ವಾಮಿ.ಕೃಷ್ಣ, ವೆಂಕಟೇಶ್, ರಾಜಮಣಿ.ವಿವಿಧ ಗ್ರಾಮದ ಪದಾಧಿಕಾರಿಗಳು, ಗ್ರಾಮಸ್ಥರು ಇದ್ದರು.

About Mallikarjun

Check Also

ಖೊಟ್ಟಿ ದಾಖಲೆ ಸೃಷ್ಟಿಸಿ, ಬಿಪಿಎಲ್ ಪಡಿತರ ಚೀಟಿ ಪಡೆದಿದ್ದ ಬಿಜೆಪಿ ಮುಖಂಡನ ವಿರುದ್ಧ ದೂರು ದಾಖಲು, ದಂಡವಸೂಲಿ.

ಕಾರಟಗಿ: ತಾಲೂಕಿನ ಸಿದ್ಧಾಪುರ ಗ್ರಾಮದ ಬಿಜೆಪಿ ಮುಖಂಡ ಆಗಿರುವ ಮಹಿಬೂಬ್ ಸಾಬ್ ಮುಲ್ಲಾ (ಎಂ.ಡಿ.ಎಸ್) ತಂದೆ ಮೋದಿನ್ ಸಾಬ್ ಈತನು …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.