Breaking News

ಶಾಸಕ ರಾಯರೆಡ್ಡಿ ಹೇಳಿಕೆ ಖಂಡಿಸಿ ಪ್ರತಿಭಟನೆ ನಡೆಸಿದವರ ವಿರುದ್ಧ ಪೊಲೀಸರಿಂದ ಸ್ವಯಂ ಪ್ರೇರಿತ ದೂರು ದಾಖಲು.

Spontaneous complaint registered by the police against those who protested against MLA Rayareddy's statement.


ಗಂಗಾವತಿ: ಕಿಷ್ಕಿಂಧಾ ಅಂಜನಾದ್ರಿ ಪ್ರದೇಶದಲ್ಲಿ ಡ್ರಗ್ಸ್ ಮಾರಾಟ ವ್ಯಾಪಕವಾಗಿದ್ದು ಡ್ರಗ್ಸ್ ಹಬ್ ಆಗಿದೆ ಎಂದು ಸದನದ ಅಧಿವೇಶನದಲ್ಲಿ ಯಲಬುರ್ಗಾ ಶಾಸಕ ಬಸವರಾಜ ರಾಯರೆಡ್ಡಿ ಹೇಳಿಕೆ ನೀಡಿ ಇತಿಹಾಸ ಪ್ರಸಿದ್ಧ ಆನೆಗೊಂದಿ ಪ್ರದೇಶಕ್ಕೆ ಅವಮಾನ ಮಾಡಿದ್ದಾರೆಂದು ಖಂಡಿಸಿ ಆನೆಗೊಂದಿ, ಸಾಣಾಪೂರ ಭಾಗದ ಸ್ಥಳೀಯರು ಮತ್ತು ಹೊಟೇಲ್ ಮಾಲೀಕರು ಪ್ರತಿಭಟನೆಯ ಸಂದರ್ಭದಲ್ಲಿ ಸಾರ್ವಜನಿಕವಾಗಿ ಅವಾಚ್ಯಶಬ್ದ ನಿಂದಿಸಿ ಮತ್ತು ಸಾರ್ವಜನಿಕ ಸಂಚಾರಕ್ಕೆ ತೊಂದರೆಯುಂಟು ಮಾಡಿದ ಆರೋಪದಲ್ಲಿ ನಗರ ಪೊಲೀಸ್ ಇನ್ಸಪೆಕ್ಟರ್ ಅಡಿವೇಶ ಪ್ರತಿಭಟನೆ ನಡೆಸಿದವರ ವಿರುದ್ಧ ಕಲಂ 283,504 ಮತ್ತು 290 ಅಡಿಯಲ್ಲಿ 20 ಜನರ ವಿರುದ್ಧ ಕೇಸ್ ದಾಖಲಿಸಿದ್ದಾರೆ.

ಜಾಹೀರಾತು

ಪ್ರತಿಭಟನೆ ನಿರತರಾದ ಶಿವಸಾಗರ ನಾಯಕ, ಗೋಪಿ,
ರಾಮಾಂಜನೇಯ, ಯರಿಸ್ವಾಮಿ, ವರುಣ್‌, ಸುನೀಲ್‌, ರಾಮಾಂಜನೇಯ, ಸಂತೋಷ,ಶ್ರೀಕಾಂತ ಹಾಗೂ ಇತರೆ, ಸುಮಾರು 15 ರಿಂದ 20 ಜನರ ವಿರುದ್ಧ ನಗರಠಾಣೆಯಲ್ಲಿ ಪೊಲೀಸರು ಸ್ವಯಂಪ್ರೇರಿತ ಕೇಸ್ ದಾಖಲಾಗಿದ್ದು ಇದುವರೆಗೂ ಪೊಲೀಸರು ಐವರನ್ನು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ.

About Mallikarjun

Check Also

ಗಂಗಾವತಿ ನಗರದ ಶ್ರೀ ರಾಘವೇಂದ್ರ ಸ್ವಾಮಿಗಳ ಮಠಕ್ಕೆ ಸಂಸದ ರಿಂದ ೫ ಲಕ್ಷ ಅನುದಾನ

MP A grants Rs 5 lakh to Sri Raghavendra Swamy Math in Gangavathi Nagar ಗಂಗಾವತಿ: …

Leave a Reply

Your email address will not be published. Required fields are marked *