Breaking News

ಸಂಸ್ಕೃತಿಯ ಮೇಲೂ ಸಾಮಾಜಿಕಮಾಧ್ಯಮಗಳು ಪ್ರಭಾವ ಬೀರುತ್ತಿವೆ- ಡಾ.ಬಿ.ಕೆ.ರವಿ.

Social media is also influencing culture - Dr. B.K. Ravi.




ಬೆಂಗಳೂರು(ಜಯನಗರ)- “ಸಂವಹನದ ಅತ್ಯಂತ ಶಕ್ತಿಯುತ ಅಂಗವಾಗಿ ಬೆಳೆಯುತ್ತಿರುವ ‘ಸಾಮಾಜಿಕ ಮಾಧ್ಯಮ’ಗಳು ಇಂದು ಸಂಸ್ಕೃತಿಯ ಮೇಲೂ ದುಷ್ಪರಿಣಾಮ ಬೀರುತ್ತಿವೆ” ಎಂದು ಕೊಪ್ಪಳ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ.ಬಿ.ಕೆ. ರವಿ ಅಭಿಪ್ರಾಯಪಟ್ಟರು.
ನ್ಯಾಷನಲ್ ಕಾಲೇಜು ಜಯನಗರದ ಪತ್ರಿಕೋದ್ಯಮ ವಿಭಾಗ ಆಯೋಜಿಸಿದ್ದ ‘ಸೋಶಿಯಲ್ ಮೀಡಿಯಾ ಅಂಡ್ ಕಲ್ಚರಲ್ ಚೇಂಜ್’ ವಿಷಯದ ಕುರಿತ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.
ವಿದೇಶಗಳಿಗೆ ಹೋಲಿಸಿದರೆ ಭಾರತದಲ್ಲೇ ಸಾಮಾಜಿಕ ಮಾಧ್ಯಮ ಬಳಕೆದಾರರ ಸಂಖ್ಯೆ ಹೆಚ್ಚಿದೆ. ಯುವಜನತೆಯಲ್ಲಿ ಇದೊಂದು ವ್ಯಸನವಾಗುತ್ತಿದೆ. ಹೀಗಾಗಿ ಬಹುಬೇಗ ಅನ್ಯ ಸಂಸ್ಕೃತಿಯ ಪ್ರಭಾವಕ್ಕೊಳಗಾಗುತ್ತಿದ್ದಾರೆ ಎಂದು ವಿಷಾದ ವ್ಯಕ್ತಪಡಿಸಿದರು. ಅಲ್ಲದೇ ಸಾಮಾಜಿಕ ಜಾಲತಾಣಗಳ ಸದ್ಬಳಕೆ, ಉಪಯೋಗಗಳ ಮೇಲೂ ಬೆಳಕು ಚೆಲ್ಲಿದರು.

ಜಾಹೀರಾತು

ಇದೇ ವೇಳೆ ಪತ್ರಿಕೋದ್ಯಮ ಅಂತಿಮ ಸೆಮಿಸ್ಟರ್ ವಿದ್ಯಾರ್ಥಿಗಳು ಹೊರ ತಂದ ಕ್ಲಾಸ್ ಮ್ಯಾಗಜಿನ್ ‘ಸ್ಪೆಕ್ಟರಂ’ ಮತ್ತು ಕ್ಯಾಂಪಸ್ ಪತ್ರಿಕೆ ‘ದಿ ಎನ್.ಸಿ.ಜೆ ಟೈಮ್ಸ್’ ಅನ್ನು ಬಿಡುಗಡೆ ಮಾಡಲಾಯಿತು.

ಕಾರ್ಯಕ್ರಮದಲ್ಲಿ ನ್ಯಾಷನಲ್ ಕಾಲೇಜು ಜಯನಗರದ ಅಧ್ಯಕ್ಷರಾದ ಡಾ.ಎಚ್.ಎನ್. ಸುಬ್ರಹ್ಮಣ್ಯ, ಪದವಿ ಕಾಲೇಜಿನ ಪ್ರಾಂಶುಪಾಲರಾದ ಡಾ.ಬಿ.ಸುರೇಶ್, ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ಮಮತಾ, ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥರಾದ ಡಾ.ಎಸ್. ಜಯಸಿಂಹ, ಸಹಾಯಕ ಪ್ರಾಧ್ಯಾಪಕಿ ಡಾ. ವೈಶಾಲಿ ಎಚ್.ಬಿ. ಅಧ್ಯಾಪಕ ವೃಂದ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

About Mallikarjun

Check Also

ದಸರಾ ಮಹೋತ್ಸವದ ಅಂಗವಾಗಿ ಕಲ್ಮಠದಲ್ಲಿ ಸರ್ವಧರ್ಮ ಸಮ್ಮೇಳನ

Interfaith conference in Kalmath as part of Dussehra celebrations ಮಾನ್ವಿ: ಪಟ್ಟಣದ ಮುಕ್ತಾಗುಚ್ಚ ಬೃಹನ್ಮಠದಲ್ಲಿ 49 ನೇ …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.