Breaking News

ತಿಪಟೂರು ಪಟ್ಟಣದಲ್ಲಿ ಇಷ್ಟಲಿಂಗ ಪೂಜೆ ಹಾಗೂ ಧಾರ್ಮಿಕ ಸಮಾರಂಭ

Ishtalinga Puja and religious ceremony held in Tipatur town

ಹಾಸನ – ತಿಪಟೂರು ಪಟ್ಟಣದಲ್ಲಿ ನಡೆಯುವ ಇಷ್ಟಲಿಂಗ ಪೂಜೆ ಹಾಗೂ ಧಾರ್ಮಿಕ ಸಮಾರಂಭ 3 ದಿವಸಗಳ ಕಾಲ ಶ್ರೀ ಮದ್ ರಂಭಾಪುರಿ ಜಗದ್ಗುರುಗಳವರ ದಿವ್ಯ ಸಾನಿಧ್ಯದಲ್ಲಿ ನಡೆಯಲಿದೆ ಎಂದು ತಿಪಟೂರು ತಾಲ್ಲೂಕು ಘಟಕದ ಪೂಜಾ ಸೇವಾ ಸಮಿತಿ ಸದಸ್ಯರಾದ ಟಿ.ಎನ್. ಪರಶಿವಮೂರ್ತಿ, ಜಿ.ಕೆ. ನಟರಾಜ್, ಟಿ.ಎಂ. ದಿವಾಕರ್, ಶ್ರೀ ತೋಂಟಾದಾರ್ಯ, ಸಾಸಿಲು ಕುಮಾರ್, ಮುಂತಾದವರು ತಿಳಿಸಿದರು.

ಜಾಹೀರಾತು

ಇಷ್ಟಲಿಂಗ ಪೂಜೆ, ಹಾಗೂ ಧಾರ್ಮಿಕ ಸಭೆ-
ಜುಲೈ 12 ರಿಂದ 14 ವರೆಗೆ
.

ತಿಪಟೂರು ಪಟ್ಟಣದ ಶ್ರೀ ಗುರು ಲೀಲಾ ಕಲ್ಯಾಣ ಮಂಟಪದಲ್ಲಿ
ಲೋಕ ಕಲ್ಯಾಣಕ್ಕಾಗಿ ಜುಲೈ 12 ರಿಂದ 14 ರವರೆಗೆ 3 ದಿವಸಗಳ ಕಾಲ ಇಷ್ಟಲಿಂಗ ಪೂಜೆ ಹಾಗೂ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ.

ಪ್ರತಿನಿತ್ಯ ಬೆಳಿಗ್ಗೆ 9 ಗಂಟೆಗೆ ಇಷ್ಟಲಿಂಗ ಪೂಜೆ, ನಂತರ ಪ್ರಸಾದ ವಿನಿಯೋಗ, ಸಂಜೆ 7 ಗಂಟೆಗೆ ಧರ್ಮ ಜಾಗೃತಿ ಸಮಾರಂಭದಲ್ಲಿ ರಾಜ್ಯದ ವಿವಿಧ ಹರಗುರು ಚರಮೂರ್ತಿಗಳು, ಸಮಾಜ ಸೇವಕರು, ಭಕ್ತರು ಭಾಗವಹಿಸುವರು ಎಂದರು.

ಈ ಕಾರ್ಯಕ್ರಮದಲ್ಲಿ
ಶ್ರೀಮದ್ ರಂಭಾಪುರಿ ಶ್ರೀ. ವೀರಸಿಂಹಾಸನಾಧೀಶ್ವರ ಶ್ರೀ 1008 ಜಗದ್ಗುರು ಪ್ರಸನ್ನ ರೇಣುಖ ಡಾ. ವೀರ ಸೋಮೇಶ್ವರ ರಾಜ ದೇಶಿ ಕೇಂದ್ರ ಶಿವಾಚಾರ್ಯ ಭಗವತ್ಪಾದರು
ದಿವ್ಯ ಸಾನಿಧ್ಯ ವಹಿಸಿ ಇಷ್ಟಲಿಂಗ ಪೂಜಾ ಕಾರ್ಯಕ್ರಮ ನಡೆಸಿಕೊಡುವರು.

ಈ ಸಂದರ್ಭದಲ್ಲಿ ಕಾಡಸಿದ್ದೇಶ್ವರ ಮಠದ ಶ್ರೀಗಳು, ಷಡಾಕ್ಷರಿ ಮಠದ ಶ್ರೀಗಳು, ಹೊನ್ನವಳ್ಳಿ ಮಠದ ಶ್ರೀಗಳು, ಎಡೆಯೂರು ಮಠದ ಶ್ರೀಗಳು, ಅಂಬಲದೇವರಹಳ್ಳಿ ಮಠದ ಶ್ರೀಗಳು, ನೊಣವಿನಕೆರೆ ಮಠದ ಶ್ರೀಗಳು, ಮಾದಿಹಳ್ಳಿ ಮಠ ಶ್ರೀಗಳು, ಬೂದಿಹಾಳ ಮಠ ಶ್ರೀಗಳು, ಶಾಸಕರು ಷಡಾಕ್ಷರಿಯವರು, ಮಾಜಿ ಸಚಿವರು ಬಿ.ಸಿ. ನಾಗೇಶ್, ಮಾಜಿ ಶಾಸಕರು ನಂಜಮರಿಯವರು,

ಕಾರ್ಯಕ್ರಮದ ದಾನಿಗಳಾದ ಶ್ರೀಮತಿ ಕೆ.ಜಿ. ಲೀಲಾ ಗುರುಪಾದಪ್ಪ ಮತ್ತು ಮಕ್ಕಳು ಕಾರ್ಯಕ್ರಮ ನಡೆಸಿಕೊಡುವರು.
ಶ್ರೀ ಜಗದ್ಗುರು ರೇಣುಕಾಚಾರ್ಯ ಗುರುಕುಲ ಬಾಳೆಹೊನ್ನೂರು ವೇದಗೋಷ ನಡೆಸಿಕೊಡುವರು.
ನಿವೃತ್ತ ಎ.ಸಿ.ಸಿ. ಹಾಗೂ ಕಾಂಗ್ರೆಸ್ ಮುಖಂಡರು ಟಿ.ಎಸ್. ಲೋಕೇಶ್, ಶ್ರೀ ಶಿವಪ್ರಸಾಧ್ ಸ್ವಾಗತಿಸುವರು.
ನ್ಯಾಯವಾದಿಗಳು ಶೋಭಜಯದೇವ್ ನಿರೂಪಿಸುವರು ಮುಂತಾದ ಹರಗುರು ಚರಮೂರ್ತಿಗಳು ಭಾಗವಹಿಸುವರು ಎಂದು ತಿಳಿಸಿದರು.

About Mallikarjun

Check Also

ಜೆಜೆಎಂ ಕಾಮಗಾರಿ ಅವೈಜ್ಞಾನಿಕ :ಮಳೆ ನೀರು ಗ್ರಾಮದೊಳಕ್ಕೆ ಸಾರ್ವಜನಿಕರಆಕ್ರೋಶ

JJM’s work is unscientific: Public outrage over rain water in the village ವರದಿ : ಪಂಚಯ್ಯ …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.