Breaking News

ಕೊಪ್ಪಳ ನೆಟ್‌ಬಾಲ್ ಅಸೋಸಿಯೇಷನ್ ಲೋಗೊ ಬಿಡುಗಡೆ

Koppal Netball Association Logo Release

ಜಾಹೀರಾತು


ಕೊಪ್ಪಳ: ಕೊಪ್ಪಳ ನೆಟ್‌ಬಾಲ್ ಅಸೋಸಿಯೇಷನ್ ಲೋಗೊವನ್ನು ಬೆಂಗಳೂರಿನಲ್ಲಿ ನಡೆದ ರಾಜ್ಯಮಟ್ಟದ ಮೊದಲ ಸೀನಿಯರ್ ಮಿಕ್ಸೆಡ್ ನೆಟ್‌ಬಾಲ್ ಚಾಂಪಿಯನ್‌ಶಿಪ್ ವೇದಿಕೆಯಲ್ಲಿ ರಾಜ್ಯ ಪದಾಧಿಕಾರಿಗಳು ಬಿಡುಗಡೆಗೊಳಿಸಿದರು.
ಮೊದಲ ಬಾರಿಗೆ ಬೆಂಗಳೂರಿನ ಪ್ರತಿಷ್ಠಿತ ಗ್ಲೋಬಲ್ ಅಕಾಡಮಿ ಆಫ್ ಟೆಕ್ನಾಲಜಿಯ ಸ್ಟೇಡಿಯಂನಲ್ಲಿ ನಡೆದ ಉದ್ಘಾಟನಾ ಸಮಾರಂಭದಲ್ಲಿ ಕೊಪ್ಪಳ ನೆಟ್‌ಬಾಲ್ ಅಸೋಸಿಯೇಷನ್ ಲೋಗೊವನ್ನು ಬಿಡುಗಡೆಗೊಳಿಸಿದ ನೆಟ್‌ಬಾಲ್ ಫೆಡರೇಷನ್ ಆಫ್ ಇಂಡಿಯಾದ ಉಪಾಧ್ಯಕ್ಷ ಗಿರೀಶ ಸಿ. ಅವರು, ರಾಜ್ಯದಲ್ಲಿ ನೆಟ್‌ಬಾಲ್ ಆಟವನ್ನು ಬೆಳೆಸುವ ನಿಟ್ಟಿನಲ್ಲಿ ಕಳೆದ ಮೂರು ದಶಕದಿಂದ ಕೆಲಸ ನಡೆದಿದೆ, ಈಗ ಅದಕ್ಕೆ ವೇದಿಕೆ ದೊರೆತಿದ್ದು, ನೆಟ್‌ಬಾಲ್ ಕ್ರೀಡೆ ಕಾಮನ್‌ವೆಲ್ತ್‌ನಲ್ಲಿದೆ, ಸ್ಕೂಲ್ ಗೇಮ್‌ನಲ್ಲಿದೆ, ಯೂತ್ ಕಾಮನ್‌ವೆಲ್ತ್‌ನಲ್ಲಿದೆ, ಜೊತೆಗೆ ರಾಜ್ಯ ಸರಕಾರದ ಎಲ್ಲಾ ಉದ್ಯೋಗದಲ್ಲಿ ಶೇ. ೨ ರಷ್ಟು ಮೀಸಲು ಸಿಕ್ಕಿದೆ, ಅದು ರಾಜ್ಯ ಓಲಂಪಿಕ್ಸ್ ಅಸೋಸಿಯೇಷನ್ ಅಧ್ಯಕ್ಷ ಡಾ. ಗೋವಿಂದರಾಜು ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕೊಡುಗೆ ಎಂದರು.
ಈ ಎಲ್ಲಾ ಅವಕಾಶಗಳಲ್ಲಿ ನೆಟ್‌ಬಾಲ್ ಇದ್ದು, ಅದನ್ನು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಬೆಳೆಸುವ ಗುರಿ ಹೊಂದಲಾಗಿದೆ. ರಾಷ್ಟ್ರಮಟ್ಟದಲ್ಲಿ ಆಡಿದ ಮಕ್ಕಳ ಶುಲ್ಕ ಮರುಹೊಂದಾಣಿಕೆ, ಸ್ಕಾಲರ್‌ಶಿಪ್ ಸೌಲಭ್ಯಗಳು ಸಹ ಇದ್ದು ಮಕ್ಕಳು ಕ್ರೀಡೆಯತ್ತ ಒಲವು ತೋರಿಸಬೇಕಿದೆ ಎಂದರು.
ಈ ಸಂದರ್ಭದಲ್ಲಿ ಸಂಸ್ಥೆಯ ರಾಜ್ಯ ಖಜಾಂಚಿ ವಿಶ್ವನಾಥ ಎ. ಸಿ., ರಾಜ್ಯ ಸಂಸ್ಥೆಯ ದಿಲೀಪ್ ಆರ್., ಸರವಣ ಆರ್., ಮಂಜುನಾಥ ಹೆಚ್.ಎಂ., ಡಾ. ಶಶಿಕುಮಾರ್, ಮಾನಸ ಎಲ್.ಜಿ., ರಾಮಕೃಷ್ಣ ಎನ್., ಕೊಪ್ಪಳ ಸಂಸ್ಥೆಯ ಜಿಲ್ಲಾಧ್ಯಕ್ಷ ಅಬ್ದುಲ್ ರಜಾಕ್ ಟೇಲರ್, ಕಾರ್ಯಾಧ್ಯಕ್ಷ ಮಂಜುನಾಥ ಜಿ. ಗೊಂಡಬಾಳ, ಉಪಾಧ್ಯಕ್ಷ ಮೌನೇಶ ವಡ್ಡಟ್ಟಿ, ಪ್ರಹ್ಲಾದ್‌ರಾಜ್ ದೇಸಾಯಿ, ಕೊಪ್ಪಳ ನೆಟ್‌ಬಾಲ್ ತಂಡದ ಸದಸ್ಯರು ಇದ್ದರು. ಮೊದಲ ಬಾರಿಗೆ ಮಿಕ್ಸೆಡ್ ನಲ್ಲಿ ರಾಜ್ಯಮಟ್ಟದ ಚಾಂಪಿಯನ್‌ಶಿಪ್ನಲ್ಲಿ ಶ್ರೀ ಚೈತನ್ಯ ಎಸ್.ವಿ.ಎಂ. ಕಾಲೇಜಿನ ವಿದ್ಯಾರ್ಥಿನಿಯರು ಉತ್ತಮ ಪ್ರದರ್ಶನ ನೀಡಿ ಮೆಚ್ಚುಗೆ ಗಳಿಸಿದರು.

About Mallikarjun

Check Also

ಹದಿನೈದು ದಿನವಾದರೂ ಬರದ ಕಸ ವಿಲೇವಾರಿ ವಾಹನ,,! ಸಾರ್ವಜನಿಕರ ಗೋಳು ಕೇಳುವವರು ಯಾರು ??

The garbage disposal vehicle hasn't arrived for fifteen days! Who listens to the public's complaints? …

Leave a Reply

Your email address will not be published. Required fields are marked *