P.O.P Ganesha Idol Sale Ban: Protect Environment by Worshiping Clay Ganesha Idol – Sabanna Kattikar
ಸಿಂಧನೂರು :- ಮಾನ್ಯ ಜಿಲ್ಲಾಧಿಕಾರಿಗಳು ರಾಯಚೂರು ಇವರ ಅಧ್ಯಕ್ಷತೆಯಲ್ಲಿ ಆ 2 ರಂದು ನಡೆದ ಪೂರ್ವಾಭಾವಿ ಸಭೆಯಲ್ಲಿ ಪಿ ಓ ಪಿ ರಸಾಯನಿಕ ಬಣ್ಣದಿಂದ ತಯಾರಿಸಿದ ಗಣೇಶ ಮೂರ್ತಿಗಳನ್ನು ನಿಷೇಧಿ ಆದೇಶ ಹೊರಡಿಸಿದ್ದಾರೆ ಆದ್ದರಿಂದ ಪಟ್ಟಣದ ಸಾರ್ವಜನಿಕರು ಪರಿಸರ ಸ್ನೇಹಿ ಮಣ್ಣಿನ ಗಣೇಶ್ ಮೂರ್ತಿಯನ್ನು ಪೂಜಿಸಿ ಪರಿಸರ ಸಂರಕ್ಷಿಸಿ
ಎಂದು ತುರ್ವಿಹಾಳ ಪಟ್ಟಣ ಪಂಚಾಯತ್ ಮುಖ್ಯ ಅಧಿಕಾರಿ ಸಾಬಣ್ಣ ಕಟ್ಟಿಕಾರ್ ತಿಳಿಸಿದ್ದಾರೆ.
ಪಟ್ಟಣದ ಗಣೇಶ ಮೂರ್ತಿಗಳ ಮಾರಾಟಗಾರರಿಗೆ ಹಾಗೂ ತಯಾರಿಸುವ ಮಾಲೀಕರಿಗೆ ತಿಳಿಯಪಡಿಸುವುದೇನೆಂದರೆ, ಉಲ್ಲೇಖದನ್ವಯ ಮಾನ್ಯ ಜಿಲ್ಲಾಧಿಕಾರಿಗಳು ರಾಯಚೂರು ಇವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯ ಆದೇಶದಂತೆ ಗಣಪತಿ ವಿಗ್ರಹಗಳಿಗೆ ರಾಸಾಯನಿಕ ಬಣ್ಣ ಲೇಪನ ಮಾಡಿದ ಹಾಗೂ ಪಿ ಓ ಪಿ ಯಿಂದ ವಿಗ್ರಹಗಳನ್ನು ತಯಾರಿಸಿದ ಗಣೇಶ ಮೂರ್ತಿಗಳನ್ನು ತಯಾರು ಮಾಡುವುದು, ಸಂಗ್ರಹಣೆ ಮಾಡುವುದು ಹಾಗೂ ಸಾಗಾಣಿಕೆ ಮಾಡುವುದು ನಿಷೇಧಿಸಲಾಗಿದೆ ಮತ್ತು ಮಣ್ಣಿನಿಂದ ತಯಾರಿಸಿದ ಪರಿಸರ ಸ್ನೇಹಿ ಗಣೇಶ ಮೂರ್ತಿಗಳನ್ನು ಮಾತ್ರ ತಯಾರಿಸುವುದು ಮಾರಾಟ ಮಾಡುವುದು ಮತ್ತು ಗಣೇಶ ಹಬ್ಬದಲ್ಲಿ ಹಸಿರು ಪಟಾಕಿಗಳನ್ನು ಮಾತ್ರ ಬಳಸುವುದು. ಒಂದು ವೇಳೆ ತುರ್ವಿಹಾಳ ಪಟ್ಟಣದಲ್ಲಿ ಗಣೇಶ ಮೂರ್ತಿಗಳಿಗೆ ರಾಸಾಯನಿಕ ಬಣ್ಣ ಲೇಪನ ಮಾಡಿದ ಹಾಗೂ ಪಿ ಓ ಪಿ ಯಿಂದ ಮಾಡಿರುವ ಗಣೇಶನ ಮೂರ್ತಿಗಳನ್ನು ತಯಾರಿಸುವುದು ಮತ್ತು ಮಾರಾಟ ಮಾಡುವುದು ಕಂಡು ಬಂದಲ್ಲಿ ಅಂತವರ ವಿರುದ್ಧ ಜಲಮಾಲಿನ್ಯ (ತಡೆ ಮತ್ತು ನಿಯಂತ್ರಣ) ಕಾಯ್ದೆ 1974ರ ಕಲಂ(33)ರ ಅಡಿ ಪ್ರಕರಣ ದಾಖಲಿಸಲಾಗುವುದು ಮತ್ತು ಅಂತವರ ವಿರುದ್ಧ ದಂಡ ಪುರಸಭೆ ಕಾಯ್ದೆ 1964 ಪ್ರಕಾರ ಕಾನೂನು ರೀತ್ಯಾ ಕ್ರಮ ಕೈಗೊಳ್ಳಲಾಗುವುದೆಂದು ಪತ್ರಿಕೆಗೆ ತಿಳಿಸಿದ್ದಾರೆ.