Meeting of Irrigation Department officials and farmers
ಮಾನ್ವಿ: ತಾಲೂಕಿನ ನೀರಾಮಾನ್ವಿ ಗ್ರಾಮದಲ್ಲಿನ ಶ್ರೀ ರೇಣುಕ ಯಲ್ಲಮ ದೇವಿ ಸಮುದಾಯ ಭವನದಲ್ಲಿ ನಡೆದ ನೀರಾವರಿ ಇಲಾಖೆ ಅಧಿಕಾರಿಗಳ ಹಾಗೂ ರೈತರ ಸಭೆಯಲ್ಲಿ ರಾಯಚೂರು ಯರಮರಸ್ ನೀರಾವರಿ ಇಲಾಖೆಯ ಸೂಪರ್‌ಡೆಂಟ್ ಇಂಜನೀಯರ್ ಕಿರಾಣ್ ಮಸೂದಿ ಮಾತನಾಡಿ ತುಂಗಭದ್ರ ಜಲಾಶಯದಲ್ಲಿ ನೀರಿನ ಸಂಗ್ರಹವಿದ್ದರು ಕೂಡ ಮಳೆಗಾಲದ ಸಮಯದಲ್ಲಿ ನೀರಾವರಿ ಇಲಾಖೆಯಿಂದ ಎಡದಂಡೆ ಕಾಲುವೆಯ ಕೋನೆ ಬಾಗದ ಟೆಲೆಂಡ್ ರೈತರ ಜಮೀನುಗಳಿಗೆ ನೀರಾವರಿ ಇಲಾಖೆಯಿಂದ ಸಮರ್ಪಕವಾಗಿ ನೀರನ್ನು ಹರಿಸಲು ಅಗದೆ ಇರುವುದಕ್ಕೆ ಈ ಕಾಲುವೆ ಭಾಗದಲ್ಲಿ ಹೆಚ್ಚಾಗಿರುವ ಆನಧಿಕೃತ ಸಾಗುವಳಿದಾರರೆ ಕಾರಣರಾಗಿದ್ದು ನೀರಾವರಿ ಇಲಾಖೆ ಎ.ಇ.ಇ.ಗಳು ಹಾಗೂ ಕಂದಾಯ ಇಲಾಖೆ , ಪೊಲೀಸ್ ಇಲಾಖೆ ಒಳಗೊಂಡಂತೆ ತಂಡವನ್ನು ರಚಿಸಿ ರಾತ್ರಿ ವೇಳೆ ಗಸ್ತು ಹೆಚ್ಚಿಸಲಾಗುವುದು, ಜಿಲ್ಲಾಡಳಿತದ ನೆರವನ್ನು ಪಡೆದು ಕಾಲುವೆಯ ಮೂಲಕ ಅಕ್ರಮವಾಗಿ ನೀರು ಪಡೆಯುತ್ತಿರುವವರ ಮೇಲೆ ಕಠಿಣವಾದ ಕಾನೂನು ಕ್ರಮ ಕೈಗೊಳ್ಳಲಾಗುವುದು ಕಾಲುವೆ ಮೇಲ್ಬಾಗದಲ್ಲಿ ವಾರಬಂದಿ ಜಾರಿಗೆ ಸೂಚನೆ ನೀಡಲಾಗುವುದು. ನಮ್ಮ ಭಾಗಕ್ಕೆ ಕಾಲುವೆ ಮೂಲಕ ನೀರು ಕೋಡುವುದುಕ್ಕೆ ಅಗುತ್ತಿರುವ ತೊಂದರೆಗಳನ್ನು ಕಂಡುಕೊಂಡು ಮುನೀರಾಬಾದ್ ಮುಖ್ಯ ಅಭಿಯಂತರ ಬಳಿ ಚರ್ಚೆ ನಡೆಸಿ ಸೂಕ್ತ ಪರಿಹಾರವನ್ನು ಕಂಡುಕೊಳ್ಳಲಾಗುವುದು. ರೈತರಿಗೆ ಗೇಜ್ ಪ್ರಕಾರ ನೀರು ಬಿಡಲಾಗುವುದು ಈ ಭಾಗದ ಕಾಲುವೆಗಳಿಗೆ ಇನ್ನು 4 ದಿನಗಳಲ್ಲಿ ಅಗತ್ಯ ಗೇಜ್ ನಂತೆ ನೀರು ಹರಿಸುವುದಕ್ಕೆ ಅಗತ್ಯವಾದ ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗುವುದು. ನೀರಾವರಿ ಇಲಾಖೆಯ ಅಧಿಕಾರಿಗಳು ರೈತರ ಮೇಲೆ ಹೂಡಿರುವ ಮೊಕದ್ದಮೆಗಳ ಬಗ್ಗೆ ಪೊಲೀಸ್ ಆಧಿಕಾರಿಗಳೊಂದಿಗೆ ಚರ್ಚೆ ನಡೆಸಿ ರೈತರಿಗೆ ಅನುಕೂಲ ಮಾಡಲಾಗುವುದು ಸಿರವಾರ ಎ.ಇ.ಇ. ವಿಜಯಲಕ್ಷಿö್ಮಯವರನ್ನು ಬೇರೆ ವಿಭಾಗಕ್ಕೆ ವರ್ಗಹಿಸಲಾಗುವುದು ಎಂದು ತಿಳಿಸಿದರು.
ಕರ್ನಾಟಕ ರೈತ ಸಂಘದ ರಾಜ್ಯ ಗೌರವಾಧ್ಯಕ್ಷರಾದ ಚಾಮರಸ ಮಾಲಿಪಾಟೀಲ್ ಮಾತನಾಡಿ ತುಂಗಭದ್ರ ಜಲಾಶಯದ ನೀರಾವರಿ ನಿಯಮದಂತೆ ಕಾಲುವೆಗಳಿಗೆ ಜಲಾಶಯದಿಂದ ನೀರು ಬಿಟ್ಟನಂತರ ಕಾಲುವೆ ಕೋನೆ ಭಾಗದ ರೈತರಿಗೆ ನೀರು ತಲುಪುವವರೆಗೂ ಉಪಕಾಲುವೆಗಳನ್ನು ಬಂದು ಮಾಡಿ ನೀರು ಹಾರಿಸುವುದನ್ನು ನಿಲ್ಲಿಸಬೇಕು ಎನ್ನುವ ನಿಯಮವಿದ್ದರು ಕೂಡ ನೀರಾವರಿ ಇಲಾಖೆ ಮೆಲ್ಬಾಗದ ಕಾಲುವೆಗಳಿಗೆ ನೀರು ಬಿಟ್ಟಿರುವುದರಿಂದ ಅನಧಿಕೃತವಾಗಿರುವ 2 ಲಕ್ಷ ಎಕರೆ ಜಮೀನುಗಳಲ್ಲಿ ರೈತರು ಪಂಪ್ ಸೆಟ್,ಅಯಿಲ್ ಇಂಜೀನ್, ಟ್ರಾö್ಯಕ್ಟರ್‌ಗಳ ಮೂಲಕ ನೀರು ಹರಿಸಿಕೊಳ್ಳುವುದಕ್ಕೆ ಅಧಿಕಾರಿಗಳು ಅವಕಾಶ ಮಾಡಿಕೊಟ್ಟಿರುವುದರಿಂದ 7ನೂರು ಕ್ಯೂಸ್ಕ್ ನೀರನ್ನು ಆಕ್ರಮವಾಗಿ ಬಳಸಿಕೊಳ್ಳುತ್ತಿರುವುದರಿಂದ ಸಿರವಾರ ಮತ್ತು ಮಾನ್ವಿ ತಾಲೂಕುಗಳ ರೈತರ ನೀರಾವರಿ ಜಮೀನುಗಳಿಗೆ ಕಾಲುವೆ ನೀರು ಬಿಟ್ಟು 20 ದಿನವಾದರು ಕೂಡ ನೀರುತಲುಪಿಲ್ಲ. ಈ ಭಾಗದಲ್ಲಿ 7 ಕಡೆ ಗೇಜ್ ವ್ಯಾತ್ಯಸ ವಿದೆ. ಮಾನ್ವಿ ಭಾಗದ 69 ನೇ ಮೈಲ್‌ನಲ್ಲಿ ಹೊಸಗೇಜ್ ಪ್ರಕಾರ ನೀರನ್ನು ಬಿಡಬೇಕು ಸಿರವಾರ ತಾಲೂಕಿನ 104ನೇ ಮೈಲ್ ಕಾಲುವೆಯಲ್ಲಿ ನೀರಿನ ಗೇಜ್ ನಿರ್ವಹಣೆ ಮಾಡಬೇಕು. ಕಾಲುವೆ ಭಾಗದ ಕೆರೆಗಳಿಗೆ ಆನಧಿಕೃತವಾಗಿರುವ ಪಂಪ್ ಸೆಟ್ ಗಳಿಗೆ ಜೆಸ್ಕಂ ಇಲಾಖೆಯಿಂದ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಬೇಕು. ಕಪಗಲ್ ಕೆರೆಯ ಹೂಳನ್ನು ಎತಬೇಕು. 36 ರಿಂದ 104, 85,82.76 ಮೈಲ್ ಕಾಲುವೆಗಳಿಗೆ ಸಮರ್ಪಕವಾಗಿ ನೀರು ಹರಿಸಬೇಕು ಎಂದು ಒತ್ತಾಯಿಸಿದರು.
ಸಭೆಯಲ್ಲಿ ಸಿಂಧನೂರು ಡಿವೈ.ಎಸ್.ಪಿ. ಬಾಳಪ್ಪ ತಳವಾರ, ತಹಸೀಲ್ದಾರ್ ರಾಜು ಪಿರಂಗಿ,ಪಿ.ಐ.ವೀರಭದ್ರಯ್ಯ ಹಿರೇಮಠ. ಸಿರವಾರ ನೀರಾವರಿ ಇಲಾಖೆಯ ಕಾರ್ಯಪಾಲಕ ಅಭಿಯಂತರ ಶಿವಕುಮಾರ ಮಾತನಾಡಿದರು.
ಸಭೆಯಲ್ಲಿ ನೀರಾವರಿ ಇಲಾಖೆಯ ಸಿಂಧನೂರು ವಿಭಾಗದ ಎ.ಇ.ಇ.ಸತ್ಯನಾರಯಣ ಶೆಟ್ಟಿ, ಯರಮರಸ್ ಇ.ಇ.ಚಂದ್ರಶೇಖರ್, ಮಸ್ಕಿ ಎ.ಇ.ಇ. ದಾವೂದ್, ತುರ್ವಿಹಾಳ್ ಎ.ಇ.ಇ. ಹನುಮಂತಪ್ಪ.ಜವಾಳಗೇರ ಎ.ಇ.ಇ. ಶಿವಪ್ಪ, ಸುಂದರ,ಬಾಬು ಹಾಗೂ ರೈತ ಮುಖಂಡರಾದ ಶಂಕರಗೌಡ ಹರವಿ, ಕ.ರಾ.ರೈ.ಸಂಘದ ರಾಜ್ಯ ಉಪಾಧ್ಯಕ್ಷರಾದ ದೊಡ್ಡಬಸವನಗೌಡ,ರಾಜ್ಯ ಕಾರ್ಯದರ್ಶಿಗಳಾದ ಯಂಕಪ್ಪ ಕಾರಬರಿ,ಸೂಗೂರಯ್ಯಸ್ವಾಮಿ.ಆರ್.ಎಸ್.ಮಠ, ಜಿಲ್ಲಾಧ್ಯಕ್ಷರಾದ ಬಸವರಾಜ ಮಾಲಿಪಾಟೀಲ್, ಜಿ.ಪ್ರ.ಕಾರ್ಯದರ್ಶಿ ಲಿಂಗರೆಡ್ಡಿ ಪಾಟೀಲ್, ಸಿರಾವರ ತಾ.ಅಧ್ಯಕ್ಷ ಹೆಚ್.ಶಂಕ್ರಪ್ಪ ದೇವತಗಲ್,ಮಾನ್ವಿ ತಾ.ಅಧ್ಯಕ್ಷರಾದ ಸಿದ್ದಯ್ಯಸ್ವಾಮಿ ಗೋರ್ಕಾಲ್ ರೈತ ಮುಖಂಡರಾದ ವೀರೇಶ ಗವಿಗಟ್,ಉಪಾರ ಬಸವರಾಜ್,ಚಾಮರಸ ಜಾನೇಕಲ್, ದೊಡ್ಡ ದೇವೇಂದ್ರಪ್ಪ ಜಾನೇಕಲ್ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ನೂರಾರು ರೈತರು ಸಭೆಯಲ್ಲಿ ಭಾಗವಹಿಸಿದರು.