Breaking News

ಜಿಲ್ಲಾಧಿಕಾರಿಗಳಕಾರ್ಯಾಲಯ:ವಿದ್ಯಾವಂತ ನಿರುದ್ಯೋಗಸ್ಥರಿಂದ ಅರ್ಜಿ ಆಹ್ವಾನ

District Collector’s Office: Application Invitation from Educated Unemployed

ಕೊಪ್ಪಳ ನವೆಂಬರ್ 04 (ಕರ್ನಾಟಕ ವಾರ್ತೆ): ಜಿಲ್ಲೆಯ 32 ಗ್ರಾಮ ಪಂಚಾಯತಿಗಳಲ್ಲಿ ಗ್ರಾಮ-1 ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಉದ್ದೇಶದಿಂದ ಗ್ರಾಮ-1 ಕೇಂದ್ರಗಳಲ್ಲಿ ಕಾರ್ಯನಿರ್ವಹಿಸಲು ಆಯಾ ಗ್ರಾಮ ಪಂಚಾಯತ್ ವ್ಯಾಪ್ತಿಯ ಆಸಕ್ತ ವಿದ್ಯಾವಂತ ನಿರುದ್ಯೋಗಸ್ಥರಿಂದ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ಗಂಗಾವತಿ ತಾಲ್ಲೂಕಿನ ಹೊಸಕೇರಾ, ವೆಂಕಟಗಿರಿ, ಬಸಾಪಟ್ನ, ಹೆರೂರು ಗ್ರಾಮ ಪಂಚಾಯತಿಗಳಲ್ಲಿ, ಕನಕಗಿರಿ ತಾಲ್ಲೂಕಿನ ನವಲಿ, ಚಿಕ್ಕಡನಕನಕಲ್, ಮುಸಲಾಪುರ ಗ್ರಾಮ ಪಂಚಾಯತಿಗಳಲ್ಲಿ, ಕಾರಟಗಿ ತಾಲ್ಲೂಕಿನ ಚೆಲ್ಲೂರು, ಬೂದಗುಂಪಾ, ಬೇವಿನಹಾಳ, ಬೆನ್ನೂರು ಗ್ರಾಮ ಪಂಚಾಯತಿಗಳಲ್ಲಿ, ಕೊಪ್ಪಳ ತಾಲ್ಲೂಕಿನ ಬೂದಗುಂಪಾ, ಕಾತರಕಿ ಗುಡ್ಲಾನೂರು, ಕುಣಿಕೇರಿ, ಓಜನಹಳ್ಳಿ, ಕಲಕೇರಾ ಗ್ರಾಮ ಪಂಚಾಯತಿಗಳಲ್ಲಿ, ಕುಕನೂರು ತಾಲ್ಲೂಕಿನ ಮಂಗಳೂರು, ಬಳಗೇರಿ, ಶಿರೂರು ಗ್ರಾಮ ಪಂಚಾಯತಿಗಳಲ್ಲಿ, ಕುಷ್ಟಗಿ ತಾಲ್ಲೂಕಿನ ಹಿರೇಮನ್ನಾಪುರ, ಕಂದಕೂರ, ಕಾಟಾಪುರ, ಕಿಲ್ಲಾರಹಟ್ಟಿ, ಹಿರೇಬನ್ನಿಗೋಳ, ಮೇಣೇದಾಳ, ಜಾಗೀರ ಗುಡದೂರ, ಹನುಮಸಾಗರ, ನಿಲೋಗಲ್ ಗ್ರಾಮ ಪಂಚಾಯತಿಗಳಲ್ಲಿ ಹಾಗೂ ಯಲಬುರ್ಗಾ ತಾಲ್ಲೂಕಿನ ಸಂಕನೂರು, ಮುಧೋಳ, ಹಿರೇಅರಳಿಹಳ್ಳಿ, ಬೇವೂರು ಗ್ರಾಮ ಪಂಚಾಯತಿಗಳ ಗ್ರಾಮ-1 ಕೇಂದ್ರಗಳಲ್ಲಿ ಕಾರ್ಯನಿರ್ವಹಿಸಲು ಆಸಕ್ತಿ ಇರುವ ಸಂಬAಧಿಸಿದ ಗ್ರಾಮ ಪಂಚಾಯತಿ ವ್ಯಾಪ್ತಿಯ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
ಅರ್ಜಿಯನ್ನು ಸಲ್ಲಿಸಲು ನವೆಂಬರ್ 15 ಕೊನೆಯ ದಿನವಾಗಿದ್ದು, https://kal-mys.gramaone.karnataka.gov.in ಪೋರ್ಟಲ್‌ನಲ್ಲಿ ಅರ್ಜಿ ಸಲ್ಲಿಸಬೇಕು ಎಂದು ಅಪರ ಜಿಲ್ಲಾಧಿಕಾರಿ ಸಾವಿತ್ರಿ ಬಿ.ಕಡಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

About Mallikarjun

Check Also

ಖೊಟ್ಟಿ ದಾಖಲೆ ಸೃಷ್ಟಿಸಿ, ಬಿಪಿಎಲ್ ಪಡಿತರ ಚೀಟಿ ಪಡೆದಿದ್ದ ಬಿಜೆಪಿ ಮುಖಂಡನ ವಿರುದ್ಧ ದೂರು ದಾಖಲು, ದಂಡವಸೂಲಿ.

ಕಾರಟಗಿ: ತಾಲೂಕಿನ ಸಿದ್ಧಾಪುರ ಗ್ರಾಮದ ಬಿಜೆಪಿ ಮುಖಂಡ ಆಗಿರುವ ಮಹಿಬೂಬ್ ಸಾಬ್ ಮುಲ್ಲಾ (ಎಂ.ಡಿ.ಎಸ್) ತಂದೆ ಮೋದಿನ್ ಸಾಬ್ ಈತನು …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.