Baby Class, LKG, UKG, Friendship Day at Reddy Veeranna Sanjeevappa Residential School
ನವನಗರ್ ಮರ್ಲನಹಳ್ಳಿ : ಕಮ್ಮವಾರಿಶಿಕ್ಷಣ ಸಂಸ್ಥೆ ರಿ. ರೆಡ್ಡಿ ವೀರಣ್ಣ ಸಂಜೀವಪ್ಪ ವಸತಿ ಶಾಲೆಯಲ್ಲಿ ಬೇಬಿ ಕ್ಲಾಸ್, ಎಲ್ ಕೆ ಜಿ,
ಯು ಕೆ ಜಿ, ಮಕ್ಕಳು ಸಡಗರ ಸಂಭ್ರಮದಿಂದ ಫ್ರೆಂಡ್ ಶಿಪ್ ಡೇ ಆಚರಿಸಿದರು. ಈ ವೇಳೆ ಬಾಲ ಗುರುಕುಲ ಮುಖ್ಯಸ್ಥರಾದ ಶ್ರೀದೇವಿ ಕೊಲ್ಲಾ ಮಾತನಾಡಿ
ಆಗಸ್ಟ್ ಮೊದಲ ಭಾನುವಾರ ಸ್ನೇಹಿತರ ದಿನಾಚರಣೆ ಎಂದು ಆಚರಣೆ ಮಾಡಲಾಗುತ್ತದೆ. ಫ್ರೆಂಡ್‌ಶಿಪ್ ಇದೊಂದು ಸುಮಧುರ ಬಾಂಧವ್ಯ. ನಮಗೆ ಯಾವುದೇ ಸಮಸ್ಯಯಿದ್ದರೂ ಅದಕ್ಕೊಂದು ಪರಿಹಾರ ನಮ್ಮ ಗೆಳಯರ ಬಳಿ ಇರುತ್ತದೆ ಎಂಬ ಬಲವಾದ ನಂಬಿಕೆ. ಸುಖ, ದುಖಃ, ಸಂತೋಷ, ನೋವುಗಳಲ್ಲಿ ನಮ್ಮ ಕುಟುಂಬದವರಂತೆ ನಮ್ಮೊಂದಿಗೆ ಇರುವುದು ನಮ್ಮ ಸ್ನೇಹಿತರು. ಸ್ನೇಹ ಎಂಬ ಒಳ್ಳೆಯ ಬಾಂಧವ್ಯದ ಮಹತ್ವವನ್ನು ಸಾರಲು ಪ್ರತಿ ವರ್ಷ ಜುಲೈ 30 ರಂದು ಅಂತರಾಷ್ಟ್ರೀಯ ಸ್ನೇಹಿತರ ದಿನವನ್ನು ಆಚರಣೆ ಮಾಡಲಾಗುತ್ತದೆ ಎಂದರು.
ನಂತರ ಮಕ್ಕಳು ಒಬ್ಬರಿಗೊಬ್ಬರು ಪರಸ್ಪರ ಫ್ರೆಂಡ್ ಶಿಪ್ ಬ್ಯಾಂಡ್ ಕಟ್ಟುವ ಮುಖಾಂತರ ಶುಭಾಶಯಗಳು ಕೋರಿದರು.
ಈ ಸಂದರ್ಭದಲ್ಲಿ ಅಪರ್ಣ, ಅರುಣ ಟಿ , ಶ್ವೇತ, ಅಕ್ಷತಾ, ಅರುಣ ಎಲ್, ಲಕ್ಷ್ಮಿ, ರಾಘವೇಣಿ, ಮೇರಿ, ಸಮೀನಾ ಉಪಸ್ಥಿತರಿದ್ದರು.