Breaking News

ಆಶಾ ಕಾರ್ಯಕರ್ತರ  ಬೇಡಿಕೆಗಳನ್ನುಈಡೇರಿಸುವಂತೆ ಒತ್ತಾಯ

Asha urges workers to fulfill their demands

ಗಂಗಾವತಿ, ಅರೋಗ್ಯ ಸಚಿವರಿಗೆ ಗಂಗಾವತಿ ತಹಸಿಲ್ದಾರ್ ಕಾರ್ಯಾಲಯದ  ಶಿರಸ್ತೆದಾರ ಆನಂತ ಜ್ಯೋಶಿ ಮೂಲಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವಿಕಾಸಸೌದ ಬೆಂಗಳೂರು ಇವರಿಗೆ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ಜಿಲ್ಲಾಧ್ಯಕ್ಷ ಶರಣು ಗಡ್ಡಿ ಇವರು ಆಶಾ ಕಾರ್ಯಕರ್ತರೊಂದಿಗೆ ತಹಸಿಲ್ ಕಾರ್ಯಾಲಯಕ್ಕೆ ತೆರಳಿ ಮನವಿ ಸಲ್ಲಿಸಿದರು.ಸರ್ಕಾರದ ಐದು ಗ್ಯಾರಂಟಿ ಯೋಜನೆಗಳ ಬಗ್ಗೆ ಆಶಾ ಕಾರ್ಯಕರ್ತೆಯರು ಮತ್ತು ಇತರ ಸಿಬ್ಬಂದಿಗಳ ಮೂಲಕ ಮನೆ ಮನೆ ಸಮೀಕ್ಷೆ ಮಾಡಲು ಆಗುತ್ತಿರುವ ಸಮಸ್ಯೆಗಳಿಗೆ ಪರಿಹಾರ ಕೋರಿ. ಸರ್ಕಾರದ ಆದೇಶದಂತೆ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳನ್ನು ಸರಿಯಾದ ರೀತಿಯಲ್ಲಿ ಫಲಾನುಭವಿಗಳಿಗೆ ತಲುಪಿರುವ ಕುರಿತಂತೆ, ಮತ್ತು ಮನೆ ಮನೆಗಳಿಗೆ ತೆರಳಿ ಆಶಾ ಕಾರ್ಯಕರ್ತೆಯರು ಮತ್ತು ಇತರ ಸಿಬ್ಬಂದಿಗಳ ಮೂಲಕ ಸಮೀಕ್ಷೆ ಮಾಡಲು ನೇಮಿಸಲಾಗಿದೆ. ಆಶಾ ಕಾರ್ಯಕರ್ತೆಯರು ಇತ್ತೀಚಿಗೆ ರಾಜ್ಯ ಮಟ್ಟದಲ್ಲಿ ಬೃಹತ್ ಹೋರಾಟ ನಡೆಸಿ,ರಾಜ್ಯಾದ್ಯಂತ ಆಶಾ ಕಾರ್ಯಕರ್ತರ ಜ್ವಲಂತ  ಸಮಸ್ಯೆಗಳ ಪರಿಹಾರಕ್ಕೆ ಗಮನಹರಿಸುವಂತೆ ಮತ್ತು  ಆಶಾ ಕಾರ್ಯಕರ್ತರಿಗೆ ಮೊಬೈಲ್ ಇಲ್ಲದಿರುವ ಬಗ್ಗೆ ಗಮನ ಸೆಳೆದಿದ್ದಾರೆ. 

ಹಾಗೆಯೇ ಈ ಸಂದರ್ಭದಲ್ಲಿ ಆಶಾ ಕಾರ್ಯಕರ್ತರ ಸಮಸ್ಯೆಗಳಿಗೆ ಪರಿಹಾರ ನೀಡಿದಲ್ಲಿ ಪರಿಣಾಮಕಾರಿಯಾಗಿ ಸಮೀಕ್ಷೆ ಮಾಡಬಹುದೆಂದು ತಿಳಿಸಲು ಇಚ್ಚಿಸುತ್ತೇವೆ. ಇಲಾಖೆಯಿಂದ ಕಾರ್ಯಕರ್ತೆಯರಿಗೆ ಮೊಬೈಲ್ ಮತ್ತು ಡಾಟಾ ಕೊಡದೇ ಇರುವುದರಿಂದ, ಸರ್ವೇ ಮಾಡುವುದು ತುಂಬಾ ಕಷ್ಟವಾಗಲಿದೆ. ಹಾಗಾಗಿ ಸರ್ಕಾರ ಕೂಡಲೇ ಮೊಬೈಲ್ ಮತ್ತು ಡಾಟಾ ಒದಗಿಸಬೇಕು.ಮೊಬೈಲ್‌ನಲ್ಲಿ ಸರ್ವೇ ಮಾಡಲು ಬಾರದ ಕಾರ್ಯಕರ್ತೆಯರಿಗೆ ಪರ್ಯಾಯ ವ್ಯವಸ್ಥೆ ಮಾಡಬೇಕು.ಐದು ಗ್ಯಾರಂಟಿಗಳ ಕುರಿತು ಸರ್ವೇ ಮಾಡಬೇಕಾಗಿರುವುದರಿಂದ ಸಮಯ ಹೆಚ್ಚುತೆಗೆದುಕೊಳ್ಳುವುದು. ಫಲಾನುಭವಿಗಳ ಮನೆಗೆ ಹಲವಾರು ಬಾರಿ ಸಂಪರ್ಕ ಮಾಡುವ ಅಗತ್ಯ ಬೀಳುವುದರಿಂದ ಪ್ರೋತ್ಸಾಹ ಧನವನ್ನು ಹೆಚ್ಚಿಸಬೇಕು. ಮುಂದಿನ ಕೆಲವೇ ದಿನಗಳಲ್ಲಿ ಪಲ್ಸ್ ಪೋಲಿಯೋ ಬರುತ್ತಿರುವುದರಿಂದ ಎರಡೂ ಕೆಲಸಗಳ ಒತ್ತಡದಿಂದಾಗಿ ಸರ್ಕಾರದ ಕಾರ್ಯ ಚಟುವಟಿಕೆ ಆಧಾರಿತ ಕೆಲಸಗಳು ಮಾಡಲು ನಾವು ಬದ್ಧರಾಗಿದ್ದು, ನಮಗೆ ಸರ್ಕಾರದಿಂದ  ಪ್ರೋತ್ಸಾಹ ಧನಗಳು ಕೈ ತಪ್ಪಿ ಹೋಗದಂತೆ ನೋಡಿಕೊಳ್ಳಬೇಕು. ಆಶಾ ಕಾರ್ಯಕರ್ತರಿಗೆ ಮೊಬೈಲ್ ನೀಡದಿರುವುದರಿಂದ ಮತ್ತು ಪರ್ಯಾಯವಾಗಿ ಫಾರ್ಮೆಟ್ ನೀಡಿದಲ್ಲಿ ಸಮೀಕ್ಷೆ ಮಾಡಬಹುದಾಗಿದೆ. ಸಾಧ್ಯವಾದಷ್ಟು  ಇಲಾಖೆಯಿಂದ ಫಾರ್ಮೆಟ್‌ಗಳನ್ನು ನೀಡಿದಲ್ಲಿ ಸಮೀಕ್ಷೆ ಮಾಡಬಹುದಾಗಿದೆ ಎಂದು ತಿಳಿಸಿದರು.

ಈಗಾಗಲೇ ಸರ್ಕಾರದ ಆದೇಶದಂತೆ ಪ್ರತಿ ಆಶಾ ಕಾರ್ಯಕರ್ತರಿಗೆ 100 ರಿಂದ 120 ಮನೆಗಳ ಸರ್ವೆ ಮಾಡಬೇಕಾಗಿರುತ್ತದೆ. ಬೇರೆ ಸಿಬ್ಬಂದಿ ಮಾಡದೆ ಇರುವ ಹೆಚ್ಚಿನ ಮನೆಗಳ ಹೊರೆಯನ್ನು ಕೇವಲ ಆಶಾ ಕಾರ್ಯಕರ್ತರ  ಮೇಲೆ ಹೇರಬಾರದು ಎಂದು ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಆಶಾ ಕಾರ್ಯಕರ್ತೆಯ ನಗರ ಘಟಕ ಅಧ್ಯಕ್ಷರಾದ ವಿಜಯಲಕ್ಷ್ಮಿ ಆಚಾರ್ಯ, ಆಶಾ ಕಾರ್ಯಕರ್ತೆ ಯರಾದ ವಿರುಪಮ್ಮ,ಪಾರ್ವತಮ್ಮ,ಮಹಾದೇವಮ್ಮ,ಸರೋಜಬಾಯಿ,ದೀಪಾ,ಸುಮಾ,ಈರಮ್ಮ,ಅನ್ನಪೂರ್ಣ, ಕೆ.ಲಲಿತಾ, ರಂಗಮ್ಮ,ಗೌಸೀಯಾ ಸುನಂದಾ, ಸೇರಿದಂತೆ ಇತರರು ಇದ್ದರು

About Mallikarjun

Check Also

ಅಶೋಕಸ್ವಾಮಿ ಹೇರೂರಭೇಟಿ:ಕಾಂಗ್ರೆಸ್ಸಿಗರಿಂದಮತಯಾಚನೆ.

ಗಂಗಾವತಿ:ರಾಜ್ಯ ವಾಣಿಜೋಧ್ಯಮ ಮತ್ತು ಕೈಗಾರಿಕಾ ಸಂಸ್ಥೆಯ ನಿರ್ದೇಶಕ ಮತ್ತು ರಾಜ್ಯ ಔಷಧ ವ್ಯಾಪಾರಿಗಳ ಸಂಘದ ಉಪಾಧ್ಯಕ್ಷ ಅಶೋಕಸ್ವಾಮಿ ಹೇರೂರ ಅವರನ್ನು …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.