Breaking News

ಶಿಕ್ಷಣದ ಗುಣಮಟ್ಟದ ಜೊತೆಗೆ ಮಾನವೀಯ ಮೌಲ್ಯ ಒಳಗೊಂಡ ಶಾಲೆ – ಶ್ರೀ ಚೈತ್ಯಾನಂದ ಸ್ವಾಮೀಜಿ

caityānanda svāmījiA school with quality of education and human values ​​- Sri Chaityananda Swamiji

ಕೊಪ್ಪಳ: ಇಲ್ಲಿನ ನಂದಿನಗರದಲ್ಲಿರುವ ವಿದ್ಯಾಸರಸ್ವತಿ ಕಿರಿಯ ಪ್ರಾಥಮಿಕ ಶಾಲೆಯ ೮ನೇ ಶಾಲಾ ವಾಷಿ೯ಕೋತ್ಸವ ಸಮಾರಂಭದ ದಿವ್ಯ ಸಾನಿಧ್ಯವನ್ನು ವಹಿಸಿದ್ದ ರಾಮಕೃಷ್ಣ ಆಶ್ರಮದ ಶ್ರೀ ಚೈತ್ಯಾನಂದ ಸ್ವಾಮಿಗಳು ಮಾತನಾಡಿ, ವಿದ್ಯಾ ಸರಸ್ವತಿ ಶಾಲೆ ಶಿಕ್ಷಣ ಮತ್ತು ಮೌಲ್ಯ ಎರಡನ್ನೂ ಕಲಿಸುತ್ತಿದೆ ಎಂದರು.
ಸಮಾಜದಲ್ಲಿ ಬಹಳ ಮುಖ್ಯವಾಗಿ ಆಗುತ್ತಿರುವ ಧ್ವೇಷಮಯ ವಾತಾವರಣ ಹೋಗಲಾಡಿಸಲು ಶಾಲಾ ಹಂತದಲ್ಲಿಯೇ ಉತ್ತಮ ಮನಸ್ಸುಗಳನ್ನು ಕಟ್ಟಬೇಕು, ಜಾತಿ ಸಂಭೋದನೆ ನಿಲ್ಲಬೇಕು ಎಂದರು. ಉದ್ಘಾಟನೆ ನೆರವೇರಿಸಿದ ಸಮಾಜ ಸೇವಕ ಸಲೀಂ ಅಳವಂಡಿ ಮಾತನಾಡಿ, ಶಿಕ್ಷಣ ಎಂಬುದೇ ದಿವ್ಯ ಶಕ್ತಿ, ಅದನ್ನು ಪ್ರತಿಯೊಬ್ಬರೂ ಪಡೆದುಕೊಳ್ಳಲಿ ಎಂದರು. ವೇದಿಕೆಯಲ್ಲಿ ಶ್ರೀ ಪ್ಯಾಟಿ ಈಶ್ವರ ದೇವಸ್ಥಾನದ ಮಾಜಿ ಅಧ್ಯಕ್ಷ ಪತ್ರಪ್ಪ ಪಲ್ಲೇದ, ಇರಕಲ್ಲಗಡ ವಲಯದ ಶಿಕ್ಷಣ ಸಂಯೋಜಕ ವೈಶಂಪಾಯನ ಟಿ.ಸಿ., ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಹುಚ್ಚಮ್ಮ, ನಗರಸಭೆ ಸದಸ್ಯ ಮಲ್ಲಪ್ಪ ವೀರಪ್ಪ ಕವಲೂರು, ವೀರೇಶ ಮಹಾಂತಯ್ಯನಮಠ, ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಬಾಲನಾಗಮ್ಮ ಗೊಂಡಬಾಳ, ನಿವೃತ್ತ ಶಿಕ್ಷಕ ಸುರೇಶ ಚಿನ್ನುರ ಕೊಪ್ಪಳ, ಉದ್ಯಮಿ ಶ್ರೀಧರ ವೇಮಲಿ, ಹಿರಿಯ ಪತ್ರಕತ೯ ಮಂಜುನಾಥ ಜಿ. ಗೊಂಡಬಾಳ, ಪಾಲಕರ ಪ್ರತಿನಿಧಿ ಅಕ್ಬರ್ ಅಲಿ ಸಂಗಟಿ, ಈರಮ್ಮ ಪಕೀರಪ್ಪ ಯಲಬಗಾ೯, ಸಂಗೀತ ಶಿಕ್ಷಕ ಡಾ. ಚನ್ನಯ್ಯ ಹಿರೇಮಠ, ಮೀನಾಕ್ಷಮ್ಮ ಸಸಿಮಠ, ಸುವಣ೯ ಸಂಗಣ್ಣ ವೇಮಲಿ. ಅಧ್ಯಕ್ಷತೆಯನ್ನು ಶಿಕ್ಷಕಿ ಸಾಹಿತಿ ಅರುಣ ನರೇಂದ್ರ ವಹಿಸಿದ್ದರು.
ಪ್ರಾನೆಯನ್ನು ಶಾಲೆಯ ಅಪ್ಸಾ ಸಂಗಡಿಗರು ನೆರವೇರಿಸಿದರು. ಪ್ರಾಸ್ತಾವಿಕವಾಗಿ ಮುಖ್ಯ ಶಿಕ್ಷಕ ಚಿದಾನಂದ ಮಾತನಾಡಿದರು. ಬಹುಮಾನ ವಿತರಣೆಯನ್ನು ಶಿಕ್ಷಕಿಯರಾದ ಶೀಲಾ ಮತ್ತು ಜ್ಯೋತಿ ನೆರವೇರಿಸಿದರು, ಹಸೀನ ಎಸ್. ಬಿ. ನಿರೂಪಿಸಿದರು, ಚೈತ್ರ ಎಂ.ಜಿ. ವಂದಿಸಿದರು.

About Mallikarjun

Check Also

ದೇವರಾಜೇಗೌಡ ಬಿಜೆಪಿ ಕಾರ್ಯಕರ್ತ, ಬಿಜೆಪಿ-ಜೆಡಿಎಸ್ ನಾಯಕರ ಅಣತಿಯಂತೆ ನನ್ನ ವಿರುದ್ಧ ಸುಳ್ಳು ಅಪಾದನೆ: ಡಿಸಿಎಂ ಡಿ ಕೆ ಶಿವಕುಮಾರ್

ಡಿಸಿಎಂ ಮಾಧ್ಯಮ ಹೇಳಿಕೆ ಬೆಂಗಳೂರು, ಮೇ 6: ನನಗೂ ಪೆನ್ ಡ್ರೈವ್ ಬಿಡುಗಡೆ ಪ್ರಕರಣಕ್ಕೂ ಯಾವುದೇ ಸಂಬಂಧ ಇಲ್ಲ. ಬಿಜೆಪಿ …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.