Breaking News

ಮುಖ್ಯ ಶಿಕ್ಷಕ ದಿನೇಶ್ ಅಮಾನತ್ತಿಗೆ ದ ಸಂ ಸ ಹಾಗೂ ಎ ಎಸ್ ಎಸ್ ಕೆ ಸಂಘಟನೆಯಿಂದ ಬೃಹತ್ ಪ್ರತಿಭಟನೆ

Massive protest by the Samsa and ASSK organization against the suspension of head teacher Dinesh

ತಿಪಟೂರು ತಾಲ್ಲೂಕಿನ ಕಸಬಾ ಹೋಬಳಿ ತಡಸೂರು ಗ್ರಾಮದ ಸರ್ಕಾರಿ ಪ್ರೌಢಶಾಲೆ ಮುಖ್ಯ ಶಿಕ್ಷಕ ದಿನೇಶ್ ಇತ್ತೀಚೆಗೆ ನಡೆದ ರಾಜ್ಯ ಸರ್ಕಾರ ಹಾಗೂ ತುಮಕೂರು ಜಿಲ್ಲೆ ವತಿಯಿಂದ ಸಂವಿಧಾನ ಜಾಥ ಕಾರ್ಯಕ್ರಮ ತಡಸೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬಂದ ಸಂದರ್ಭದಲ್ಲಿ ದಲಿತ ಸಮುದಾಯದ ಮಕ್ಕಳನ್ನು ಸಂವಿಧಾನ ಜಾಗೃತಿ ಜಾತ ಕಾರ್ಯಕ್ರಮಕ್ಕೆ ಬರದಂತೆ ತಡೆಹಿಡಿದು ಬೆದರಿಕೆ ಹಾಕಿದ್ದಾರೆ ಹಾಗೂ ಆ ಸಂವಿಧಾನದ ಜಾಗೃತಿ ಜಾಥ ವೇದಿಕೆ ಕಾರ್ಯಕ್ರಮದಲ್ಲಿದ್ದ ಗಣ್ಯರು ಡಾ.ಅಂಬೇಡ್ಕರ್ ಭಾವಚಿತ್ರವುಳ್ಳ ನೀಲಿ ಶಾಲನ್ನು ಧರಿಸಿದ್ದರು ಆದರೆ ಈ ಮುಖ್ಯ ಶಿಕ್ಷಕ ಆ ಶಾಲನ್ನು ಧರಿಸದೆ ಸಂವಿಧಾನ ಶಿಲ್ಪಿ ಬಾಬಾ ಸಾಹೇಬರಿಗೆ ಅವಮಾನಿಸಿದನ್ನು ಖಂಡಿಸಿ ದ ಸಂ ಸ ಹಾಗೂ ಎ ಎಸ್ ಎಸ್ ಕೆ ತಿಪಟೂರು ತಾಲ್ಲೂಕು ಶಾಖೆ ವತಿಯಿಂದ ಮಿನಿವಿಧಾನಸೌಧ ಮುಂಭಾಗ ತಮಟೆ ಬಡೆಯುವ ಮುಖಾಂತರ ಬೃಹತ್ ಪ್ರತಿಭಟನೆ ನಡೆಸಿದರು.


ನಂತರ ಮಾತನಾಡಿದ ಯಗಚಿಗಟ್ಟೆ ರಾಘು ಶಾಲೆಯಲ್ಲಿ ವಿದ್ಯಾರ್ಥಿಗಳ ಮಧ್ಯೆ ಜಾತಿ ಎಂಬ ಬಿಜ ಬಿತ್ತರಿಸಿ ಮಕ್ಕಳಲ್ಲಿ ತಾರತಮ್ಯ ತೋರುತ್ತಿದ್ದು ಹಾಗೂ ಶಾಲೆಗೆ ಸರಿಯಾಗಿ ಬರದೆ ಆ ಶಾಲೆಯಲ್ಲಿ ಅವರ ಹೆಂಡತಿ ಸಹಶಿಕ್ಷಕೆಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಇಂತಹ ಮುಖ್ಯ ಶಿಕ್ಷಕ ದಿನೇಶ್ ರವರನ್ನು ಸರ್ಕಾರ ಅಮಾನತ್ತು ಮಾಡಿ ಕಾನೂನು ರೀತಿ ಕ್ರಮ ಜರುಗಿಸಿ ಎಂದರು
ಹಾಗೂ ಎ ಎಸ್ ಎಸ್ ಕೆ ತಾಲೂಕ್ ಅಧ್ಯಕ್ಷ ಶಿವಕುಮಾರ್ ಮಾತನಾಡಿ ತಿದ್ದಿ ಬುದ್ದಿ ಹೇಳಬೇಕಾದ ಶಿಕ್ಷಕ ದಲಿತ ಸಮುದಾಯದ ಮಕ್ಕಳಿಗೆ ತೊಂದರೆ ನೀಡುತ್ತಿದ್ದು ಸರ್ಕಾರದ ಮಹತ್ವಕಾಂಶಿಯ ಬಿಸಿಯೂಟದ ಯೋಜನೆಯಲ್ಲಿ ಮೊಟ್ಟೆ ವಿತರಿಸದೆ ಇಲ್ಲಿ ಹೋರಾಟದ ನಂತರ ಮೊಟ್ಟೆ ವಿತರಿಸುತ್ತಿದ್ದಾರೆ ಮೊಟ್ಟೆ ಬದಲಿಗೆ ಬಾಳೆಹಣ್ಣು ಕಡಲೆ ಮಿಠಾಯಿ ನೀಡುತ್ತಿರುವುದು ಕಂಡುಬಂದಿದ್ದು ಈ ವಿಚಾರವಾಗಿ ವಿದ್ಯಾರ್ಥಿಗಳು ಪ್ರಶ್ನೆ ಮಾಡಿದಾಗ ನೀವು ಮಾಂಸಾಹಾರಿಗಳು ನೀವು ಕಡ್ಲೆ ಮಿಠಾಯಿ ತಿನ್ನಿ ಎಂಬ ಉಡಾಫೆ ಉತ್ತರ ನೀಡುತ್ತಿದ್ದು ಇಂತಹ ಶಿಕ್ಷಕನನ್ನು ಕೂಡಲೆ ಸರ್ಕಾರ ಅಮಾನತು ಮಾಡಬೇಕು ಇಲ್ಲವಾದಲ್ಲಿ ದಲಿತ ಸಂಘಟನೆಗಳ ಒಕ್ಕೂಟದಿಂದ ಬೃಹತ್ ಪ್ರತಿಭಟನೆ ನಡೆಸಿ ತಿಪಟೂರು ಬಂದ್ ಮಾಡುತ್ತೇವೆ ಎಂದು ತಿಳಿಸಿದರು.
ಮನವಿ ಸ್ವೀಕರಿಸಿ ಮಾತನಾಡಿದ್ದ ತಾಲೂಕು ದಂಡಾಧಿಕಾರಿಗಳು ಈ ವಿಚಾರವಾಗಿ ಸಂಬಂಧಪಟ್ಟ ಅಧಿಕಾರಿಗಳ ಜೊತೆಗೂಡಿ ಮಾತನಾಡಿ ಕಾನೂನು ರೀತಿಯ ಕ್ರಮ ಜರುಗಿಸುತ್ತೇವೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ. ಕೊಪ್ಪ ಶಾಂತಪ್ಪ ದಲಿತ ಮುಖಂಡ ಕುಪ್ಪಾಳು ರಂಗಸ್ವಾಮಿ ಬಾಗುವಾಳ ನಿಂಗರಾಜ್ ಕುಮಾರ್ ಎ ಎಸ್ ಎಸ್ ಕೆ ತಾಲೂಕು ಉಪಾಧ್ಯಕ್ಷ ಗುರುಗದಹಳ್ಳಿ ಮಂಜು ಸಂಘಟನಾ ಅಧ್ಯಕ್ಷ ಅಶೋಕ್, ಬಳ್ಳೇಕೆರೆ ಬಸವರಾಜ್ ಸೇರಿದಂತೆ ದಲಿತ ಮುಖಂಡರುಗಳು ಹಾಜರಿದ್ದರು.

About Mallikarjun

Check Also

ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಮನೆಗೆ ಬೆಂಕಿ. ಅಪಾರ ಪ್ರಮಾಣದಲ್ಲಿ ನಷ್ಟ.

ತಿಪಟೂರು ತಾಲ್ಲೂಕಿನ ಕಿಬ್ಬನಹಳ್ಳಿ ಹೋಬಳಿ ಕುಪ್ಪಾಳು ಗ್ರಾಮ ಪಂಚಾಯತಿ ವ್ಯಾಪ್ತಿಯ ಕೊಟ್ಟಿಗೆಹಳ್ಳಿ ಗ್ರಾಮದ ದಲಿತ ಸಮುದಾಯದ ಕೆಂಪರಾಮಯ್ಯ ಸನ್ ಆಫ್ …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.