Breaking News

ಬೈಲಹೊಂಗಲ :ಕುಂಭ ಮೇಳದ ಮೂಲಕ ಮತದಾನ ಜಾಗೃತಿ

ತಾಲೂಕ ಸ್ವೀಪ್‌ ಸಮೀತಿ ಬೈಲಹೊಂಗಲ, ತಾಲೂಕಾ ಆಡಳಿತ, ತಾಲೂಕ ಪಂಚಾಯತ ಬೈಲಹೊಂಗಲ ಮತ್ತು “ಸಂಜೀವಿನಿ”-DAY-NRLM ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ತಾಲೂಕಿನ ಮಹಿಳಾ ಸ್ವಸಹಾಯ ಸಂಘದ ಪ್ರತಿನಿಧಿಗಳು ಹಾಗೂ ಸಂಜೀವಿನಿ ಒಕ್ಕೂಟಗಳ ಮುಂದಾಳತ್ವದಲ್ಲಿ ನಗರದಲ್ಲಿ “ಕುಂಬ ಮೇಳ” ದ ಮೂಲಕ ಸಾರ್ವಜನಿಕರಿಗೆ ಮತದಾನ ಜಾಗೃತಿಯನ್ನು ಮೂಡಿಸುವ ಸಲುವಾಗಿ ಚಾಲನೆಯನ್ನು ಮಾನ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಶ್ರೀ ಗಂಗಾಧರ ಕಂದಕೂರ ರವರು ಚಾಲನೆ ನೀಡಿದರು.
ತಾಲೂಕ ಪಂಚಾಯತಿ ಕಾರ್ಯಾಲಯದಲ್ಲಿ ಎಲ್ಲ ಮಹಿಳಾ ಸದಸ್ಯರುಗಳಿಂದ ಪ್ರತಿಜ್ಞಾ ವಿಧಿ ಭೋದನೆ ಮಾಡುವುದರ ಮೂಲಕವಾಗಿ ತಾಪಂ ಕಛೇರಿ ಮಾರ್ಗವಾಗಿ ಸಂಗೊಳ್ಳಿ ರಾಯಣ್ಣ ಸರ್ಕಲ್‌ ದಿಂದ ಚನ್ನಮ್ಮ ಸಮಾಧಿ ಮಾರ್ಗವಾಗಿ ಕೇಂದ್ರ ಬಸ್‌ ನಿಲ್ದಾಣದವರೆಗೆ ಮಹಿಳೆಯರು ಕುಂಭಗಳನ್ನು ತೇಗೆದುಕೊಂಡು ಚುನಾವಣೆ ಘೋಷವಾಕ್ಯಗಳನ್ನು ಹೇಳುತ್ತಾ ಜನಸಾಮಾನ್ಯರಿಗೆ ಮತದಾನ ಜಾಗೃತಿಯನ್ನು ಮಾಡಿದರು.
ಇದೇ ಸದರ್ಭದಲ್ಲಿ ಮತದಾನದ ಮಹತ್ವ ಹಾಗೂ ಹಕ್ಕುಗಳ ಕುರಿತು ಗಂಗಾಧರ ಕಂದಕೂರ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದರು ತಪ್ಪದೇ ಮೇ-07 ರಂದು ಮತದಾನ ಮಾಡಿ ಈ ಚುನಾವಣಾ ಪರ್ವ ದೇಶದ ಗರ್ವ ಎಂಬುದರಲ್ಲಿ ಎಲ್ಲ ಮತಭಾಂದವರು ತಪ್ಪದೇ ಮತ ನೀಡಿ ದೇಶ ಭದ್ರತೆಗೆ ಕೈಜೊಡಿಸಿ ಎಂದು ಕರೆ ನೀಡಿದರು.
ಪುರಸಭೆ ಮುಖ್ಯಾಧಿಕಾರಿ ವಿರೇಶ ಹಸಬಿ ಮಾತನಾಡಿ ಪಟ್ಟಣ ಹಾಗೂ ಗ್ರಾಮೀಣ ಪ್ರದೇಶದ ಎಲ್ಲ ಯುವ ಮತದಾರರು ಮಹಿಳೆಯರು ಹಿರಿಯನಾಗರಿಕರು ಹಾಗೂ ವಿಶೇಷ ಚೇತನರು ಸಂಘದ ಪ್ರತಿನಿಧಿಗಳು ಬರುವ ಲೋಕಸಭಾ ಚುನಾವಣೆಯಲ್ಲಿ ತಪ್ಪದೇ ಮತ ನೀಡಿ ಎಂದು ಕರೆ ನೀಡಿದರು.
ಉಪಸ್ಥೀತಿ, ತಾಪಂ ಸಹಾಯಕ ನಿರ್ದೇಶಕ (ನರೇಗಾ) ವಿಜಯ ಪಾಟೀಲ, ಸಹಾಯಕ ನಿರ್ದೇಶಕ (ಪಂ ರಾಜ) ರಘು ಬಿ ಎನ್‌, ತಾಪಂ ಯೋಜನಾಧಿಕಾರಿ ರಾಜಶೇಖರ ಕಡಮನಿ ಜಿಲ್ಲಾ ಸಂಯೋಜಕ ಎಮ್‌ ಆರ್‌ ಮರಿಗೌಡರ ತಾಪಂ ವಿಷಯ ನಿರ್ವಾಹಕ ಎಸ್‌ ಬಿ ಸಂಗನಗೌಡರ್‌, ಬಿ ಆಯ್‌ ಗುಡಿಮನಿ,ಎಮ್‌ ಆಯ್‌ ಕುಟ್ರಿ ಬಸವರಾಜ ಮುನವಳ್ಳಿ ರಮೇಶ ಮುನೆನ್ನಿ ಎಸ್‌ ವ್ಹಿ ಹಿರೇಮಠ ಪ್ರಕಾಶ ಗುಂಡಗಾಂವಿ, ಸಚೀನ ಗುರವಣ್ಣವರ, ನಾಗನಗೌಡ್‌ ಪಾಟೀಲ ಬಸಮ್ಮ ಸಂಬರಗಿ, ಗೌರಮ್ಮ ಮೊದಗಿ ಸೋಮನಾಥ ಹುನಗುಂದ ಸಂತೋಷ್‌ ಹುಲಮನಿ, ಪ್ರದೀಪ್‌ ಮುರಗೋಡ, ಮಹೇಶ ಕರಿಕಟ್ಟಿ ಈಶ್ವರ ನೆಲ್ಲಿಗಣಿ ಹಾಗೂ ತಾಪಂ ಸಿಬ್ಬಂದಿ ವರ್ಗ, ಪೋಲಿಸ ಇಲಾಖೆಯ ಸಿಬ್ಬಂದಿ ವರ್ಗ, ಪುರಸಭೆ ಸಿಬ್ಬಂದಿಗಳು ಹಾಗೂ ತಾಲೂಕಿನ ಸಂಜೀವಿನಿ ಯೋಜನೆಯ ಎಮ್‌ ಬಿ ಕೆ ಹಾಗೂ ಎಲ್‌ ಸಿ ಆರ್‌ ಪಿ, ಪಶು ಸಖಿ ಕೃಷಿ ಸಖಿ ಹಾಗೂ ಸ್ವಸಹಾಯ ಸಂಘದ ಸದಸ್ಯರುಗಳು ಹಾಜರಿದ್ದರು.

About Mallikarjun

Check Also

ಮತದಾನ ಮಾಡದವರ ಪೌರತ್ವ ನಿಷೇಧಿಸಿ: ಸಗ್ರೀವಾ

ಗಂಗಾವತಿ.ಮೇ.06: ಲೋಕಸಭಾ ಚುನಾವಣೆ ನಿಮಿತ್ತ ಮೇ.07ರಂದು ನಡೆಯುವ ಮತದಾನದಲ್ಲಿ ಎಲ್ಲರೂ ಉತ್ಸಾಹದಿಂದ ಪಾಲ್ಗೊಂಡು ಮತ ಚಲಾಯಿಸಬೇಕು. ಮತದಾನ ಮಾಡದೆ ಹೊರ …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.