Breaking News

ಫೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾದ ತಕ್ಷಣ ಬಂಧಿಸುವ ಅಗತ್ಯವಿಲ್ಲ : ಮಾಜಿ ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ

There is no need to arrest as soon as a case is registered under the FOXO Act: Former Law Minister J.C. Madhuswami

ಬೆಂಗಳೂರು, ಮಾ, 16; ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಡಿ ಹುಲಿಯೂರು ದುರ್ಗದ ವಿದ್ಯಾಚೌಡೇಶ್ವರಿ ಮಠದ ಪೀಠಾಧಿಪತಿ ಬಾಲ ಮಂಜುನಾಥ ಸ್ವಾಮೀಜಿ ಅವರನ್ನು ಬಂಧಿಸಿರುವ ಬೆನ್ನಲ್ಲೇ ಇದೇ ರೀತಿಯ ಆರೋಪ ಹೊತ್ತಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್.‌ ಯಡಿಯೂರಪ್ಪ ಅವರ ಬಂಧನ ಏಕಿಲ್ಲ ಎಂಬ ಪ್ರಶ್ನೆ ಚೌಡೇಶ್ವರಿ ಮಠದ ಭಕ್ತ ಸಮೂಹದಿಂದ ಕೇಳಿ ಬಂದಿದೆ.

ಸ್ವಾಮೀಜಿ ವಿರುದ್ಧ ಷಡ್ಯಂತ್ರ ನಡೆಯುತ್ತಿದ್ದು, ಸೂಕ್ತ ರೀತಿಯಲ್ಲಿ ವಿಚಾರಣೆ ನಡೆಸದೇ ಬಂಧಿಸಲಾಗಿದೆ. ಇದರಲ್ಲಿ ರಾಜಕೀಯ ಷಡ್ಯಂತ್ರ ಅಡಗಿದೆ ಎಂದು ಮಠದ ಭಕ್ತರು ಆರೋಪಿಸಿದ್ದಾರೆ.

ಈ ‍ಮಧ್ಯೆ ಮಾಜಿ ಕಾನೂನು ಸಚಿವ ಹಾಗೂ ಬಿಜೆಪಿ ಹಿರಿಯ ಮುಖಂಡ ಜೆ. ಸಿ.ಮಾಧುಸ್ವಾಮಿ ಮಾತನಾಡಿ, ಫೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾದ ತಕ್ಷಣ ಆರೋಪಿಯನ್ನು ಬಂಧಿಸಲೇಬೇಕು ಅಂತ ಏನಿಲ್ಲ ಎಂದು ಹೇಳಿದ್ದಾರೆ.

ಬಿ.ಎಸ್ ಯಡಿಯೂರಪ್ಪ, ಹಾಗೂ ವಿದ್ಯಾ ಚೌಡೇಶ್ವರಿ ಮಠದ ಪೀಠಾಧಿಪತಿಗಳಾದ ಬಾಲ ಮಂಜುನಾಥ ಸ್ವಾಮೀಜಿ ವಿರುದ್ಧ ಫೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿರುವ ಬೆನ್ನೆಲ್ಲೇ ಜೆ.ಸಿ. ಮಾಧುಸ್ವಾಮಿ ಈ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ.

ಯಡಿಯೂರಪ್ಪ ಅವರ ವಿರುದ್ಧ ನೀಡಿರುವ ದೂರು ಗಂಭೀರವಾದದ್ದಲ್ಲ. ದೂರು ನೀಡಿದಾಕೆ ಈಗಾಗಲೇ 53 ಮಂದಿ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಇದು ದುರುದ್ದೇಶದಿಂದ ನೀಡಿರುವ ದೂರು. ಇದು ಗಂಭೀರ ಹಂತಕ್ಕೆ ಹೋಗುವುದಿಲ್ಲ ಎಂದು ಭಾವಿಸಿದ್ದೇನೆ. ದೂರು ನೀಡಿರುವವರಿಗೆ ಮಾನಸಿಕ ಸ್ಥಿಮಿತ ಇಲ್ಲ ಎಂಬುದು ಈಗಾಗಲೇ ತಿಳಿದು ಬರುತ್ತದೆ ಎಂದು ಹೇಳಿದ್ದಾರೆ.

ಕಾನೂನಿನಲ್ಲಿ ದೂರು ಸ್ವೀಕರಿಸದೇ ಇರಲು ಸಾಧ್ಯವೇ ಇಲ್ಲ. ಕಾನೂನು ಇರುವುದೇ ಹಾಗೆ. ಆದರೆ ಯಡಿಯೂರಪ್ಪ ವಿರುದ್ಧ ಇದು ಒಂದು ರೀತಿಯಲ್ಲಿ ತೇಜೋವಧೆಯಾಗಿದೆ. ಒಳ್ಳೆಯವರೋ, ಕೆಟ್ಟವರೋ ಯಾರೇ ದೂರು ನೀಡಿದರೂ ಸ್ವೀಕರಿಸಬೇಕಾಗುತ್ತದೆ. ಯಾರು ದೂರು ನೀಡಿದ್ದಾರೆ ಎಂಬುದು ಮುಖ್ಯವಲ್ಲ. ಪ್ರಕರಣ ದಾಖಲಾದ ನಂತರ ಬಂಧಿಸಬೇಕಿಲ್ಲ. ಆದರೆ ಬಂಧಿಸಬೇಕೋ ಅಥವಾ ಬೇಡವೋ ಎಂಬುದು ಪೊಲೀಸರ ವಿವೇಚೆನೆಗೆ ಬಿಟ್ಟದ್ದು ಎಂದು ಮುಗುಮ್ಮಾಗಿ ಹೇಳಿದರು.

ವಿದ್ಯಾ ಚೌಡೇಶ್ವರಿ ಮಠದ ಪೀಠಾಧಿಪತಿಗಳಾದ ಬಾಲ ಮಂಜುನಾಥ ಸ್ವಾಮಿಜೀ ಬಂಧನಕ್ಕೂ ಇದು ಅನ್ವಯವಾಗಲಿದೆ ಎಂದು ಮಾಜಿ ಕಾನೂನು ಸಚಿವ ಹಾಗೂ ಬಿಜೆಪಿ ಹಿರಿಯ ಮುಖಂಡ ಜೆ. ಸಿ.ಮಾಧುಸ್ವಾಮಿ ಹೇಳಿರುವುದು ಅತ್ಯಂತ ಮಹತ್ವ ಪಡೆದುಕೊಂಡಿದೆ.

ರಾಜ್ಯದಲ್ಲಿ ಹೆಸರುವಾಸಿಯಾಗಿರುವ ಶ್ರೀ ವಿದ್ಯಾ ಚೌಡೇಶ್ವರಿ ದೇವಸ್ಥಾನಕ್ಕೆ ಲಕ್ಷಾಂತರ ಬಕ್ತರು ಬಂದು ತಾಯಿ ಚೌಡೇಶ್ವರಿ ದೇವಿಯ ಕೃಪೆಗೆ ಪಾತ್ರರಾಗಿದ್ದಾರೆ. ಇದರ ಹಿನ್ನೆಲೆ ಕೆಲವು ನಕಲಿ ಜ್ಯೋತಿಷ್ಯರು ಶ್ರೀ ಬಾಲ ಮಂಜುನಾಥ ಸ್ವಾಮಿಯವರ ವಿರುದ್ಧ ಪಿತೂರಿ ನಡೆಸಿದ್ದಾರೆ ಎಂಬುದು ಭಕ್ತರ ಆರೋಪವಾಗಿದೆ.

About Mallikarjun

Check Also

ಖೊಟ್ಟಿ ದಾಖಲೆ ಸೃಷ್ಟಿಸಿ, ಬಿಪಿಎಲ್ ಪಡಿತರ ಚೀಟಿ ಪಡೆದಿದ್ದ ಬಿಜೆಪಿ ಮುಖಂಡನ ವಿರುದ್ಧ ದೂರು ದಾಖಲು, ದಂಡವಸೂಲಿ.

ಕಾರಟಗಿ: ತಾಲೂಕಿನ ಸಿದ್ಧಾಪುರ ಗ್ರಾಮದ ಬಿಜೆಪಿ ಮುಖಂಡ ಆಗಿರುವ ಮಹಿಬೂಬ್ ಸಾಬ್ ಮುಲ್ಲಾ (ಎಂ.ಡಿ.ಎಸ್) ತಂದೆ ಮೋದಿನ್ ಸಾಬ್ ಈತನು …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.