Celebration of the 5th anniversary of the Nasha Mukt Bharat Abhiyaan scheme
ನಶಾಮುಕ್ತ ಭಾರತ ಅಭಿಯಾನ ಯೋಜನೆಯ 5ನೇ ವಾರ್ಷಿಕೋತ್ಸವವನ್ನು ಆಚರಣೆ.
ಗಂಗಾವತಿ: ತಾಲೂಕಿನ ಹಾಲು ಒಕ್ಕೂಟದ ಉಪಕಚೇರಿಯಲ್ಲಿ ನಶಾ ಮುಕ್ತ ಭಾರತ ಅಭಿಯಾನ (NAPDDR) ಯೋಜನೆಯು ಪ್ರಾರಂಭವಾಗಿ 5 ವರ್ಷಗಳು ಪೂರೈಸಿರುವ ಹಿನ್ನೆಲೆಯಲ್ಲಿ 5ನೇ ವರ್ಷದ ವಾರ್ಷಿಕೋತ್ಸವ ಅಂಗವಾಗಿ ರೈಚೂರು ಬಳ್ಳಾರಿ ಕೊಪ್ಪಳ ಹಾಗೂ ವಿಜಯನಗರ ಜಿಲ್ಲೆ ಹಾಲು ಒಕ್ಕೂಟ ಬಳ್ಳಾರಿ ಉಪಾಧ್ಯಕ್ಷರಾದ ಎನ್. ಸತ್ಯನಾರಾಯಣ ಇವರು ಭಾರತದ ಪ್ರಧಾನ ಮಂತ್ರಿಗಳ ನೇತೃತ್ವದಲ್ಲಿ ಅಕ್ಟೋಬರ್ ಕೊನೆಯವಾರ ಅಥವಾ ನವೆಂಬರ್ ಮೊದಲ ವಾರದಲ್ಲಿ ಆಯೋಜಿಸಲು ತೀರ್ಮಾನಿಸಲಾಗಿದ್ದ ಅದರ ಅಂಗವಾಗಿ, ಜುಲೈ 1 ರಂದು ಉಪ ಕಚೇರಿಯಲ್ಲಿ ಸಸಿ ನೆಡುವ ಮೂಲಕ ನಾಶ ಮುಕ್ತ ಭಾರತ ಅಭಿಯಾನ ಯೋಜನೆ ಐದನೇ ವಾರ್ಷಿಕೋತ್ಸವದ ಆಚರಣೆ ಮಾಡಿದರು. ಈ ಸಂದರ್ಭದಲ್ಲಿ ತಾಲೂಕು ವಿಸ್ತರಣ ಅಧಿಕಾರಿಗಳಾದ ಗವಿ ಸಿದ್ದಪ್ಪ, ದೇವೇಂದ್ರಪ್ಪ, ಪಶು ವೈದ್ಯರಾದ ರಘುವೀರ್ , ಕಚೇರಿಯ ಅಧಿಕಾರಿಗಳು ಸಹಾಯಕರಾದ ರಮೇಶ್, ರೇವಣಪ್ಪ, ತಾಲೂಕು ಹಾಲು ಉತ್ಪಾದಕರ ಸಹಕಾರ ಸಂಘಗಳ ಕಾರ್ಯದರ್ಶಿಗಳು ಭಾಗಿಯಾಗಿದ್ದರು.


