Koppal City Municipal Council: Applications invited for the registration of Bharat Jodo Youth Associations.
ಕೊಪ್ಪಳ ನಗರಸಭೆ: ಭಾರತ್ ಜೋಡೊ ಯುವಸಂಘಗಳ ನೋಂದಣಿಗೆ ಅರ್ಜಿ ಆಹ್ವಾನ


ಕೊಪ್ಪಳ ಆಗಸ್ಟ್ 17, (ಕರ್ನಾಟಕ ವಾರ್ತೆ): ಕೊಪ್ಪಳ ನಗರಸಭೆ ವ್ಯಾಪ್ತಿಯಲ್ಲಿ ಒಟ್ಟು 11 ಭಾರತ್ ಜೋಡೊ ಯುವಸಂಘಗಳನ್ನು ಸ್ಥಾಪಿಸಲಾಗಿದ್ದು, ಸದಸ್ಯರ ನೋಂದಣಿಗಾಗಿ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ಯುವಜನರಲ್ಲಿ ಕ್ರೀಡೆ, ಸಂಸ್ಕೃತಿ, ವೈಜ್ಞಾನಿಕ ಮನೋಭಾವ ಮತ್ತು ಸಾಮುದಾಯಿಕ, ಸಾಮಾಜಿಕ ಸಾಮರಸ್ಯ ಉತ್ತೇಜಿಸಲು ಕೊಪ್ಪಳ ನಗರಸಭೆಯ ಎಲ್ಲಾ ವಾರ್ಡಗಳ ವ್ಯಾಪ್ತಿಯಲ್ಲಿ ಸರಾಸರಿ 8,000 ಜನಸಂಖ್ಯೆಗೆ ಒಂದರAತೆ ಒಟ್ಟು 11 ಭಾರತ್ ಜೋಡೊ ಯುವಸಂಘಗಳನ್ನು ಸರ್ಕಾರದ ಆದೇಶದನುಸಾರ ಸ್ಥಾಪಿಸಲಾಗಿದ್ದು, ಈ ಸಂಘಗಳಿಗೆ ಮಾರ್ಗದರ್ಶಕರನ್ನು ನೇಮಿಸಲಾಗಿರುತ್ತದೆ.
ಕರ್ನಾಟಕ ಸರ್ಕಾರದ ಹೊಸ ಉಪಕ್ರಮವಾದ ಭಾರತ್ ಜೋಡೋ ಯುವ ಸಂಘದ ಮೂಲಕ ರಾಜ್ಯದ ಯುವಕರನ್ನು ಒಂದೇ ವೇದಿಕೆಯಲ್ಲಿ ಒಗ್ಗೂಡಿಸಿ ನಾಯಕತ್ವದ ಗುಣಗಳನ್ನು ಬೆಳೆಸುವ ಮತ್ತು ಸಮಾಜದಲ್ಲಿ ಸಕಾರಾತ್ಮಕ ಬದಲಾವಣೆ ತರುವ ಉದ್ದೇಶದಿಂದ ಕೊಪ್ಪಳ ನಗರದ ಎಲ್ಲಾ 16 ರಿಂದ 35 ವರ್ಷದೊಳಗಿನ ಸ್ಥಳೀಯ ನಿವಾಸಿಗಳು ಈ ಸಂಘದ ಸದಸ್ಯರಾಗಲು ಅರ್ಹರಿರುತ್ತಾರೆ. ಪ್ರತಿಯೊಂದು ಸಂಘಗಳಿಗೆ ವಾರ್ಷಿಕವಾಗಿ ಆಡಳಿತಾತ್ಮಕ ಹಾಗೂ ಇನ್ನಿತರೆ ಚಟುವಟಿಕೆಗಾಗಿ ರೂ.10 ಲಕ್ಷಗಳ ಅನುದಾನವನ್ನು ಕಾಯ್ದಿರಿಸಲಾಗಿದ್ದು, ನಗರದ ಎಲ್ಲಾ 16 ರಿಂದ 35 ವರ್ಷದೊಳಗಿನ ಯುವಕ ಹಾಗೂ ಯುವತಿಯರು ಬಿಜಿವೈಎಸ್ ಪೋರ್ಟಲ್ http://bjys.karnataka.gov.in/ ಹಾಗೂ ಮೊಬೈಲ್ ಆಪ್ ಮೂಲಕ ಅಥವಾ ಸ್ಥಳೀಯ ಕರ್ನಾಟಕ ಒನ್ ಹಾಗೂ ನಾಗರಿಕ ಸೇವಾ ಕೇಂದ್ರಗಳ ಸಹಾಯದಿಂದ ಸಂಘಕ್ಕೆ ಸೇರಲು ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ.
ಅರ್ಜಿ ನೋಂದಣಿಗೆ ಆಧಾರ್ ಕಾರ್ಡ್ ಕಡ್ಡಾಯವಾಗಿದ್ದು, ಪ್ರತಿ ಸದಸ್ಯರಿಗೆ ರೂ.100 ನೋಂದಣಿ ಶುಲ್ಕವನ್ನು ನಿಗದಿಪಡಿಸಲಾಗಿದ್ದು, ನಗರದ ಎಲ್ಲಾ ಯುವಕ, ಯುವತಿಯರು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿ ನೋಂದಣಿ ಮಾಡಿಕೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ ನಗರಸಭೆ ಕಂದಾಯಾಧಿಕಾರಿಗಳನ್ನು ಸಂಪರ್ಕಿಸಬಹುದು ಎಂದು ನಗರಸಭೆ ಪೌರಾಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.





